ಚಳಿಯ ನೆಪವೊಡ್ಡಿ ಮುಖ ಮುಚ್ಚಿಕೊಂಡ ಖತರ್ನಾಕ ಕಳ್ಳಿಯರ ಕೈಚಳಕ
ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ಕಳ್ಳಿಯರು ಕೈಚಳಕ ತೋರಿಸಿ ನಾಲ್ಕುವರೆ ಲಕ್ಷ ಹಣವನ್ನು ಕದಿದ್ದಾರೆ. ಹೌದು.. ಜನವರಿ 2 ರಂದು ಬೆಳ್ಳಂಬೆಳಿಗ್ಗೆ 5 ಗಂಟೆಯ ಸುಮಾರಿಗೆ ಚಳಿಯ ನೆಪದಿಂದ ಮುಖಕ್ಕೆ ಬೆಡ್ ಶೀಟ್ ಮುಚ್ಚಿಕೊಂಡು ಬಟ್ಟೆ ಅಂಗಡಿಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿ ಬಂದಿದೆ.
ನಗರದ ಚಿಕ್ಕಪೇಟೆಯಲ್ಲಿರುವ ಬೈರಪ್ಪ ಆಂಡ್ ಸಿಲ್ಕ್ಸ್ ಬಟ್ಟೆ ಅಂಗಡಿಯ 5 ಜನ ಕಳ್ಳಿಯರಿಂದ ಕಳ್ಳತನವಾಗಿದೆ. ಜನವರಿ 2 ರಂದು ಬೆಳಿಗ್ಗೆ ಚಳಿಯಿಂದ ನಡುಗುತ್ತಿರುವಂತೆ ನಾಟಕವಾಡಿಕೊಂಡು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅಂಗಡಿ ಮುಂದೆ ನೋಡುಗರಿಗೆ ಭಿಕ್ಷುಕರಂತೆ ಕುಳಿತಿದ್ದ ಕಳ್ಳಿಯರು ಯಾರು ಇಲ್ಲದನ್ನ ಗಮನಿಸಿದ್ದಾರೆ. ನಂತರ ಬೆಡ್ ಶೀಟ್ ಅಡ್ಡಲಾಗಿ ಹಿಡಿದು ಕ್ಷಣಾರ್ಧದಲ್ಲಿ ಬೀಗ ಮುರಿದ ಕಳ್ಳಿಯರು ನಾಲ್ಕುವರೆ ಲಕ್ಷ ಹಣವನ್ನ ಕಳ್ಳತನ ಮಾಡಿದ್ದಾರೆ.
ಸ್ವಲ್ಪ ಸಮಯದಲ್ಲಿ ಅಂಗಡಿ ಮಾಲಿಕ ಬಂದು ನೋಡಿದಾಗ ಈ ಖತರ್ನಾಕ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದ್ದು. ಇದೇ ರೀತಿಯ ಕಳ್ಳತನದ ಪ್ರಕರಣಗಳು ಸುತ್ತ ಮುತ್ತ ಪ್ರದೇಶದಲ್ಲಿ ದಾಖಲಾಗಿರುವುದು ತಿಳಿದು ಬಂದಿದ್ದು. ಕಳ್ಳಿಯರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
