‘ಮೆಡಿಕಲ್‌ ಟೆರರಿಸಂ’ ಎಂಬ ಟೈಟಲ್‌ ಸೃಷ್ಟಿಸಿದ್ದ ಬಿಜೆಪಿ ಈಗೇಕೆ ಮೌನವಾಗಿದೆ: ಕಾಂಗ್ರೆಸ್‌ ಪ್ರಶ್ನೆ

ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಬಿಜೆಪಿ ‘ಮೆಡಿಕಲ್‌ ಟೆರರಿಸಂ’ ಎಂಬ ಹೊಸ ಟೈಟಲ್‌ ಕೊಟ್ಟಿತ್ತು. ಆದರೆ, ಈಗ ಬೆಡ್‌ ಬ್ಲಾಕಿಂಗ್‌ ಬಗ್ಗೆ ಬಿಜೆಪಿ ಮೌನವಾಗಿದೆ. ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್‌, ‘ಮೆಡಿಕಲ್‌ ಟೆರರಿಸಂ’ ಎಂಬ ಹೊಸ ಟೈಟಲ್‌ ಕೊಟ್ಟಿದ್ದ ಬಿಜೆಪಿ ಈಗೇಕೆ ಮೌನವಾಗಿದೆ ಎಂದು ಪ್ರಶ್ನಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ‘ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಖಾತೆಗೆ ಸೋಂಕಿತರಿಂದ ಹಣ ಜಮೆಯಾಗಿದ್ದು ಪತ್ತೆಯಾಗಿದೆ. ಇದರಲ್ಲಿ ಸತೀಶ್ ರೆಡ್ಡಿಯ ಪಾತ್ರದ ಬಗ್ಗೆ ತನಿಖೆ ಇಲ್ಲವೇಕೆ? ಸರ್ಕಾರ ರಕ್ಷಣೆಗೆ ನಿಂತಿದ್ದೇಕೆ? ಕೋಮು ಬಣ್ಣ ಬಳಿದು ‘ಮೆಡಿಕಲ್ ಟೆರರಿಸಂ’ ಎಂಬ ಹೊಸ ಟೈಟಲ್ ಸೃಷ್ಟಿಸಿದ್ದ ಭ್ರಷ್ಟಬಿಜೆಪಿ ಈಗೇಕೆ ಮೌನ? ಎಂದು ಪ್ರಶ್ನಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಕೆ ಹಂಚಿಕೆ ವಿಚಾರದಲ್ಲಿ ಅವ್ಯವಹಾರ ನಡೆಸಿದೆ ಎಂದು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ , ಸತೀಶ ರೆಡ್ಡಿ ಆರೋಪಿಸಿದ್ದರು.

ಹಾಸಿಗೆ ಬ್ಲಾಕಿಂಗ್ ಪ್ರಕರಣದಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಇನ್‌ಸ್ಪೆಕ್ಟರ್‌ ಶ್ರೀಧರ್ ಪೂಜಾರ ನೇತೃತ್ವದ ತಂಡ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 250 ಪುಟಗಳ ಆರೋಪ ಪಟ್ಟಿ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಚುನಾವಣಾ ಸೋಲಿಗೆ ಕಾರಣ: ಸಿಪಿಎಂ ನಾಯಕರ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights