ಮಲೇಷ್ಯಾ ಮಹಿಳೆ ಮೇಲೆ ಅತ್ಯಾಚಾರ; ಮಾಜಿ ಸಚಿವ, AIADMK ಮುಖಂಡ ಮಣಿಕಂಠನ್ ಬಂಧನ!

ಮಲೇಷ್ಯಾ ಮೂಲದ ಮಹಿಳೆ, ನಟಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ತಮಿಳುನಾಡು ಮಾಜಿ ಸಚಿವ, ಎಐಎಡಿಎಂಕೆ ಪಕ್ಷದ ಮುಖಂಡ ಎಂ ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಾಜಿ ಸಚಿವರು ಮದುವೆಯ ನೆಪದಲ್ಲಿ ತನಗೆ ಮೋಸ ಮಾಡಿರುವುದಾಗಿ ನಟಿ ಶಾಂತಿನಿ ದೂರು ನೀಡಿದ್ದರು. ಮಾಜಿ ಸಚಿವ ಮಣಿಕಂದನ್ ವಿರುದ್ಧ ಚೆನ್ನೈನ ಅಡ್ಯಾರ್ ಆಲ್ ವುಮೆನ್ ಪೊಲೀಸರು ಐಪಿಸಿ ಸೆಕ್ಷನ್ 376, 323, 417, 323, 506 ಅಡಿಯಲ್ಲಿ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿರುವುದರ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಮಾಜಿ ಸಚಿವ ಮಣಿಕಂದನ್ ಕಳೆದ ಐದು ವರ್ಷಗಳಿಂದ ತನ್ನ ಜತೆ ಲಿವ್‌ ಇನ್‌ ಸಂಬಂಧ ಹೊಂದಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದರು. ತಾನು ಗರ್ಭಿಣಿಯಾದಾಗ ಬಲವಂತದಿಂದ ಗರ್ಭಪಾತ ಮಾಡಿಸಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದರು.

ತಮ್ಮಿಬ್ಬರ ನಡುವಿನ ಸಂಬಂಧದಿಂದಾಗಿ ಮೂರು ಬಾರಿ ಗರ್ಭಪಾತ ಮಾಡಿಸಿದ್ದು, ಮಾಜಿ ಸಚಿವ ಪ್ರತಿ ಬಾರಿಯೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಮದುವೆಯಾದ ಮೇಲೆ ಮಗುವಿಗೆ ಜನನ ನೀಡಲಿ ಎಂದು ಆತ ಹೇಳಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ವರದಿ ವಿವರಿಸಿದೆ.

ಒಂದು ವೇಳೆ ದೇಶವನ್ನು ಬಿಟ್ಟು ಹೋಗದಿದ್ದರೆ ತನ್ನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಮಣಿಕಂದನ್ ಬೆದರಿಕೆ ಒಡ್ಡಿದ್ದಲ್ಲದೇ, ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದರು.

ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂಠನ್‌ಗೆ 2017ರಲ್ಲಿ ಶಾಂತಿನಿ ಪರಿಚಯವಾಗಿದೆ. ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಶಾಂತಿನಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದರು.

ರಾಮನಾಥಪುರಂ ಕ್ಷೇತ್ರದಿಂದ 2016ರಿಂದ 2019ರ ತನಕ ಶಾಸಕರಾಗಿ ಆಯ್ಕೆಯಾಗಿದ್ದ ಮಣಿಕಂಠನ್ ಈಗಾಗಲೇ ಮದುವೆಯಾಗಿದೆ. ಆದರೂ ಶಾಂತಿನಿ ಜೊತೆ ಮಣಿಕಂಠನ್ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಬೇಡಿಕೆ ಒಡ್ಡಿದರೆ, ಬೆದರಿಕೆ ಹಾಕುತ್ತಿದ್ದರು ಎಂದು ಶಾಂತಿನಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ನೀಡದೆ BJP ಸೇರಿರುವ 10 ಶಾಸಕರು ಪಕ್ಷಕ್ಕೆ ಮರಳಲು ಅವಕಾಶವಿಲ್ಲ: ದಿನೇಶ್‌ ಗುಂಡೂರಾವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights