ಫ್ಯಾಕ್ಟ್‌ಚೆಕ್ : ಅಯೋಧ್ಯೆಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಶ್ರೀರಾಮನ ವಿಗ್ರಹ ನಿರ್ಮಿಸುತ್ತಿರುವುದು ಮುಸ್ಲಿಮರಲ್ಲ

ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಜನವರಿ 22, 2024 ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ನಡೆಯಲಿದೆ ಎಂದು  ಕಾರ್ಯಕ್ರಮ ನಿಗದಿಯಾಗಿದೆ. ಈಗ ಎಲ್ಲರ ದೃಷ್ಟಿಯೂ ಶ್ರೀರಾಮನ ವಿಗ್ರಹದ ಮೇಲೆ ಕೇಂದ್ರೀಕೃತವಾಗಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸುವ ಶ್ರೀರಾಮನ ವಿಗ್ರಹವನ್ನು ಮುಸ್ಲಿಮರು ನಿರ್ಮಿಸುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

News 24's false claim of Shri Ram temple

ನ್ಯೂಸ್ 24 (ಆರ್ಕೈವ್ ಮಾಡಿದ ಲಿಂಕ್), ಪ್ರಚಾರ ಮಾಧ್ಯಮ ಪೋರ್ಟಲ್, ಟ್ವೀಟ್ ಮಾಡಿದ್ದು, ಹೀಗೆ ಬರೆದುಕೊಂಡಿದೆ, “ಜನವರಿಯಲ್ಲಿ  ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಶ್ರೀರಾಮ ಮೂರ್ತಿ  ಸಿದ್ಧವಾಗಿದೆ. ಬಂಗಾಳದ ಮೊಹಮ್ಮದ್ ಜಮಾಲುದ್ದೀನ್ ಅವರ ಮಗ ಬಿಟ್ಟು ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ತಂದೆ-ಮಗ ತಮ್ಮ ತಂಡದೊಂದಿಗೆ ಕರಕುಶಲತೆಯಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದೆ. ಎಂದು ಹಂಚಿಕೊಂಡಿದೆ.

ಜೆಡಿಯು ಕಾರ್ಯಕರ್ತ ಪ್ರತೀಕ್ ಪಟೇಲ್ (ಆರ್ಕೈವ್ ಮಾಡಿದ ಲಿಂಕ್) ಅವರು, ‘ರಾಷ್ಟ್ರೀಯ ಸಾಮರಸ್ಯದ ದೃಷ್ಟಿಯಿಂದ, ಅಯೋಧ್ಯೆಯಲ್ಲಿ ರಾಮಲಾಲಾ ವಿಗ್ರಹವನ್ನು ನಿರ್ಮಿಸಿದ ಮೊಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ಬಿಟ್ಟು ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು! ಅದು ಬೇರೆ ವಿಷಯ. ಗಂಗಾಜಲದಿಂದ ವಿಗ್ರಹವನ್ನು ಶುದ್ಧೀಕರಿಸಲಾಗುತ್ತದೆ, ಆದ್ದರಿಂದ “ನೀವು” ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.

ಹೀಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಾ ಅಯೋಧ್ಯ ರಾಮಮಂದಿರದಲ್ಲಿ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲು ಉದ್ದೇಶಿಸಿರುವ ಶ್ರೀರಾಮನ ಮೂರ್ತಿಯನ್ನು ಮುಸ್ಲಿಮರು ನಿರ್ಮಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಮ್ಮು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತನೆಗೆ ದೇಶದ ವಿವಿಧೆಡೆಗಳ ಪ್ರಸಿದ್ಧ 12 ಮಂದಿ ಶಿಲ್ಪಶಾಸ್ತ್ರ ಪರಿಣತರನ್ನು ಕರೆಸಲಾಗಿತ್ತು. ಅವರಲ್ಲಿ ಮೂವರು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ. ಶಿಲ್ಪಿಗಳು ರಾಮಲಲ್ಲಾನ ಮೂರ್ತಿ ಕೆತ್ತನೆಯ ಕೈಂಕರ್ಯದಲ್ಲಿ ಕಳೆದ ಆರು ತಿಂಗಳುಗಳಿಂದ ತೊಡಗಿದ್ದು, ಹಗಲಿರುಳು ಶ್ರಮಿಸುತ್ತಿದ್ದಾರೆ. ಎಂದು ವರದಿಯಾಗಿದೆ.

ಮೂವರು ಶಿಲ್ಪಿಗಳಲ್ಲಿ ಇಬ್ಬರು ಕನ್ನಡಿಗರು

ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತನೆಗೆ ದೇಶದ ವಿವಿಧೆಡೆಗಳ ಪ್ರಸಿದ್ಧ 12 ಮಂದಿ ಶಿಲ್ಪಶಾಸ್ತ್ರ ಪರಿಣತರನ್ನು ಕರೆಸಲಾಗಿತ್ತು. ಅವರಲ್ಲಿ ಮೂವರು ಶಿಲ್ಪಿಗಳನ್ನು ಆಯ್ಕೆ ಮಾಡಲಾಗಿದೆ. ಶಿಲ್ಪಿಗಳು ರಾಮಲಲ್ಲಾನ ಮೂರ್ತಿ ಕೆತ್ತನೆಯ ಕೈಂಕರ್ಯದಲ್ಲಿ ಕಳೆದ ಆರು ತಿಂಗಳುಗಳಿಂದ ತೊಡಗಿದ್ದು, ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಮೂವರು ಶಿಲ್ಪಿ ಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಮೂಲದ ಪ್ರಸ್ತುತ ಬೆಂಗಳೂರು ಬನಶಂಕರಿಯ ನಿವಾಸಿ ಗಣೇಶ್‌ ಭಟ್ ಒಬ್ಬರಾದರೆ, ಮೈಸೂರು ಮೂಲದ ಅರುಣ್‌ ರಾಜ್‌ ಮತ್ತೊಬ್ಬ ಕನ್ನಡಿಗ.

The Print  ಮತ್ತು Jagran  ಕೂಡ ಇದನ್ನೇ ವರದಿ ಮಾಡಿದ್ದು, ಕರ್ನಾಟಕದ ಶಿಲ್ಪಿಗಳಾದ ಗಣೇಶ್ ಭಟ್, (ಮೂಲ ಮೈಸೂರು) ಜೈಪುರದ ಅರುಣ್ ಯೋಗಿರಾಜ್ ಮತ್ತು ಸತ್ಯನಾರಾಯಣ ಪಾಂಡೆ ಅವರು ಪ್ರತಿಮೆಗಳನ್ನು ತಯಾರಿಸಿದ್ದಾರೆ ಎಂದು ಹೇಳಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಫ್ಯಾಕ್ಟ್‌ ಓನ್ಲಿ ಮಾಡಿದ ಫ್ಯಾಕ್ಟ್‌ಚೆಕ್ ಲಭ್ಯವಾಗಿದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ಮಾಹಿತಿ ಮೇರೆಗೆ, ಟ್ರಸ್ಟ್‌ನ ಸದಸ್ಯರಾದ  ಆದಿತ್ಯ ಅವರನ್ನು ಸಂಪರ್ಕಿಸಿ ಅವರ ಜೊತೆ ಮಾತನಾಡಿದ್ದು, ಹಿಂದೂ ಸಮುದಾಯದ ಮೂವರಿಗೆ ರಾಮಲಾಲಾ ವಿಗ್ರಹವನ್ನು ನಿರ್ಮಿಸಲು ಜವಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಮೂರರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ಟ್ರಸ್ಟ್ ಎಲ್ಲಿಯೂ ಹೇಳಿಕೊಂಡಿಲ್ಲ.

Ayodhya Ram Mandir: ಶ್ರೀರಾಮ ಭಕ್ತರಲ್ಲಿ ಮನವಿ, ಜನವರಿ 22ರಂದು ಈ ಕೆಲಸವನ್ನು ತಪ್ಪದೇ ಮಾಡಿ | champat rai of sri ram janmabhoomi trust appealed to rama devotees ach – News18 ಕನ್ನಡ

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಸಂಪರ್ಕಿಸಿದಾಗ, ಚಂಪತ್ ರೈ ಅವರ ಸಹವರ್ತಿ ಧರಂವೀರ್ ಮಾಹಿತಿ ನೀಡಿದ್ದು, ರಾಮಲಾಲ ಮೂರ್ತಿಯನ್ನು ಗಣೇಶ್ ಭಟ್, ಅರುಣ್ ಯೋಗಿರಾಜ್, ಸತ್ಯನಾರಾಯಣ ಪಾಂಡೆ ತಯಾರಿಸುತ್ತಿದ್ದು, ಮೂವರೂ ವಿಭಿನ್ನ ಮೂರ್ತಿಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ ಉತ್ತಮವಾದವುಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ರಾಮ ಮಂದಿರವು ಅನೇಕ ವಿಗ್ರಹಗಳನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಮುಸ್ಲಿಮರು ನಿರ್ಮಿಸುತ್ತಿರುವ ವಿಗ್ರಹಗಳು ಗರ್ಭಗುಡಿಯದಲ್ಲ

ಅಯೋಧ್ಯೆ ರಾಮಮಂದಿರಕ್ಕಾಗಿ ಇಬ್ಬರು ಮುಸ್ಲಿಂ ಕಲಾವಿದರು ಶ್ರೀರಾಮನ ವಿಗ್ರಹಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಆ ಕಲಾವಿದರಿಬ್ಬರೂ ತಂದೆ-ಮಗನಾಗಿದ್ದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದವರಾಗಿದ್ದಾರೆ. ತಂದೆ ಮುಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ಬಿಟ್ಟು ದೇವಸ್ಥಾನದ ಸಂಕಿರಣದಲ್ಲಿ ಅಲಂಕರಿಸಲು ಈ ಭವ್ಯವಾದ ವಿಗ್ರಹಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ರಾಮನ ವಿಗ್ರಹಗಳನ್ನು ತಯಾರಿಸಲು ಆನ್ ಲೈನ್ ಮೂಲಕ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ. “ಈ ವಿಗ್ರಹಗಳು ಸಂಪೂರ್ಣವಾಗಿ ಫೈಬರ್ ನಿಂದ ಮಾಡಲ್ಪಟ್ಟಿದೆ. ಪ್ರತಿಯೊಂದು ವಿಗ್ರಹಕ್ಕೂ 2.8 ಲಕ್ಷ ರೂ. ವೆಚ್ಚವಾಗಲಿದೆ. ಜೇಡಿಮಣ್ಣಿಗೆ ಹೋಲಿಸಿದರೆ ಫೈಬರ್ ಬೆಲೆ ಹೆಚ್ಚಿದ್ದರೂ, ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ತೆರೆದ ಸ್ಥಳಗಳಲ್ಲಿ ಅಳವಡಿಸಬಹುದು”, ಎಂದು ಜಮಾಲುದ್ದೀನ್ ಹೇಳುತ್ತಾರೆ.

Ram Mandir: অযোধ্যায় রাম মন্দিরের মূর্তি কারিগর বাংলার জামালুদ্দিন

ಜಮಾಲುದ್ದೀನ್ ಮಾತನಾಡಿ, “ಧರ್ಮವು ವೈಯಕ್ತಿಕ ವಿಚಾರ. ವಿವಿಧ ಧರ್ಮಗಳಿರುವ ನಮ್ಮ ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಮನ ಪ್ರತಿಮೆಯನ್ನು ಮಾಡಲು ಸಂತೋಷವಾಗುತ್ತಿದೆ. ಕಲೆಗೆ ಧರ್ಮವಿಲ್ಲ ಎಂಬುದು ಕಲಾವಿದನಾಗಿ ನನ್ನ ಸಂದೇಶವಾಗಿದೆ” ಎಂದು ಹೇಳಿದರು.

ಬೇಡಿಕೆಯಿರುವ ಕಲಾವಿದ ಜಮಾಲುದ್ದೀನ್ ಹಿಂದೆಯೂ ದುರ್ಗಾ ದೇವಿಯ ವಿಗ್ರಹಗಳನ್ನು ತಯಾರಿಸಿದ್ದಾರೆ. ಅವರ ಕುಟುಂಬವು ವರ್ಷಗಳಿಂದ ಹಿಂದೂ ದೇವತೆಗಳ ಫೈಬರ್ ವಿಗ್ರಹಗಳನ್ನು ತಯಾರಿಸುತ್ತಿದೆ. ಅವರು ತಯಾರಿಸುತ್ತಿರುವ ಶ್ರೀರಾಮನ ವಿಗ್ರಹಗಳನ್ನು ಅಯೋಧ್ಯೆಗೆ ಸ್ಥಳಾಂತರಿಸಲು ಸುಮಾರು 45 ದಿನಗಳನ್ನು ಬೇಕಾಗಬಹುದು ಎಂದು 10tv ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಯೋಧ್ಯಯ ದೇವಸ್ಥಾನದ ಸಂಕಿರಣದಲ್ಲಿ ಅಲಂಕರಿಸಲು ಈ ಭವ್ಯವಾದ ವಿಗ್ರಹಗಳನ್ನು ನಿರರ್ಮಿಸುತ್ತಿರುವುದು ಮುಸ್ಲಿಮರೇ ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿದಂತೆ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಮೂರ್ತಿವನ್ನು ನಿರ್ಮಾಣ ಮಾಡುತ್ತಿರುವುದು ಮುಸ್ಲಿಮರಲ್ಲ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪ್ರತಿಪಾದನೆಗಳು ಅಯೋಧ್ಯೆಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ರಾಮನ ವಿಗ್ರಹಗಳನ್ನು ನಿರ್ಮಿಸಲು ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ ಎಂಬಂತೆ ಸದ್ದು ಮಾಡುತ್ತಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೊಹ್ಲಿ ಮತ್ತು ಅನುಷ್ಕಾ ಗೋಮಾಂಸ ಸೇವಿಸಿದ್ದಾರೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights