ಹಿಂದಿ ಥೆರಿಯತು ಪೊಡಾ: ಹಿಂದಿ ಹೇರಿಕೆಯ ವಿರುದ್ಧ ಟೀ-ಶರ್ಟ್ ಟ್ರೆಂಡಿಂಗ್!
ತಮಿಳು ಸಿನಿಮಾ ಮೆಟ್ರೋ (2016) ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಟ ಶಿರೀಶ್ ಸರವಣನ್ ಅವರು ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರೊಂದಿಗೆ ಮಾತನಾಡುತ್ತಿರುವ ಪೋಟೋವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಆ ಚಿತ್ರ ವೈರಲ್ ಆಗುತ್ತಿದೆ. ಫೋಟೋ ವೈರಲ್ ಆಗಲು ಕಾರಣ, ಅವರು ಧರಿಸಿದ್ದ ಟೀ-ಶರ್ಟ್ ಮೇಲೆ “ನಾನು ತಮಿಜ್ ಪೆಸುಮ್ ಇಂಡಿಯನ್” ಮತ್ತು ಹಿಂದಿ ಥೆರಿಯತು, ಪೊಡಾ! ಎಂದು ಬರೆಯಲಾಗಿತ್ತು.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಧನಿ ಎತ್ತುತ್ತಿರುವ ತಮಿಳಿಗರು ಈಗ ಹೊಸ ಹಿಂದಿ ಹೇರಿಕೆಯ ವಿರುದ್ಧ ಹೊಸ ಟ್ರೆಂಟ್ ಶುರುಮಾಡಿದ್ದಾರೆ. ಅದೇ, “Hindi theriyathu, poda!” ” (ನನಗೆ ಹಿಂದಿ ಗೊತ್ತಿಲ್ಲ, ಹೋಗೋ!). “I am a Tamizh Pesum Indian” (ನಾನು ತಮಿಳು ಮಾತನಾಡುವ ಭಾರತೀಯ). “ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ” ಎಂದು ಬರೆಯಲಾಗಿರುವ ಟೀ-ಶರ್ಟ್ಗಳನ್ನು ಧರಿಸಿ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
https://twitter.com/actor_shirish/status/1302216834918182912?s=20
ಕೆಲವು ದಿನಗಳ ಹಿಂದೆ ತಮಿಳುನಾಡು ವಿಮಾನ ನಿಲ್ದಾಣದಲ್ಲಿ ಸಂಸದೆ ಕನಿಮೊಳಿ ಕರುಣಾನಿಧಿಯವರನ್ನು ಹಿಂದಿ ಬಾರದ ನೀವು ಭಾರತೀಯರೇ ಎಂದು ಸಿಐಎಸ್ಎಫ್ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದರು. ಇದು ಹಿಂದಿ ಹೇರಿಕೆಯ ವಿರುದ್ಧ ವ್ಯಾಪಕ ಟೀಕೆಗೆ ಒಳಗಾಗಿತ್ತು.
ಇದಾದ ನಂತರ, ಡಿಎಂಕೆ ಪಕ್ಷದ ಮುಖಂಡರು ಸಣ್ಣ ರೀತಿಯಲ್ಲಿ ಪ್ರಾರಂಭಿಸಿದ ಈ ಟೀ-ಶರ್ಟ್ ಅಭಿಯಾನ ತಮಿಳುನಾಡಿನಾದ್ಯಂತ ವ್ಯಾಪಕವಾಗಿ ಪಸರಿಸಿದೆ. ಸ್ವತಃ ಕನಿಮೊಳಿಯವರೂ ಕೂಡ ಟೀ-ಶರ್ಟ್ ಧರಿಸಿ ಯುವಜನರೊಂದಿಗೆ ಪೋಟೋತೆಗೆದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂಸದೆಯನ್ನು ನೀವು ಭಾರತೀಯರೇ ಎಂದ CISF ಅಧಿಕಾರಿಗಳು: ಹಿಂದಿ ದಬ್ಬಾಳಿಕೆಯ ವಿರುದ್ಧ ಹೆಚ್ಡಿಕೆ ಆಕ್ರೋಶ
“ಒಂದು ಭಾವನೆಯನ್ನು ಹುಟ್ಟುಹಾಕಲು ಒಂದು ಕಿಡಿ ಸಾಕು. ನಾವು ಹಿಂದಿ ಹೇರಿಕೆಯ ವಿರುದ್ಧ ನಾವು ಶರ್ಟ್ಗಳನ್ನು ಮುದ್ರಿಸಿದಾಗ, ತಾರತಮ್ಯದ ವಿರುದ್ಧ ಹೋರಾಟದಲ್ಲಿ ನಮ್ಮ ಪೂರ್ವಜರಂತೆ ಯುವಜನರ ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ಧನ್ಯವಾದಗಳು” ಎಂದು ಕನಿಮೊಳಿ ಟ್ವೀಟ್ನಲ್ಲಿ ಹೇಳಿದ್ದಾರೆ.
A spark is enough to ignite a sentiment.When we printed Tshirts, in the era of blatant Hindi imposition,we didn't know that the youngsters would respond passionately like our forefathers in fighting discriminatory practices. Thank you.#ஹிந்தி_தெரியாது_போடா #StopHindiImposition pic.twitter.com/44HHjXuS3d
— Kanimozhi (கனிமொழி) (@KanimozhiDMK) September 6, 2020
ವಿಶೇಷವೆಂದರೆ, ಕೆಲವೇ ದಿನಗಳ ಹಿಂದೆ, ಚಲನಚಿತ್ರ ನಿರ್ಮಾಪಕ ವೆಟ್ರಿಮಾರನ್ ಅವರು 2011 ರಲ್ಲಿ ಹಿಂದಿ ತಿಳಿಯದ ಕಾರಣ ಅವಮಾನಕ್ಕೊಳಗಾದ ಘಟನೆಯನ್ನು ಹಂಚಿಕೊಂಡಿದ್ದರು. ದೆಹಲಿ ವಿಮಾನ ನಿಲ್ದಾಣದಲ್ಲಿ ತಮಗೆ ಹಿಂದಿ ಬರುವುದಿಲ್ಲ ಎಂದು ಅಧಿಕಾರಿಗೆ ಹೇಳಿದಾಗ, ಆತ, “ರಾಷ್ಟ್ರ ಭಾಷೆ” ನಿನಗೆ ಹೇಗೆ ಗೊತ್ತಿಲ್ಲ. “ತಮಿಳು ಮತ್ತು ಕಾಶ್ಮೀರಿಗಳು ದೇಶವನ್ನು ಒಡೆಯುತ್ತಿದ್ದಾರೆ” ಎಂದು ಅವಮಾನಿಸಿದ್ದರು.
ಆ ಸಂದರ್ಭವನ್ನು ನೆನಪಿಸಿಕೊಂಡ ವೆಟ್ರಿಮಾರನ್ “ನನ್ನ ಮಾತೃಭಾಷೆ ಮಾತನಾಡುವುದು ರಾಷ್ಟ್ರದ ಐಕ್ಯತೆಯನ್ನು ಹೇಗೆ ಅಡ್ಡಿಪಡಿಸುತ್ತದೆ? ನನ್ನ ಮಾತೃಭಾಷೆ ದೇಶದ ಅಭಿವೃದ್ಧಿಗೆ ಹೇಗೆ ಅಡ್ಡಿಯಾಗುತ್ತದೆ.” ಎಂದು ಪ್ರಶ್ನಿಸಿದ್ಧಾರೆ.
https://twitter.com/imKBRshanthnu/status/1302271592500662272?s=20
ಕನಿಮೊಳಿವರಿಗೆ ಅಧಿಕಾರಿಗಳು ಅವಮಾನ ಮಾಡಿದಾಗ, ದಕ್ಷಿಣದ ರಾಜ್ಯಗಳ ರಾಜಕಾರಣಿಗಳಾದ ಪಿ ಚಿದಂಬರಂ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಹಿಂದಿ ಹೇರಿಕೆಯ ವಿರುದ್ಧ ಕನಿಮೊಳಿಯವರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದರು.
ಇದನ್ನೂ ಓದಿ: ಹಿಂದಿ ಹೇರಿಕೆಯ ವಿರುದ್ಧ ಹೆಚ್ಡಿಕೆ ಆಕ್ರೋಶ! ಆಯುಷ್ ಇಲಾಖೆಯ ಕಾರ್ಯದರ್ಶಿ ವಜಾಗೊಳಿಸಲು ಆಗ್ರಹ!

