6 ವರ್ಷದ ಮಗುವನ್ನು ನದಿಗೆ ಎಸೆದು ಕಾಣೆಯಾಗಿದ್ದಾನೆಂದು ದೂರು ನೀಡಿದ ತಾಯಿ!

6 ವರ್ಷದ ಮಗುವನ್ನು ನದಿಗೆ ಎಸೆದು ಕಾಣೆಯಾಗಿದ್ದಾನೆಂದು ದೂರು ನೀಡಿದ ತಾಯಿಯನ್ನು ಬಂಧಿಸಿದ ಘಟನೆ ಮಿಡಲ್‌ಟೌನ್ ನಲ್ಲಿ ನಡೆದಿದೆ.

ತಾಯಿ ಗೋಸ್ನಿ (29) ಮತ್ತು ಆಕೆಯ ಗೆಳೆಯ 42 ವರ್ಷದ ಜೇಮ್ಸ್ ಹ್ಯಾಮಿಲ್ಟನ್ ಇಬ್ಬರು ಸೇರಿ 6 ವರ್ಷದ ಮಗ ಜೇಮ್ಸ್ ಹಚಿನ್ಸನ್ ನ್ನು ನದಿಗೆ ಎಸೆದಿದ್ದಾರೆ.

ಮಿಡಲ್‌ಟೌನ್ ಪೊಲೀಸರು ತಕ್ಷಣ ಶೋಧಿಸಲು ಪ್ರಾರಂಭಿಸಿದಾಗ ತಾಯಿಯೇ ಮಗುವನ್ನು ನದಿಗೆ ಎಸೆದಿರುವುದು ಬಯಲಾಗಿದೆ. ದೂರು ನೀಡುವ ಹಿಂದಿನ ದಿನ ತಾಯಿ ಗೋಸ್ನಿ ಮಗುವನ್ನು ಉದ್ಯಾನವನದಲ್ಲಿ ಆಡಲೆಂದು ಕರೆದೊಯ್ದಿದ್ದಾಳೆ. ಅಲ್ಲ ಆ ಮಗುವನ್ನು ಬಿಟ್ಟು ಹೋಗಲು ಪ್ರಯತ್ನಿಸಿದ್ದಾಳೆ ಆದರೆ ಅದು ಸಾಧ್ಯವಾಗಿಲ್ಲ. ನಂತರ ಗೆಳೆಯ ಜೇಮ್ಸ್ ಹ್ಯಾಮಿಲ್ಟನ್ ಸಾಹಯ ಪಡೆದು ಮಗುವನ್ನು ನದಿಗೆ ಎಸೆದು ಸಾಕ್ಷಿಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದಾಳೆ. ಬಳಿಕ ದೂರು ನೀಡಲು ಬಂದ ತಾಯಿಯ ಮುಖದಲ್ಲಿ ಗೊಂದಲವನ್ನು ಕಾಣದ ಪೊಲೀಸರಿಗೆ ಅನುಮಾನ ಬಂದಿದೆ. ಆಕೆಯನ್ನೇ ವಿಚಾರಿಸಿದಾಗ ಸೋಮವಾರ ತಾಯಿ ಕೃತ್ಯ ಬಯಲಾಗಿದೆ. ಗೊಸ್ನಿ ತಾನೇ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ ಘಟನೆಗೆ ಕಾರಣ ಮಾತ್ರ ತಿಳಿದು ಬಂದಿಲ್ಲ.

ಈ ಪ್ರಕರಣ ಸಿನ್ಸಿನಾಟಿಯಿಂದ ಉತ್ತರಕ್ಕೆ 35 ಮೈಲಿ ದೂರದಲ್ಲಿರುವ 48,000 ಜನರ ನಗರವನ್ನು ಬೆಚ್ಚಿಬೀಳಿಸಿದೆ, ನೆರೆಹೊರೆಯವರು ಮತ್ತು ಶಿಕ್ಷಕರು ಕ್ರೂರಿ ತಾಯಿಯನ್ನು ಬಂಧಿಸಿದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ಮುದ್ದಾದ ಮಗುವಿಗಾಗಿ ಉದ್ಯಾನವನದಲ್ಲಿ ನೂರಾರು ಜನ ಸೇರಿ ಸಂತಾಪ ಸೂಚಿಸಿದ್ದಾರೆ.

ಮಗುವಿನ ತಂದೆ ಲೆವಿಸ್ ಹಚಿನ್ಸನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನಾನು ಅವನಿಗೆ ನ್ಯಾಯವನ್ನು ಬಯಸುತ್ತೇನೆ, ನ್ಯಾಯ ನನಗೆ ಬೇಕು”ಎಂದು ಅವರು ಡೈಲಿ ನ್ಯೂಸ್ಗೆ ತಿಳಿಸಿದ್ದಾರೆ,

Spread the love

Leave a Reply

Your email address will not be published. Required fields are marked *