ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಚುನಾವಣಾ ಸೋಲಿಗೆ ಕಾರಣ: ಸಿಪಿಎಂ ನಾಯಕರ ಆರೋಪ

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಭಾರೀ ಕಳಪಡೆ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಪಕ್ಷದ ವೈಫಲ್ಯಕ್ಕೆ ಕಾರಣಗಳ ಬಗ್ಗೆ ಚರ್ಚಿಸಲು ಸಿಪಿಎಂ ಎರಡು ದಿನಗಳ ಸಭೆಯನ್ನು ನಡೆಸಿದೆ. ಸಭೆಯಲ್ಲಿ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಪಕ್ಷವು ವಿಫಲವಾಗಿದ್ದು, ಇದಕ್ಕೆ ಇಂಡಿಯನ್ ಸೆಕ್ಯುಲರ್ ಫೋರ್ಸ್ (ಐಎಸ್ಎಫ್) ನೊಂದಿಗೆ ಕೈಜೋಡಿಸಿದ್ದೇ ಕಾರಣ ಎಂದು ಹಲವು ನಾಯಕರು ದೂಷಿಸಿದ್ದಾರೆ.

2016 ರ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದಕ್ಕೆ ಪಕ್ಷಕ್ಕೆ ಹಾನಿಯಾಗಿತ್ತು. ಈಗ ಅದು ಮತ್ತಷ್ಟು ಹೆಚ್ಚಾಗಿದೆ ಎಂದು ಅನೇಕ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದಿದ್ದರೆ, ಎಡ ಪಕ್ಷಗಳು ಕೇವಲ 26 ಸ್ಥಾನಗಳನ್ನು ಗಳಿಸಿತ್ತು.

ಇತ್ತೀಚಿನ ಚುನಾವಣೆಯಲ್ಲಿ, ಎಡಪಂಥೀಯ, ಕಾಂಗ್ರೆಸ್ ಮತ್ತು ಐಎಸ್ಎಫ್ ಮೈತ್ರಿ ರಚಿಸಿದ್ದವು. ಆಡಳಿತಾರೂಢ ಟಿಎಂಸಿ ಮತ್ತು ಉದಯೋನ್ಮುಖ ಬಿಜೆಪಿಗೆ ವಿರುದ್ಧದ ಮತದಾರರನ್ನು ಕ್ರೂಢೀಕರಿಸಲು ಎಡರಂಗದ ಮೈತ್ರಿ ರಚನೆಯಾಗಿತ್ತು. ಆದರೆ, ಎಲ್ಎಫ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒದೇ ಒಂದು ಸ್ಥಾನವನ್ನು ಪಡೆಯಲು ವಿಫಲವಾದರೆ, ಐಎಸ್ಎಫ್ ಸ್ಪರ್ಧಿಸಿದ್ದ 27 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಾತ್ರ ಗೆದ್ದಿತು.

ಇದನ್ನೂ ಓದಿ: ಮಲೇಷ್ಯಾ ಮಹಿಳೆ ಮೇಲೆ ಅತ್ಯಾಚಾರ; ಮಾಜಿ ಸಚಿವ, AIADMK ಮುಖಂಡ ಮಣಿಕಂಠನ್ ಬಂಧನ!

“ಮೈತ್ರಿಕೂಟದಲ್ಲಿ ಐಎಸ್‌ಎಫ್ಅನ್ನು ಸೇರಿಸಿಕೊಳ್ಳುವುದು ಸರ್ವಾನುಮತದ ನಿರ್ಧಾರವಲ್ಲ. ಹೊಸದರೊಂದಿಗೆ ಕೈಜೋಡಿಸುವ ಪರವಾದವರು ಟಿಎಂಸಿಗೆ ಅಲ್ಪಸಂಖ್ಯಾತ ಮತಗಳು ಹೋಗುವುದನ್ನು ತಡೆಯಲು ಬಯಸಿದ್ದರು. ಆದರೆ, ತಂತ್ರವು ತಪ್ಪಾಗಿದೆ ಮತ್ತು ಸಿಪಿಎಂ ಯಾವಾಗಲೂ ಜಾತ್ಯತೀತತೆಯ ಧ್ವನಿಯಾಗಿರುವುದರಿಂದ ಮತದಾರರು ಅದನ್ನು ಸ್ವೀಕರಿಸಲಿಲ್ಲ” ಎಂದು ರಾಜ್ಯ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಮುರ್ಷಿದಾಬಾದ್‌ನ ಕೆಲವು ಸ್ಥಾನಗಳಲ್ಲಿ ಐಎಸ್‌ಎಫ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಮೈತ್ರಿಕೂಟಕ್ಕೆ ಹಿನ್ನಡೆಯಾಯಿತು. ಕಾಂಗ್ರೆಸ್‌ ಪಕ್ಷವು ಸರಿಯಾದ ರೀತಿಯಲ್ಲಿ ಸ್ಥಾನಗಳನ್ನು ಹಂಚಿಕೊಳ್ಳಲಿಲ್ಲ. ಪ್ರಾಸಂಗಿಕವಾಗಿ, ಅನೇಕ ಸಿಪಿಎಂ ರಾಜ್ಯ ಸಮಿತಿ ಸದಸ್ಯರು ಐಎಸ್ಎಫ್ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸದೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದರು ಎಂದು ಐಎಸ್ಎಫ್ ಸೇರ್ಪಡೆಗೆ ವಿರುದ್ಧವಾಗಿದ್ದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡದೆ BJP ಸೇರಿರುವ 10 ಶಾಸಕರು ಪಕ್ಷಕ್ಕೆ ಮರಳಲು ಅವಕಾಶವಿಲ್ಲ: ದಿನೇಶ್‌ ಗುಂಡೂರಾವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights