ಫ್ಯಾಕ್ಟ್‌ಚೆಕ್ : ರೈಲುಗಳಲ್ಲಿ ಜೈವಿಕ ಶೌಚಾಲಯಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೇ?

2014 ರ ಮೊದಲು ಯಾವುದೇ ಸರ್ಕಾರಗಳು ರೈಲ್ವೇ ಶೌಚಾಲಯಗಳ ಸ್ವಚ್ಛತೆಗೆ ಆಧ್ಯತೆ ನೀಡದೆ ಸಾರ್ವಜನಿಕರು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರು, ಆದರೆ 2014ರ ನಂತರ ಅಂದರೆ ಮೋದಿ ಅವರ ಅಧಿಕಾರದ ಅವಧಿಯಲ್ಲಿ ರೈಲ್ವೇ ಬೋಗಿಗಳಲ್ಲಿ ಜೈವಿಕ-ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನ್ಲಿ ಕಸದಿಂದ ತುಂಬಿದ ರೈಲ್ವೇ ಟ್ರ್ಯಾಕ್‌ನ ಚಿತ್ರ ಮತ್ತು ಸ್ವಚ್ಛವಾದ ಟ್ರ್ಯಾಕ್ ಫೋಟೋವನ್ನು ಹೋಲಿಕೆ ಮಾಡಿ ಹಂಚಿಕೊಳ್ಳಲಾಗಿದೆ. ಜೈವಿಕ ಶೌಚಾಲಯಗಳನ್ನು ಪರಿಚಯಿಸುವ ಮೊದಲು, ರೈಲುಗಳಲ್ಲಿನ ಬೋಗಿಗಳು ಶೌಚಾಲಯಗಳಿಂದ ತ್ಯಾಜ್ಯವನ್ನು ಸಂಗ್ರಹಿಸುವ ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ ಮತ್ತು ಅವುಗಳು ನೇರವಾಗಿ ಟ್ರ್ಯಾಕ್‌ಗಳ ಮೇಲೆ ಬೀಳುತ್ತಿದ್ದವು. ಇದರಿಂದಾಗಿ ರೈಲು  ನಿಲ್ದಾಣದಲ್ಲಿನ ಹಳಿಗಳು ಮಾನವ ತ್ಯಾಜ್ಯದಿಂದ ದುರ್ವಾಸನೆಯೊಂದಿಗೆ ಗಬ್ಬುನಾರುತ್ತಿದ್ದವು.

ಇದಲ್ಲದೆ, ಇದನ್ನು ಸ್ವಚ್ಛಗೊಳಿಸಲು ಮಾನವ ಶ್ರಮವನ್ನು ಉಪಯೋಗಿಸುತ್ತಿದ್ದರು ಅವರು ತಮ್ಮ ಕೈಗಳಿಂದ ಸ್ವಚ್ಛಗೊಳಿಸಬೇಕಾಗಿತ್ತು ಆದರೆ ಈಗ ಜೈವಿಕ-ಶೌಚಾಲಯಗಳನ್ನು ಪರಿಚಯಿಸಿದ ನಂತರ ರೈಲ್ವೇಯಲ್ಲಿ ಈ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಈಗ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 2014 ರ ನಂತರ ಈ ಯೋಜನೆಯನ್ನು ಪರಿಚಯಿಸಲಾಯಿತು ಎಂದು ಹಂಚಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಈ ಎಲ್ಲಾ ಬೆಳವಣಿಗೆಗಳು ಮೋದಿ ಸರ್ಕಾರದ ಅವಧಿಯಲ್ಲಿ ಮಾಡಲಾಗಿದೆಯೇ? ಅಥವಾ ಅದಕ್ಕೂ ಮೊದಲು ರೈಲ್ವೇ ಬೋಗಿಗಳಲ್ಲಿ ಜೈವಿಕ-ಶೌಚಾಲಯಗಳನ್ನು ಅಳವಡಿಸಲಾಗಿತ್ತೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಎಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, ಭಾರತೀಯ ರೈಲ್ವೇಯು DRDO ಸಹಯೋಗದೊಂದಿಗೆ 2010 ರಲ್ಲಿ ಅಸ್ತಿತ್ವದಲ್ಲಿರುವ ಜೈವಿಕ-ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತು. ಮತ್ತು ಜೂನ್ 2014 ರ ವೇಳೆಗೆ, ಭಾರತೀಯ ರೈಲ್ವೇಯು 4356 ಪ್ಯಾಸೆಂಜರ್ ಕೋಚ್‌ಗಳಲ್ಲಿ 11,777 ಜೈವಿಕ-ಶೌಚಾಲಯಗಳನ್ನು ಸ್ಥಾಪಿಸಿದೆ ಎಂಬ ವರದ ಲಭ್ಯವಾಗಿದೆ.

2014ರ ನಂತರ ರೈಲ್ವೇ ಬೋಗಿಗಳ ಅಳವಡಿಕೆ ಹೆಚ್ಚಿದ್ದು ನಿಜ.ಆದರೆ, ಈ ಜೈವಿಕ ಶೌಚಾಲಯಗಳನ್ನು ಪರಿಚಯಿಸಿದ್ದು ಈಗಿನ ಸರಕಾರವಲ್ಲ, ಹಿಂದಿನ ಸರಕಾರ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ (2009-14), ಭಾರತೀಯ ರೈಲ್ವೇ ಈ ಜೈವಿಕ ಶೌಚಾಲಯಗಳನ್ನು ಪರಿಚಯಿಸಿತು.

ಭಾರತೀಯ ರೈಲ್ವೇ ಕೋಚ್‌ಗಳಲ್ಲಿ ಬಳಸಲು ಜೈವಿಕ-ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲು ಡಿಆರ್‌ಡಿಒ ಮತ್ತು ರೈಲ್ವೇ ಸಚಿವಾಲಯದ ನಡುವೆ MOUಗೆ ಸಹಿ ಹಾಕಲಾಯಿತು. ತರುವಾಯ, ಈ IR-DRDO ಸಹಯೋಗವು ಭಾರತೀಯ ರೈಲ್ವೇ ಪ್ರಯಾಣಿಕ ಕೋಚ್‌ಗಳಿಗೆ ಹೇಳಿ ಮಾಡಿಸಿದ ಆಮ್ಲಜನಕರಹಿತ ಜೈವಿಕ-ಶೌಚಾಲಯವನ್ನು ಅಭಿವೃದ್ಧಿಪಡಿಸಿತು.

ಜೂನ್ 2014 ರ ವೇಳೆಗೆ 4356 ರೈಲು ಕೋಚ್‌ಗಳು ಜೈವಿಕ-ಶೌಚಾಲಯಗಳನ್ನು ಹೊಂದಿದವು,  2012 ರ ರೈಲ್ವೆ ಬಜೆಟ್‌ನಲ್ಲಿ 2500 ಬೋಗಿಗಳಲ್ಲಿ 10000 ಜೈವಿಕ ಶೌಚಾಲಯಗಳನ್ನು ನಿರ್ಮಿಸಲು ಯೋಜನೆಯನ್ನು ಸಿದ್ದಪಡಿಸಾಗಿತ್ತು. 2014 ರಲ್ಲಿ, ಆಗಿನ ಸರ್ಕಾರವು 2021-22 ರ ವೇಳೆಗೆ ಸಂಪೂರ್ಣ ಪ್ಯಾಸೆಂಜರ್ ಬೋಗಿಗಳನ್ನು ಜೈವಿಕ-ಶೌಚಾಲಯಗಳೊಂದಿಗೆ ಪರಿವರ್ತಿಸಲಾಗಿತ್ತು.

30 ಜೂನ್ 2014 ರ ಹೊತ್ತಿಗೆ, ಭಾರತೀಯ ರೈಲ್ವೇಯು 4356 ಪ್ಯಾಸೆಂಜರ್ ಕೋಚ್‌ಗಳಲ್ಲಿ 11,777 ಜೈವಿಕ-ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. ಈ ಶೌಚಾಲಯಗಳನ್ನು ಅಳವಡಿಸಿರುವ ರೈಲುಗಳ ವಿವರಗಳನ್ನು ಇಲ್ಲಿ ನೋಡಬಹುದು. ಈ ಎಲ್ಲ ಆಧಾರಗಳನ್ನು ಪರಿಗಣಿಸಿ ಹೇಳುವುದಾದರೆ, 2014ರ ಮೊದಲು ಅಂದರೆ 2010ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ರೈಲ್ವೇ ಭೋಗಿಗಳಲ್ಲಿ  ಜೈವಿಕ ಶೌಚಾಲಯಗಳನ್ನು ಪರಿಚಯಿಸಿತು ಮಾತ್ರವಲ್ಲದೆ ಅದರ ಅನುಷ್ಠಾನವನ್ನು ಮಾಡಿತ್ತು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2014ರ ಮೊದಲು ಭಾರತೀಯ ರೈಲ್ವೇ ಭೋಗಿಗಳಲ್ಲಿ ಜೈವಿಕ ಶೌಚಾಲಯಗಳು ಇರಲಿಲ್ಲ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಸ್ವಚ್ಛತೆಗೆ ಆಧ್ಯತೆ ನೀಡುವ ಸಲುವಾಗಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ABP-C ವೋಟರ್ ಸಮೀಕ್ಷೆಯಲ್ಲಿ BJP ಗೆ ಬಹುಮತ? ಸುಳ್ಳು ಅಂಕಿ ಅಂಶ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights