ಹಾಸ್ಟೆಲ್‌ ಯುವತಿಯರಿಗೆ ಬೆತ್ತಲಾಗಿ ನೃತ್ಯಮಾಡುವಂತೆ ಪೊಲೀಸರ ಒತ್ತಾಯ; ತನಿಖೆಗೆ ಮಹಾ ಸರ್ಕಾರ ಆದೇಶ

ಯುವತಿಯರನ್ನು ಬೆತ್ತಲಾಗಿ ನೃತ್ಯ ಮಾಡುವಂತೆ ಪೊಲೀಸರು ಒತ್ತಾಯಿಸಿರುವ ಘಟನೆ ಮಹಾರಾಷ್ಟ್ರದ ಜಲ್‌ಗಾಂವ್‌ ಹಾಸ್ಟೆಲ್‌ನಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹಮಂತ್ರಿ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ.

ಈ ಘಟನೆ ಬಗ್ಗೆ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಸರ್ಕಾರವನ್ನುತರಾಟೆಗೆ ತೆಗೆದುಕೊಂಡ ನಂತರ, ಗೃಹ ಸಚಿವರು ತನಿಖೆಗೆ ಆದೇಶಿಸಿದ್ದು, ತನಿಖೆಗೆ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಜಲ್‌ಗಾಂವ್‌ ಹಾಸ್ಟೆಲ್‌ನ ಯುವತಿಯರು ದೂರಿದಂತೆ, “ಕೆಲವು ಪೊಲೀಸರು ಮತ್ತು ಹೊರಗಿನವರು ತನಿಖೆಯ ನೆಪದಲ್ಲಿ ಹಾಸ್ಟೆಲ್‌ ಒಳಗೆ ಬಂದು ಬೆತ್ತಲಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ” ಎಂದು ಹಲವು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಅದರ ವೀಡಿಯೊ ಕ್ಲಿಪ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

“ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಕೋರಲಾಗಿದೆ. ವರದಿಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು” ಅನಿಲ್ ದೇಶಮುಖ್ ಹೇಳಿದರು.

ಆದರೆ ಇದು ಸರ್ಕಾರದ ವೈಫಲ್ಯ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಹತ್ರಾಸ್‌ ಪ್ರಕರಣ: ರೈತನ ಹತ್ಯೆಗೈದ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights