ಕಂಗನಾ, ಮಹಾ ಸರ್ಕಾರದ ಕಿತ್ತಾಟದಲ್ಲಿ ಮರ್ಯಾದೆ ಕಳೆದುಕೊಂಡ ಮಾಧ್ಯಮಗಳು!
ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ರಣವತ್ ಮಧ್ಯೆ ಕುಸ್ತಿ ಶುರುವಾಗಿದೆ. ಒಂದೆಡೆ ನಟಿ ಕಂಗನಾ ರಣಾವತ್ ತನ್ನ ಮೈಲೇಜ್ ಹೆಚ್ಚಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ, ಅವರನ್ನು ಬಾಯಿ ಮುಚ್ಚಿಸಲು ಒಂದು ರಾಜ್ಯದ ಸರ್ಕಾರವೇ ನಿಂತಿದೆ. ಈ ಮಧ್ಯೆ, ಮಾಧ್ಯಮಗಳು ತಮ್ಮ ಟಿಆರ್‌ಪಿ ಅಪಾಹಪಿಕೆಯಿಂದ ತಮ್ಮ ಮಾನವನ್ನೇ ಕಳೆದುಕೊಳ್ಳುತ್ತಿವೆ.
ಹಿಮಾಚಲ ಪ್ರದೇಶದಲ್ಲಿದ್ದ ಕಂಗನಾ ರಣಾವತ್, ನಿನ್ನೆ ಮುಂಬೈಗೆ ಮರಳಿ ಬರುತ್ತಿದ್ದ ಹಿನ್ನೆಲೆಯಲ್ಲಿ, ಮುಂಬೈ ಮಹಾನಗರ ಪಾಲಿಕೆಯು ಕಂಗನಾ ಅವರ ಕಚೇರಿಯನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಕೆಡವಲು ಮುಂದಾಗಿತ್ತು. ಮಹಾರಾಷ್ಟ್ರ ಸರ್ಕಾರದ ಜೊತೆಗೆ ನಡೆಯುತ್ತಿರುವ ಕಂಗನಾ ಫೈಟ್‌ನ ಹಿನ್ನೆಲೆಯಲ್ಲಿ ಈ ಕೆಲಕ್ಕೆ ಬಿಎಂಪಿ ಮುಂದಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ನಡುವೆ ಮಹಾರಾಷ್ಟ್ರ ಕೋರ್ಟ್ ಕಚೇರಿ ಕೆಡಗುವುದಕ್ಕೆ ತಡೆ ನೀಡಿದೆ.
ಆದರೆ, ಅದಕ್ಕೂ ಮುಂಚೆಯೇ ಕಂಗನಾ ಕಚೇರಿ ಕೆಡವಲು ಬಿಎಂಸಿ ಜೆಸಿಬಿಗಳನ್ನು ತಂದು ಕಾರ್ಯಾಚರಣೆ ಆರಂಭಿಸಿತ್ತು. ಬಿಎಂಸಿಯ ಕಾರ್ಯಾಚರಣೆಯನ್ನು ವರದಿ ಮಾಡುತ್ತಿದ್ದ ಮಾಧ್ಯಮಗಳು ಖಾಕಿ ಧರಿಸಿ ಬಂದಿದ್ದ ಪೋಸ್ಟ್ ಮ್ಯಾನ್ ಅನ್ನೂ ಬಿಡದೆ ಬೈಟ್ ತೆಗೆದುಕೊಳ್ಳಲು ದೌಡಾಯಿಸಿದ್ದವು.
ಕಂಗನಾ ರನಾವತ್ ಕಚೇರಿ ಕೆಡವುವ ಬಿಎಂಸಿ ಸಾಹಸದ ಸಮಯದಲ್ಲೇ ಅದೇ ಬೀದಿಯಲ್ಲಿ ಯಾರದ್ದೂ ಮನೆಗೆ ಫೋಸ್ಟ್ ಹಾಕಲು ಅಡ್ರೆಸ್ ಹುಡುಕಿಕೊಂಡು ಹೋಗುತ್ತಿದ್ದ ಪೋಸ್ಟ್‌ಮ್ಯಾನ್ ಖಾಕಿ ಡ್ರೆಸ್ ಹಾಕಿದ್ದರು. ಖಾಕಿ ಹಾಕಿದ್ದವರೆಲ್ಲ ಪೊಲೀಸರೇ ಎಂದುಕೊಂಡ ಟಿವಿ ಚಾನೆಲ್‌ಗಳು ಆತನ ಮುಂದೆ ದೌಡಾಯಿಸಿ, ಆತನ ಮಾತನ್ನೂ ಕೇಳದೆ, ಆತನ ಬಾಯಿಗೆ ಮೈಕ್ ಹಿಡಿದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದವು.
ನಾನು ಪೊಲೀಸ್ ಅಲ್ಲ, ಪೋಸ್ಟ್‌ಮ್ಯಾನ್ ಎಂದು ಹೇಳಿತ್ತಿದ್ದರೂ ಕೇಳಿಸಿಕೊಳ್ಳದೆ, ಒಂದೇ ಸಮನೆ ಪ್ರಶ್ನೆ ಕೇಳುತ್ತಿದ್ದನ್ನೂ, ಮೀಡಿಯಾಗಳ ಈ ಟಿಆರ್‌ಪಿ ಗೀಳಿನ ಹಪಾಹೊಪಿಕೆ ಕಂಡು ಪೋಸ್ಟ್ ಮ್ಯಾನ್ ನಿಬ್ಬೆರಗಾಗಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಜನರು ಟಿವಿ ಚಾನೆಲ್‌ಗಳಿಗೆ ಬೈಯೋದಕ್ಕೂ ಟಿವಿ ಚಾನೆಲ್‌ಗಳು ಆಡೋದಕ್ಕೂ ಕರೆಕ್ಟಾಗಿ ಮ್ಯಾಚ್ ಆಗತ್ತೆ. ಕಂಗನಾ ಕಚೇರಿ ಗೋಡೆ ಜೊತೆಗೆ ಟಿವಿ ಚಾನೆಲ್‌ಗಳ ಮಾನ ಮರ್ಯಾದೆಯೂ ಕುಸಿದು ಬಿದ್ದಿತ್ತು! ಎಂದು ಜನರು ಮೀಡಿಯಾಗಳನ್ನು ಟ್ರೋಲ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ:
Read Also: ಮಂಗಳೂರು ಸಿಎಎ ವಿರೋಧಿ ಪ್ರತಿಭಟನೆ: 21 ಆರೋಪಿಗಳಿಗೆ ಜಾಮೀನು ನೀಡಿದ ಸುಪ್ರೀಂ

