ಮಗಳ ತಲೆ ಕತ್ತರಿಸಿ ರುಂಡದೊಂದಿಗೆ ಶಾಂತವಾಗಿ ರಸ್ತೆಯಲ್ಲಿ ನಡೆದಾಡಿದ ತಂದೆ…!

ಉತ್ತರ ಪ್ರದೇಶದ ಹಾರ್ಡೊಯ್ ಜಿಲ್ಲೆಯ ಹಳ್ಳಿಯ ನಿವಾಸಿಗಳು ಬುಧವಾರ ಮಧ್ಯಾಹ್ನ ಆಘಾತಕ್ಕೊಳಗಾಗಿದ್ದಾರೆ. ಪಾಪಿ ತಂದೆಯೊಬ್ಬ ಮಗಳ ತಲೆಯನ್ನು ಕತ್ತರಿಸಿ ರುಂಡವನ್ನು ಹಿಡಿದು ರಸ್ತೆಯಲ್ಲಿ ನಡೆದಾಡಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.

ಹೌದು..  17 ವರ್ಷದ ಮಗಳ ಕತ್ತರಿಸಿದ ತಂದೆ ಆಕೆಯ ತಲೆಯೊಂದಿಗೆ ಶಾಂತವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಜನ ದಂಗಾಗಿದ್ದಾರೆ. ಲಖನೌದಿಂದ 200 ಕಿ.ಮೀ ದೂರದಲ್ಲಿರುವ ಪಾಂಡೇತರ ಗ್ರಾಮದಲ್ಲಿ ಸರ್ವೇಶ್ ಕುಮಾರ್ ಅವರು ತಮ್ಮ ಮಗಳ ತಲೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗುರುತಿಸಿ ಪೊಲೀಸರು ಆತನನ್ನು ಕರೆದಿದ್ದಾರೆ.

ಆತನನ್ನು ತಡೆಯಲು ಇಬ್ಬರು ಅಧಿಕಾರಿಗಳು ಬಂದು ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ನಂತರ ಅವರು ಅವನ ಹೆಸರನ್ನು ಜೊತೆಗೆ ತಲೆ  ಎಲ್ಲಿಂದ ಮತ್ತು ಯಾರ ತಲೆ ಎಂದು ಕೇಳುತ್ತಾರೆ. ಸರ್ವೇಶ್ ಹಿಂಜರಿಕೆಯಿಲ್ಲದೆ ಉತ್ತರಿಸುತ್ತಾನೆ.

ವೀಡಿಯೊದಲ್ಲಿ, ಅವನು ತನ್ನ ಮಗಳನ್ನು ತೀಕ್ಷ್ಣವಾದ ಉಪಕರಣದಿಂದ ಶಿರಚ್ಚೇದ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.  ಏಕೆಂದರೆ ಒಬ್ಬ ಪುರುಷನೊಂದಿಗಿನ ಅವಳ ಸಂಬಂಧದ ಬಗ್ಗೆ ಅವನು ಅತೃಪ್ತಿ ಹೊಂದಿದ್ದನ್ನು ಹೇಳಿಕೊಂಡಿದ್ದಾನೆ.

“ನಾನೇ ಈ ಕೆಲಸವನ್ನು  ಮಾಡಿದ್ದೇನೆ. ಈ ಕೆಲಸ ಮಾಡುವಾಗ ಬೇರೆ ಯಾರೂ ಇರಲಿಲ್ಲ. ನಾನು ಮನೆ ಬೀಗ ಹಾಕಿ ಮಗಳನ್ನು ತಲೆ ಕತ್ತರಿಸಿದ್ದೇನೆ. ದೇಹ ಕೋಣೆಯಲ್ಲಿದೆ” ಎಂದು ತಂದೆ ಹೇಳುತ್ತಾರೆ. ಪೊಲೀಸರು ತಲೆ ತಗ್ಗಿಸಿ ರಸ್ತೆಯ ಪಕ್ಕದಲ್ಲಿ ಕುಳಿತುಕೊಳ್ಳುವಂತೆ ಕೇಳುತ್ತಾರೆ. ನಂತರ ಪೊಲೀಸರು ಸರ್ವೇಶ್ ಅವರನ್ನು ಪೊಲೀಸ್ ಠಾಣೆಗೆ ಕರೆತಂದು ಬಂಧಿಸಿದ್ದಾರೆ.

“ಸರ್ವೇಶ್ ಎಂಬ ವ್ಯಕ್ತಿಯು ತನ್ನ ಹದಿಹರೆಯದ ಮಗಳನ್ನು ಕೊಂದು ಅವಳ ಕತ್ತರಿಸಿದ ತಲೆಯನ್ನು ರಸ್ತೆಯ ಮೇಲೆ ಹೊತ್ತುಕೊಂಡು ಹೋಗುತ್ತಿದ್ದಾನೆ. ಅದರ ಬಗ್ಗೆ ಮಾಹಿತಿ ದೊರೆತ ಕೂಡಲೇ ನಾವು ಅವನನ್ನು ತಡೆದಿದ್ದೇವೆ ಮತ್ತು ಆತನನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ನಾವು ಫೋಟೋವನ್ನು ಗಂಭೀರವಾಗಿ ಗಮನಿಸಿದ್ದೇವೆ “ಎಂದು ಹರ್ಡೊಯ್ನಲ್ಲಿ ಪೋಸ್ಟ್ ಮಾಡಿದ ಪೊಲೀಸ್ ಅಧಿಕಾರಿಯಾಗಿದ್ದ ಕಪಿಲ್ ಡಿಯೋ ಸಿಂಗ್ ಹೇಳಿದ್ದಾರೆ.

2019 ರಲ್ಲಿ ಅತಿ ಹೆಚ್ಚು ಅಪರಾಧಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಪೋಕ್ಸೊ ಕಾಯ್ದೆಯಡಿ 7,444 ಪ್ರಕರಣಗಳೊಂದಿಗೆ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳು ನಡೆದಿವೆ, ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (6,402) ಮತ್ತು ಮಧ್ಯಪ್ರದೇಶ (6,053) ಪ್ರಕರಣಗಳು ಇವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights