ಫ್ಯಾಕ್ಟ್‌ಚೆಕ್ : ಈ ಅಶ್ಲೀಲ ಚಿತ್ರದಲ್ಲಿ ಇರುವ ವ್ಯಕ್ತಿ ರಾಮಮಂದಿರ ಅರ್ಚಕ ಮೋಹಿತ್ ಪಾಂಡೆಯಲ್ಲ! ಮತ್ತ್ಯಾರು?

ಅಯೋಧ್ಯೆ ರಾಮ ಮಂದಿರದ ಅರ್ಚಕರಾಗಿ ಆಯ್ಕೆಯಾಗಿರುವ ಮೋಹಿತ್ ಪಾಂಡೆ ಅವರ ಚಿತ್ರದೊಂದಿಗೆ ಮತ್ತೊಂದು ಅಶ್ಲೀಲ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಮೋಹಿತ್ ಪಾಂಡೆ ಅವರ ರಾಸಲೀಲೆ “ಅಯ್ಯೋ ಇವರೇ ನೋಡಿ ಅಯೋಧ್ಯೆಯ ರಾಮ ಮಂದಿರ ದೇವಸ್ಥಾನದ ಅರ್ಚಕರು?” ಬಿಜೆಪಿ ಹೇಗೆ ಪತನವಾಗಲಿದೆ ನೋಡ್ತಾಯಿರಿ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಅಶ್ಲಿಲ ಚಿತ್ರದಲ್ಲಿ ಇರುವ ವ್ಯಕ್ತಿ ಮೋಹಿತ್ ಪಾಂಡೆಯೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಇರುವ ವ್ಯಕ್ತಿ ಶ್ರೀರಾಮ ಮಂದಿರ ದೇವಾಲಯದ ಅರ್ಚಕರಲ್ಲಿ ಒಬ್ಬರಾದ ಮೋಹಿತ್ ಪಾಂಡೆ ಅವರದ್ದೆ ಎಂದು ಪರಿಶೀಲಿಸಿದಾಗ, ಈ ಫೋಟೋಗೆ ಸಂಬಂಧಿಸಿದ ಹಲವು ಸುದ್ದಿ ಮತ್ತು ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ ಚಿತ್ರದಲ್ಲಿರುವ ವ್ಯಕ್ತಿ ಮೋಹಿತ್ ಪಾಂಡೆ ಅಲ್ಲ.

ಅಶ್ಲೀಲ ಚಿತ್ರದಲ್ಲಿರುವ ವ್ಯಕ್ತಿ ಮೋಹಿತ್ ಪಾಂಡೆ ಅಲ್ಲ

ವರದಿಗಳ ಪ್ರಕಾರ, ಒಂದೇ ಜೋಡಿಯನ್ನು ಒಳಗೊಂಡ ಹಲವಾರು ವಿಡಿಯೋಗಳು ಅಶ್ಲೀಲ ವೆಬ್‌ಸೈಟ್‌ನಲ್ಲಿ ಪತ್ತೆಯಾಗಿವೆ. ಈಗ ವಿವಾದಕ್ಕೆ ಕಾರಣವಾಗಿರುವ ಅಶ್ಲೀಲ ವಿಡಿಯೋದಲ್ಲಿ ಇರುವುದು ಮೋಹಿತ್ ಪಾಂಡೆಯಲ್ಲ. ಬದಲಿಗೆ ಆಂಧ್ರ ಪ್ರದೇಶದ ಅರ್ಚಕರೊಬ್ಬರಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಮೋಹಿತ್ ಪಾಂಡೆ ಅಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ಅಯೋಧ್ಯೆಯ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿರುವ ಮೋಹಿತ್​ ಪಾಂಡೆ ಹೋಲುವ ವ್ಯಕ್ತಿಯೋರ್ವ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ನಕಲಿ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಶ್ಲೀಲ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

https://twitter.com/sank80551/status/1734384419350450230

 

ರಾಮ ಮಂದಿರದ ಅರ್ಚಕ ಮೋಹಿತ್ ಪಾಂಡೆ ಅವರನ್ನು ಹೋಲುವ ವ್ಯಕ್ತಿಯ ಅಶ್ಲೀಲ ಚಿತ್ರವನ್ನು ಹಿತೇಂದ್ರ ಹಂಚಿಕೊಂಡ ಬೆನ್ನಲ್ಲೆ  ವೈಭವ್ ಮಕ್ವಾನಾ ಎಂಬುವವರು  ಹಿತೇಂದ್ರ ಪಿತಾಡಿಯಾ ಅವರ ವಿರುದ್ದ ದೂರು ನೀಡಿದ್ದರು.  ಸುದ್ದಿ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಗೂ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಫ್ಯಾಕ್ಟ್​ಚೆಕ್​ ಮಾಡಿರುವ ಪೊಲೀಸರು ಇದು ನಕಲಿ ಸುದ್ದಿ ಎಂದು ಸಾಬೀತುಪಡಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್​ ಮುಖಂಡ ಹಿತೇಂದ್ರ ಪಿತಾಡಿಯಾರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನ ವಿರುದ್ಧ ಭಾರತ ದಂಡ ಸಂಹಿತೆ (IPC Section) 469, 509, 295A ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಗುಜರಾತಿ ಭಾಷೆಯ ವೆಬ್‌ಸೈಟ್ “ಗುಜರಾತಿ ಮಿಡ್‌ಡೇ” ನಲ್ಲಿನ ಲೇಖನದಲ್ಲಿ ಹಿತೇಂದ್ರ ಪಿತಾಡಿಯಾ ಅವರು ಅಯೋಧ್ಯೆ ರಾಮ ಮಂದಿರದ ಅರ್ಚಕ ಎಂದು ಯಾವುದೋ ಸಂಬಂಧವಿಲ್ಲದ ವ್ಯಕ್ತಿಯ ನಕಲಿ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚುವರಿಯಾಗಿ, ‘ಇಂಡಿಯಾ ಟುಡೆ’ ವೆಬ್‌ಸೈಟ್ ಕೂಡ ಈ ಘಟನೆಯ ಸುದ್ದಿಯನ್ನು ಪ್ರಕಟಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಂಧ್ರ ಪ್ರದೇಶದ ಅರ್ಚಕರೊಬ್ಬರ  ಅಶ್ಲೀಲ ಚಿತ್ರವನ್ನು ಹಂಚಿಕೊಂಡು, ರಾಮ ಮಂದಿರದ ಅರ್ಚಕ ಮೋಹಿತ್ ಪಾಂಡೆ ಅವರ ಅಶ್ಲೀಲ ಚಿತ್ರ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ನಕಲಿ ಚಿತ್ರವನ್ನು ಹಂಚಿಕೊಂಡ ಹಿತೇಂದ್ರ ಪಿತಾಡಿಯಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗಾಗಿ ಇದೊಂದು ನಕಲಿ ಚಿತ್ರ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೊಹ್ಲಿ ಮತ್ತು ಅನುಷ್ಕಾ ಗೋಮಾಂಸ ಸೇವಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights