ಕವನ: ಉಮರನ ಒಸಗೆ – ದ್ವೇಶದ ಕೋಟೆಯಲ್ಲಿ ಪ್ರೀತಿಯ ಸ್ಪೋಟಕ

ಜೆಎನ್‌ಯುವಿನ ಮಾಜಿ ವಿದ್ಯಾರ್ಥಿ ನಾಯಕ, ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್‌ ಅವರನ್ನು ಯುಎಪಿಎ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಉಮರ್ ಖಾಲಿದ್ ಅವರಿಗೆ ಭಯೋತ್ಪಾದಕರೊಂದಿಗೆ ನಂಟಿದೆ ಎಂದು ಮಾಧ್ಯಮಗಳು ಭಿತ್ತರಿಸುತ್ತಿವೆ. ಅವರ ಬಂಧನದ ಹಿನ್ನೆಲೆಯಲ್ಲಿ ಸಾಮಾಜಿಕ ಚಿಂತಕ ಶಿವಸುಂದರ್ ಅವರು ಉಮರನ ಒಸಗೆ ಎಂಬ ಕವನದ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ..

ಉಮರನ ಒಸಗೆ

ನಾನು ಉಮರ್ ಖಾಲಿದ್
ಅರ್ಥ: ಬದುಕು ವಿಶಾಲ ಬಯಲು
ಏಕಲವ್ಯ , ಶಂಭೂಕರ ಒಕ್ಕಲು
ಬುದ್ಧ ಬಸವ ಅಂಬೇಡ್ಕರರ ಬಳಗ..

ಹೌದು ,
ನಾನೊಬ್ಬ ಭಯೋತ್ಪಾದಕ

ದ್ವೇಶದ ಕೋಟೆಯಲ್ಲಿ
ಪ್ರೀತಿಯ ಸ್ಪೋಟಕ ಅಡಗಿಸಿಟ್ಟ
ದ್ವೇಶದ್ರೋಹಿ

ಸುಳ್ಳಿನ ಸಂದೂಕದಲ್ಲಿ
ಸತ್ಯದ ಕಿಡಿಯನ್ನು ಬಚ್ಚಿಟ್ಟ
ವಿಫಲ ಸಂಚುಕೋರ

ಭೀಭತ್ಸ ಮೌನದ ಬೀದಿಗಳಲ್ಲಿ
ಮಾತಿನ ಮೊಟ್ಟೆ ಒಡೆಯಲು
ಗುಟ್ಟು ಕಾವು ಕೊಟ್ಟ
ಗಲಭೆಕೋರ

ಬಲ್ಲೆ ..ಬಲ್ಲೆ
ಇರುಳ ದೀರ್ಘ ಬಲ್ಲೆ
ಉಮರ್ ಖೈದಾದರೂ
ಉಮಂಗ್ ಬಿಡಲೊಲ್ಲೆ…

ಸೂರ್ಯನನ್ನು ಸೆರೆಗೆ ದೂಡಿ
ಹಗಲ ತೊಗಲ ಕಳಚಿದರೂ
ಉರಿವುದು ಸುಡುವ ಬೆಳಕಿನಲ್ಲೇ

ಇರುಳ ದೊರೆಗಳೇ… ಬರೆದುಕೊಳ್ಳಿ …
ನನ್ನ ಹೆಸರು ಸುಂದರ ಸತ್ಯ
ನಾನು ಉಮರನ ಒಕ್ಕಲು
ವಿಳಾಸ ವಿಶಾಲ ಬಯಲು

– ಶಿವಸುಂದರ್


Read Also: ಒಳಮೀಸಲಾತಿಯ ತತ್ವವಿಲ್ಲದೇ ಮೀಸಲಾತಿಗೆ ಸತ್ವವಿರದು: ಅಧ್ಯಯನ ಬರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights