‘ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ’ ನಳೀನ್‌ಕುಮಾರ್ ಕಟೀಲ್

‘ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ.

ಆರ್. ಅಶೋಕ್ ಅವರ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ನಿನ್ನೆಯ ಸಭೆಗೆ ಅವರು ಗೈರಾಗಿದ್ದಾರೆ. ನನಗೆ ಸಂಜೆ ಕಾಲ್ ಮಾಡಿ ಮಾತನಾಡಿದ್ದರು, ಅನಾರೋಗ್ಯದ ಕುರಿತು ತಿಳಿಸಿದ್ದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ  ನಳೀನ್‌ಕುಮಾರ್ ಕಟೀಲು, ಸಿದ್ದರಾಮಯ್ಯ ಅಧಿಕಾರಲ್ಲಿದ್ದಾಗ ನಿದ್ದೆ ಮಾಡುತ್ತಿದ್ದರು, ಇವಾಗ ಎಚ್ಚರಿಕೆಯಾಗಿ ಕನಸು ಕಾಣುತ್ತಿದ್ದಾರೆ.
ಅವರು ಕನಸು ಅಧಿಕಾರದಲ್ಲಿದ್ದಾಗಲೂ ನನಸಾಗಿಲ್ಲ, ಈಗಲೂ ಆಗಲ್ಲ ಎಂದರು.

ಡಿಕೆಶಿ ಬಂಧನ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಸಿಬಿಐ, ಐಟಿ, ಇಡಿಗಳು ಬಿಜೆಪಿ ನಿರ್ಮಾಣ ಮಾಡಿದ ಸಂಸ್ಥೆಗಳಲ್ಲ. ಅವರ ಮೇಲೆ ಆರೋಪವಿದೆ ಕಾನೂನು ಹೋರಾಟ ಮಾಡಿ ಹೊರಬರಲಿ. ಮೋದಿ, ಅಮಿತ್ ಶಾ ಸಹಿತ ಆರೋಪ ಬಂದಾಗ ಕಾನೂನು ಹೋರಾಟ ಮಾಡಿ ಹೊರಬಂದಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನವರು ಮಾಡಿದ್ದು ದ್ವೇಶದ ರಾಜಕಾರಣವಾ? ನ್ಯಾಯಾಲಯ, ಕಾನೂನು ಪ್ರಕಾರ ಎಲ್ಲವೂ ನಡೆಯುತ್ತೆ.

ದಕ್ಷಿಣ ಕನ್ನಡ ಡಿಸಿ ಸಸಿಕಾಂತ್ ಸೆಂಥಿಲ್ ವೈಯಕ್ತಿಕ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ‌. ಅವರು ಒಳ್ಳೆಯ ಅಧಿಕಾರಿ ಇದ್ದರು. ಅವರ ವೈಯಕ್ತಿಕ ಬೇರೆಬೇರೆ ಕಾರಣಗಳು, ವಿಚಾರಗಳು ಇರಬಹುದು. ಯಾವುದೇ ಉಹಾಪೋಹಗಳು ಬೇಡ. ಈ ಹಿಂದೆ ಅಣ್ಣಾಮಲೈ ಕೂಡಾ ರಾಜೀನಾಮೆ ನೀಡಿದ್ದರು ಇವಾಗ ರಾಜಕೀಯ ಸೇರಿದ್ದಾರೆ. ಇವರು ಮುಂದೆ ಏನ್ ಮಾಡ್ತಾರೆ ಕಾದು ನೋಡೋಣ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights