ಮಧ್ಯಪ್ರದೇಶದ ಐವರದಲ್ಲಿ ಕೊರೊನಾ ಪತ್ತೆ : ಸೋಂಕು ತಗುಲಿದ ಬಗೆ ಕೇಳಿದ್ರೆ ಶಾಕ್ ಆಗ್ತೀರಾ..!

ಇಂದೋರ್‌ನಲ್ಲಿ ಇಂದು ಇನ್ನೂ ಐದು ಜನರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಇವರಿಗೆ ಸೋಂಕು ಹೇಗೆ ತಗುಲಿದೆ ಎನ್ನುವುದರ ಬಗ್ಗೆ ಸಮೀಕ್ಷೆ ಮಾಡಿದಾಗ ಅಘಾತಕಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಹೌದು… ಮಧ್ಯಪ್ರದೇಶದಲ್ಲಿ ಈಗಾಗಲೇ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಈಗ ಸೋಂಕು ತಗಲಿದ ವ್ಯಕ್ತಿಗಳಲ್ಲಿ ಅಘಾತಕಾರಿಯಾದ ಮಾಹಿತಿ ಲಭ್ಯವಾಗಿದ್ದು, ವಿಶ್ವದ ಜನರನ್ನು ಬೆಚ್ಚಿ ಬೀಳಿಸದೆ. ಯಾಕೆಂದ್ರೆ ನಾಮಗೆಲ್ಲಾ ಇರುವ ಮಾಹಿತಿ ಪ್ರಕಾರ ನಮ್ಮ ದೇಶಕ್ಕೆ ಕೊರೊನಾ ವೈರಸ್ ಬಂದಿದ್ಉ ವಿದೇಶಿಗರಿಂದ. ವಿದೇಶಕ್ಕೆ ಹೋಗಿದ್ದ ಭಾರತೀಯರಿಂದ ಆದರೆ ಮಧ್ಯಪ್ರದೇಶದಲ್ಲಿ ಸೋಂಕು ತಗುಲಿದ ನಾಲ್ವರು ವಿದೇಶಕ್ಕೆ ಪ್ರಯಾಣ ಮಾಡೇ ಇಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅವರಲ್ಲಿ ನಾಲ್ವರು ಇಂದೋರ್ ನಿವಾಸಿಗಳು ಮತ್ತು ಒಬ್ಬರು ಉಜ್ಜಯಿನಿ ಮೂಲದವರು ಎಂದು ಇಂದೋರ್‌ನ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರವೀಣ್ ಜಾಡಿಯಾ ಎಎನ್‌ಐಗೆ ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳೊಂದಿಗೆ, ಮಧ್ಯಪ್ರದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು 14 ಕ್ಕೆ ಏರಿದೆ. ಮೊದಲಿಗೆ, ಜಬಲ್ಪುರದಿಂದ ಆರು ಕರೋನವೈರಸ್ ಪ್ರಕರಣಗಳು ಮತ್ತು ಭೋಪಾಲ್, ಗ್ವಾಲಿಯರ್ ಮತ್ತು ಶಿವಪುರಿಯಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights