ಕೊರೊನಾಗೆ ಲಾಕ್‌ಡೌನ್‌ ಪರಿಹಾರವಲ್ಲ ಎಂದರಿತ ಸರ್ಕಾರ; ಕೊರೊನಾ ನಿಯಂತ್ರಣಕ್ಕೆ ಮುಂದೇನು ಮಾಡಲಿದೆ?

ಕರ್ನಾಟಕದಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಲೇ. ಯಾವ ಲಾಕ್‌ಡೌನ್‌ಗೂ ಬಗ್ಗದ ಸೋಂಕು ತನ್ನ ಪರಾಕಾಷ್ಟೆಯನ್ನು ಮೆರೆಯುತ್ತಿದೆ. ಆದರೂ, ಕೊರೊನಾ ನಿಯಂತ್ರಣಕ್ಕೆ ಸರಿಯಾದ ಯೋಜನೆಗಳನ್ನು ರೂಪಿಸಿಕೊಳ್ಳದ ಸರ್ಕಾರ ಲಾಕ್‌ಡೌನ್ ‌ನ ಮೊರೆ ಹೋಗುತ್ತಲೇ ಇದೆ.

ಇಂದಿಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಧಾರಾವಾಡ, ಬೆಳಗಾವಿ ಜಿಲ್ಲೆಗಳು, ರಾಯಚೂರು ಹಾಗೂ  ಯಾದಗಿರಿ ಜಿಲ್ಲೆಯ ಕೆಲವು ಭಾಗುಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಕಳೆದ ಮಂಗಳವಾರ ರಾತ್ರಿಯಿಂದ ಆರಂಭವಾದ ಲಾಕ್​ಡೌನ್​​​​​​​​ ಜುಲೈ 22ರಂದು ಬೆಳಗ್ಗೆ 5ಗಂಟೆಗೆ ಮುಕ್ತಾಯವಾಗಲಿದೆ. ಲಾಕ್‌ಡೌನ್‌ ಆಗಿದ್ದ ಈ ಒಂದು ವಾರದಲ್ಲೂ ಕೊರೊನಾ ಸೋಂಕಿತರ ಪ್ರಮಾಣವೇನೂ ಕಡಿಮೆಯಾಗಿಲ್ಲ.

ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಕೊರೊನಾ ಕೇಸ್​ಗಳು ಹೆಚ್ಚಳವಾಗುತ್ತಿದ್ದಂತೆ ಲಾಕ್​ಡೌನ್​​ಗಾಗಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.  ಇದಕ್ಕೆ ಮಣಿದ ರಾಜ್ಯ ಸರ್ಕಾರ ಲಾಕ್​ಡೌನ್​ ಕೂಡ ಮಾಡಿತ್ತು. ಹೀಗಾಗಿ, ಒಂದು ವಾರಗಳ ಲಾಕ್​ಡೌನ್​ ಬಳಿಕ ರಾಜ್ಯ ಸರ್ಕಾರದ ಮುಂದೆ ಹಲವು ಪ್ರಶ್ನೆಗಳು ಎದ್ದಿವೆ. ರಾಜ್ಯ ಸರ್ಕಾರ ಲಾಕ್​ಡೌನ್​ ಮುಂದುವರೆಸುವ ಬಗ್ಗೆ ಆಸಕ್ತಿ ಕಳೆದುಕೊಂಡಿದೆ. ಮತ್ತೊಂದು ಕಡೆಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇದರಿಂದಾಗಿ ಲಾಕ್‌ಡೌನ್​ನಿಂದ ಯಾವುದೇ ಲಾಭ ಇಲ್ಲ ಎಂಬುದನ್ನು ಸರ್ಕಾರ ಮನಗಂಡಿದೆ.

ಲಾಕ್‌ಡೌನ್‌ ಕೂಡ ಉಪಯೋಗಕ್ಕೆ ಬಾರದ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹರಸಾಹಸ ಪಡುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಮತ್ತೇನು ಮಾಡುವುದು ಎಂದು ತಜ್ಞರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸಲಾಗುತ್ತಿದೆ. ಲಾಕ್‌ಡೌನ್‌ ಹೊರತಾಗಿ ಪರ್ಯಾಯ ಮಾರ್ಗಗಳೇನು ಅನ್ನುವ ಬಗ್ಗೆ ದೊಡ್ಡ ಮಟ್ಟದ ಚಿಂತನೆ ನಡೆಯುತ್ತಿವೆ.

ಲಾಕ್‌ಡೌನ್‌ ಹೊರತಾಗಿ ಮತ್ತಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲು ಇಂದು (ಸೋಮವಾರ) ಸಂಜೆ ಸಿಎಂ ಯಡಿಯೂರಪ್ಪ ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇದಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳು ಹೊರಬೀಳಲಿವೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಂಡುಕೊಳ್ಳುವ ಪರ್ಯಾಯ ಮಾರ್ಗ ಯಾವುದು ಅನ್ನುವ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿದೆ.


ಇದನ್ನೂ ಓದಿ:  ಕಲಬುರ್ಗಿ ಆಸ್ಪತ್ರೆಯಲ್ಲಿ ಹಂದಿಗಳ ಆಟ; ರಾಷ್ಟ್ರೀಯ ಸುದ್ದಿಮಾಡಿದ್ದಕ್ಕೆ ಬಿಜೆಪಿಗೆ ಅಭಿನಂದನೆ: ಪ್ರಿಯಾಂಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights