ಫ್ಯಾಕ್ಟ್‌ಚೆಕ್ : ನಿತಿನ್ ಗಡ್ಕರಿಯ ಕ್ಷಮೆ ಕೇಳಿದ ಕೇಜ್ರಿವಾಲ್ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸೂರತ್‌ನಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ವಿಷಯದ ಮಾತನಾಡಿ ಗಾಂಧಿಯವರ ಅನರ್ಹತೆಗೆ ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಮೇಲೂ ದಾಳಿ ನಡೆಸಬಹುದೆಂದು ಹೆದರಿ ಕ್ಷಮೆಯಾಚನೆಯ ಪತ್ರವನ್ನು ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳ್ಳಲ್ಲಿ ಹಂಚಿಕೊಳ್ಳಲಾಗಿದೆ.
ನಿತಿನ್ ಗಡ್ಕರಿ ಅವರು ಅರವಿಂದ್ ಕೇಜ್ರಿವಾಲ್ ಅವರ ಕ್ಷಮೆಯಾಚನೆಯ ಪತ್ರವನ್ನು ಓದುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಅರವಿಂದ್ ಕೇಜ್ರಿವಾಲ್ ನಿಜವಾಗಿಯೂ ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶಿಲಿಸಲು ಗೂಗಲ್ ಸರ್ಚ್ ಮಾಡಿದಾಗ, ‘ಹಿಂದೂಸ್ತಾನ್ ಟೈಮ್ಸ್’ ಮತ್ತು ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿ ಮೂಲ ಚಿತ್ರವನ್ನು ಕಂಡುಕೊಂಡಿದ್ದೇವೆ. ಲಭ್ಯವಾದ ವಿವರಣೆಯ ಪ್ರಕಾರ ಸೆಪ್ಟೆಂಬರ್ 16, 2014 ರಂದು ನವದೆಹಲಿಯಲ್ಲಿರುವ ಸಾರಿಗೆ ಭವನದಲ್ಲಿ ಇ-ರಿಕ್ಷಾಗಳನ್ನು ಕ್ರಮಬದ್ಧಗೊಳಿಸುವ ಕುರಿತು ನಡೆದ ಸಭೆಯ ಚಿತ್ರ ಎಂದು ತಿಳಿದು ಬಂದಿದೆ.
Gave a copy of my book "India Aspires" to former Chief Minister Delhi Shri @ArvindKejriwal pic.twitter.com/02hq5mLobk
— Nitin Gadkari (@nitin_gadkari) September 16, 2014
2018ರಲ್ಲಿ ಕ್ಷಮೆಯಾಚಿಸಿದ್ದ ಕೇಜ್ರಿವಾಲ್ :
2014 ರಲ್ಲಿ, ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ‘ಭಾರತದ ಅತ್ಯಂತ ಭ್ರಷ್ಟ’ ಪಟ್ಟಿಯಲ್ಲಿ ನಿತಿನ್ ಗಡ್ಕರಿ ಅವರ ಹೆಸರು ಇದೆ ಎಂದು ಉಲ್ಲೇಖಿಸಿದ್ದರು. ಕೇಜ್ರಿವಾಲ್ ತಮ್ಮ ಹೆಸರನ್ನು ಸೇರಿಸಿದ್ದಕ್ಕಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದರು. ನಂತರ 2018 ರಲ್ಲಿ, ಎಎಪಿ ನಾಯಕ ಕೇಜ್ರಿವಾಲ್ ಅವರು ನೀಡಿದ ಹೇಳಿಕೆಗೆ ವಿಷಾದಿಸಿ ಕ್ಷಮೆಯಾಚಿಸುವಂತೆ ಗಡ್ಕರಿ ಪತ್ರವನ್ನು ಸಲ್ಲಿಸಿದರು. ಇದನ್ನು ಟೈಮ್ಸ್ ಆಫ್ ಇಂಡಿಯಾ ಮತ್ತು ಟೈಮ್ಸ್ ನೌ ಮಾಧ್ಯಮಗಳು ಮಾರ್ಚ್ 2018 ರಲ್ಲಿ ವರದಿ ಮಾಡಿವೆ.
ಕೇಜ್ರಿವಾಲ್ ಅವರ ಕ್ಷಮಾಪಣೆ ಪತ್ರದ ನೀಡಿದ ನಂತರ ನಿತಿನ್ ಗಡ್ಕರಿ ತಮ್ಮ ದೂರನ್ನು ಹಿಂಪಡೆದಿದ್ದರು. ಇಂಡಿಯಾ ಟುಡೇ ಮಾರ್ಚ್ 2018 ರ ಲೇಖನದಲ್ಲಿ ದೂರು ಪತ್ರವನ್ನು ಪ್ರಕಟಿಸಿ ವರದಿ ಮಾಡಿದೆ.
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಚಿತ್ರಕ್ಕೂ 2018 ರ ಘಟನೆಗೂ ಸಂಬಂಧವಿಲ್ಲ. ಸದ್ಯ ಅರವಿಂದ್ ಕೇಜ್ರಿವಾಲ್ ನಿತಿನ್ ಗಟ್ಕರಿಯನ್ನು ಕ್ಷಮೆಯಾಚಿಸಿ ಕ್ಷಮಾಪಣೆ ಪತ್ರವನ್ನು ನೀಡುತ್ತಿದ್ದಾರೆ ಎಂದು 2014ರಲ್ಲಿ ಇ-ರಿಕ್ಷಾಗಳನ್ನು ಕ್ರಮಬದ್ಧಗೊಳಿಸುವ ಕಾರಣಕ್ಕೆ ನಡೆದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್, ನಿತಿನ್ ಗಡ್ಕರಿಗೆ ನೀಡಿದ ಮನವಿ ಪತ್ರದ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಸಾವರ್ಕರ್ ಕುರಿತ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ರಾ ರಾಹುಲ್ ಗಾಂಧಿ?