ಫ್ಯಾಕ್ಟ್‌ಚೆಕ್ : ರೈಲ್ವೆ ಟ್ರ್ಯಾಕ್ ಬಳಿ ನಿಂತು ಮೊಬೈಲ್‌ನಲ್ಲಿ ಮಾತನಾಡಿದಕ್ಕೆ ಕರೆಂಟ್ ಶಾಕ್ ತಗುಲಿದೆಯೇ?

ಹಳದಿ ಪಟ್ಟಿಯನ್ನು ಕ್ರಾಸ್ ಮಾಡಿ ನಿಂತು ರೈಲ್ವೆ ಪ್ಲಾಟ್‌ಪಾರ್ಮ್‌ನಲ್ಲಿ ಮಾತನಾಡುತ್ತಿದ್ದ ವೇಳೆ  ಮೊಬೈಲ್ ಫೋನ್‌ನಿಂದ ಹೊಮ್ಮಿದ ವಿದ್ಯುತ್ ಶಾಕ್‌ಗೆ ಟಿಕೆಟ್ ಪರಿವೀಕ್ಷಕರು (ಟಿಟಿಇ) ಸಾವನ್ನಪ್ಪಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ತನ್ನ ಸೆಲ್ ಫೋನ್‌ನಿಂದ ವಿದ್ಯುದಾಘಾತಕ್ಕೊಳಗಾಗಿದ್ದಾನೆ ಎಂದು ಹೇಳುವ ಗೊಂದಲದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹಳದಿ ಗೆರೆಯನ್ನು ದಾಟಬೇಡಿ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ದುರ್ಘಟನೆಗೆ ಮೊಬೈಲ್ ಕಾರಣವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ,   ಡಿಸೆಂಬರ್ 8, 2022 ರಂದು ಅದೇ ವೈರಲ್ ವೀಡಿಯೊವನ್ನು ಹೊಂದಿರುವ ರೈಲ್ವೆ ಅಧಿಕಾರಿ ಆನಂದ್ ರುಪ್ಪನಗುಡಿ ಅವರು ಪೋಸ್ಟ್ ಮಾಡಿದ ಟ್ವೀಟ್ ಲಭ್ಯವಾಗಿದೆ.

ಖರಗ್‌ಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಟಿಟಿಇಗಳ ಮೇಲೆ ವಿದ್ಯುತ್ ಹರಿಯುತ್ತಿದ್ದ ಕರೆಂಟ್ ವೈರೊಂದು ತುಂಡಾಗಿ ಬಿದ್ದ ಪರಿಣಾಮ ಅವರಿಬ್ಬರಿಗೆ ಕರೆಂಟ್ ಶಾಕ್ ತಗುಲಿ ಒದ್ದಾಡಿದ ಘಟನೆ ಪಶ್ಚಿಮ ಬಂಗಾಳದ ಖರಗ್ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಹಾಗೂ ರೈಲ್ವೆಯ ಟಿಕೆಟ್ ಪರೀಕ್ಷಕರು (TTE)ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಆಘಾತಕಾರಿ ಘಟನೆಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುವಂತಿದೆ. ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಇಬ್ಬರು ನಿಂತುಕೊಂಡು ಮಾತನಾಡುತ್ತಿರುತ್ತಾರೆ. ಅಷ್ಟರಲ್ಲಿ ಕರೆಂಟ್ ವಯರ್ ಒಮ್ಮೆಲೇ ಕಟ್ ಆಗಿ ಇವರ ಮೇಲೆ ಬಿದ್ದಿದೆ. ಕರೆಂಟ್ ವಯರ್ ಮೈಮೇಲೆ ಬಿದ್ದು ಸೆಳೆದ ರಭಸಕ್ಕೆ ಒಬ್ಬರು ರೈಲು ಹಳಿಯ ಮೇಲೆ ಬಿದ್ದಿದ್ದಾರೆ. ಮತ್ತೊಬ್ಬರು ಅಲ್ಲಿಂದ ಹಿಂದಕ್ಕೆ ಸರಿದು ಪಾರಾಗಿದ್ದಾರೆ. ಬಹುತೇಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಬಿದ್ದಿರುವುದು ವಿಡಿಯೋದಲ್ಲಿ ನೋಡಬಹುದು.

Image

ಹಲವು ಸುದ್ದಿ ಮಾಧ್ಯಮಗಳು ಇದೇ ಘಟನೆಯನ್ನು ವರದಿ ಮಾಡಿವೆ. ಪಶ್ಚಿಮ ಬಂಗಾಳದ ಖರಗ್‌ಪುರದ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಟಿಕೆಟ್ ಕಲೆಕ್ಟರ್‌ಗಳು ಪರಸ್ಪರ ಮಾತನಾಡುತ್ತಿದ್ದ ವೇಳೆ ಲೈವ್ ವೈರ್ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಟಿಕೆಟ್ ಕಲೆಕ್ಟರ್‌ನ ತಲೆಗೆ ಸ್ಪರ್ಶಿಸಿದೆ.  ಟಿಟಿಇ ರೈಲು ಹಳಿಯ ಮೇಲೆ ಬಿದ್ದಿದ್ದಾರೆ. ಕೂಡಲೆ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ. ಈ ಅವಘಡದಲ್ಲಿ ವಿದ್ಯುತ್ ತಗುಲಿರುವ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ದೇಹದ ಮೇಲ್ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ ಮಾಡಿದೆ ”.

ಒಟ್ಟಾರೆಯಾಗಿ ಹೇಳುವುದಾದರೆ, ಹೈಟೆನ್ಷನ್ ಲೈವ್ ವೈರ್ ಟಿಟಿಇ ತಲೆಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಶಾಕ್ ತಗುಲಿದೆ ಹೊರತು ಸೆಲ್ ಫೋನ್ ನಿಂದ ಅಲ್ಲ ಎಂಬುದು ಅಧಿಕಾರಿಗಳು ನೀಡಿದ ಮಾಹಿತಿಯಿಂದ ಸ್ಪಷ್ಟವಾಗಿದೆ. ಮೊಬೈಲ್‌ನಿಂದ ಈ ರೀತಿ ಶಾಕ್ ಹೊಡೆದು ನೆಲಕ್ಕುರುಳಿದ್ದಾರೆ ಎಂಬುದು ಸುಳ್ಳು. ಅಲ್ಲದೆ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇರಳದ ಬಾಲ ಗಾಯಕ ಆದಿತ್ಯ ಸುರೇಶ್‌ನನ್ನು ಎಸ್‌ಪಿಬಿ ಮೊಮ್ಮಗ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights