ಡಿಸ್‌ಲೈಕ್, ಕಮೆಂಟ್‌ಗಳನ್ನು ಅಳಿಸಬಹುದು, ನಮ್ಮ ಧ್ವನಿಯನ್ನಲ್ಲ: ಮೋದಿ ವಿರುದ್ಧ ರಾಹುಲ್ ಕಿಡಿ

ಪ್ರಧಾನಿ ಮೋದಿಯವರು ಆಗಸ್ಟ್‌ ತಿಂಗಳ ಮನ್‌ ಕಿ ಬಾತ್‌ ವಿರುದ್ಧ ದೇಶದ ಯುವಜನರು ಡಿಸ್‌ಲೈಕ್‌ ಅಭಿಯಾನ ಆರಂಭಿಸಿದ್ದರು. ಇದರಿಂದಾಗಿ ಮೋದಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮಕ್ಕೆ ಯೂಟ್ಯೂಬ್‌ನಲ್ಲಿ 100 ಲಕ್ಷ (ಹತ್ತು ಮಿಲಿಯನ್) ಡಿಸ್‌ಲೈಕ್‌ ಬಂದಿದ್ದ ಹಿನ್ನೆಲೆಯಲ್ಲಿ ಬಿಜೆಪಿಯ ಯೂಟ್ಯೂಬ್‌  ಪೇಜ್​ನಲ್ಲಿ ಡಿಸ್​ಲೈಕ್​ ಹಾಗೂ ಕಮೆಂಟ್​ ಸೆಕ್ಷನ್​ ಹೈಡ್​ ಮಾಡಲಾಗಿದೆ.

ಈ ಬಗ್ಗೆ ಬಿಜೆಪಿ ಮತ್ತು ಮೋದಿ ಸರ್ಕಾರ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್‌ ಮುಖಂಡ ರಾಹುಲ್​ ಗಾಂಧಿ, ನೀವು ಯೂಟ್ಯೂಬ್​ ಪೇಜ್​ನ ಡಿಸ್​​ಲೈಕ್ ಮತ್ತು​ ಕಮೆಂಟ್​ ವಿಭಾಗವನ್ನ ಅಳಿಸಬಹುದು ಅಥವಾ ಹೈಡ್‌ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ಮುಂದೂಡಿ ಎಂದು ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದರು. ಹಲವು ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಮೋದಿಯವರಿಗೆ ಪತ್ರವನ್ನೂ ಬರೆದಿದ್ದರು. ಸುಪ್ರೀಂ ಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಪರೀಕ್ಷೆಗಳನ್ನು ಮುಂದೂಡದ ಸರ್ಕಾರ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಪರೀಕ್ಷೆಗಳನ್ನು ನಡೆಸುತ್ತಿದೆ.

ಅಲ್ಲದೆ, ಆಗಸ್ಟ್‌ 30ರಂದು ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಪರೀಕ್ಷೆಗಳ ಬಗ್ಗೆ ಮಾತನಾಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಆಟಿಕೆಗಳ ಬಗ್ಗೆ ಮಾತನಾಡಿದ ಪ್ರಧಾನಿ ಪರೀಕ್ಷೆಗಳ ಗೋಜಿಗೆ ಹೋಗಲೇ ಇಲ್ಲ. ಹಾಗಾಗಿ ಮೋದಿ ವಿರುದ್ಧ ಕೋಪಗೊಂಡ ವಿದ್ಯಾರ್ಥಿ ಯುವಜನರು ಯೂಟ್ಯೂಬ್‌ನಲ್ಲಿ ಡಿಸ್‌ಲೈಕ್‌ ಮಾಡುವ ಅಭಿಯಾನ ಆರಂಭಿಸಿದ್ದು, ಮೋದಿಯವರಿಗೆ ತೀವ್ರ ಮುಖಭಂಗ ಮಾಡಿತ್ತು.


ಇದನ್ನೂ ಓದಿ: ಮೋದಿಯನ್ನು ಯೂಟ್ಯೂನ್‌ನಲ್ಲಿ ತಿಸ್ಕರಿಸುತ್ತಿರುವ ಯುವಜನರು: #StudentsDislikePMModi ಟ್ರೆಂಡಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights