KSRTC ಹೊಸ ಪ್ರಯೋಗ: ಮಹಿಳಾ ಶೌಚಾಲಯಗಳಾದ ಗುಜರಿ ಸೇರಬೇಕಿದ್ದ ಬಸ್ಗಳು!
ಕರ್ನಾಟಕ ರಾಜ್ಯ ಸಾರಿಗೆ KSRTC ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಜನರಿಂದ ಮೆಚ್ಚುಗೆ ಪಡೆಯುತ್ತಿದೆ. ಕಳೆದ ವರ್ಷ ಸುಳ್ಳು ಕರಕಲಾಗಿದ್ದ ಬಸ್ವೊಂದನ್ನು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಮಧ್ಯ ಭಾಗದಲ್ಲಿ ನಿಲ್ಲಿಸಿ, ಹಲವು ಪ್ರಶ್ನೆಗಳುಳ್ಳು ಬ್ಯಾನರ್ಗಳನ್ನು ಅಂಟಿಸಿ, ಜನರ ಆವೇಶಕ್ಕೆ ಬೆಂಕಿಗಾಹುತಿಯಾಗುವ ಸಾರ್ವಜನಿಕ ಬಸ್ಗಳ ಬಗ್ಗೆ ಅರಿವು ಮೂಢಿಸಿದ್ದ ಕೆಎಸ್ಆರ್ಟಿಸಿ, ಮತ್ತದೇ ಬಸ್ ನಿಲ್ದಾಣದಲ್ಲಿ ಮತ್ತೊಂದು ಹೊಸ ರೀತಿಯ ಪ್ರಯೋಗ ಮಾಡಿದೆ.
ಹಳೆಯದಾಗಿ ಗುಜರಿ ಸೇರಬೇಕಾದ ಬಸ್ಗಳನ್ನು ಬಳಿಸಿ ಮಹಿಳೆಯರಿಗಾಗಿ ಸುಸಜ್ಜಿತವಾಗಿ ಶೌಚಾಲಯ ಸೇರಿದಂತೆ ಮಹಿಳೆಯರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಹಳೆಯ ಬಸ್ಗಳನ್ನು ಬಳಸಿ ಅವುಗಳನ್ನು ಮಹಿಳೆಯರ ಶೌಚಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಆ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ವಾಷ್ ಬೇಸಿನ್ ಗಳು, ಸೆನ್ಸಾರ್ ದೀಪಗಳನ್ನು ಅಳವಡಿಸಲಾಗಿದ್ದು, ಸಂಪೂರ್ಣ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.

ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರೂ.ವೆಚ್ಚವಾಗಿದೆ. ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ ಬಸ್ಸಿನಲ್ಲಿ ನಿರ್ಮಿಸಲಾಗಿದೆ. ನಿಗಮವು ಹಲವು ಮಹಿಳಾ ಸ್ನೇಹಿ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಹೇಳಿದ್ದಾರೆ.

Read Also: ಪರ ಪುರುಷನ ಸ್ನೇಹ ಒಪ್ಪದ ಕುಟುಂಬಸ್ಥರಿಂದ ಮಹಿಳೆಯ ತಲೆಬೋಳಿಸಿ ಮೆರವಣಿಗೆ..

