ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಅನುಷ್ಕಾ ಶರ್ಮಾ ಕೊಟ್ಟ ಉಡುಗೊರೆ ಏನು ಗೊತ್ತಾ..?
ನಿನ್ನೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು. ನವೆಂಬರ್ 5 ರಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೋಹ್ಲಿಯ ಅನೇಕ ಫೋಟೋಗಳು ವೈರಲ್ ಆಗಿವೆ. ಅವರ ಜನ್ಮದಿನದಂದು ವಿರಾಟ್ ಅವರ ಅಭಿಮಾನಿಗಳಲ್ಲದೆ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಸಾಕಷ್ಟು ಶುಭಾಶಯಗಳ ಮಹಾಪೂರವೇ ಹರಿದು ಬಂತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೂಡ ತಮ್ಮ ನಾಯಕನ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿತು. ಅದರ ನಂತರ, ಗುರುವಾರ ತಡರಾತ್ರಿ, ಪತ್ನಿ ಅನುಷ್ಕಾ ಶರ್ಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪತಿ ವಿರಾಟ್ ಅವರೊಂದಿಗೆ ಎರಡು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೀವು ಇಲ್ಲಿ ನೋಡಬಹುದು.
ಈ ಚಿತ್ರಗಳಲ್ಲಿ ಅವರು ವಿರಾಟ್ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ-ವಿರಾಟ್ ಅವರ ಈ ಮುದ್ದಾದ ಫೋಟೋ ಪ್ರೀತಿಯ ಅಭಿಮಾನಿಗಳಮನ ಗೆದ್ದಿದೆ.
Virat Kohli and Anushka Sharma at Virat's Birthday Cake Cutting Ceremony Yesterday. #Virushka #HappyBirthdayViratKohli @imVkohli pic.twitter.com/uot7tgKOa3
— Virat Kohli FC™ (@ViratsPlanet) November 5, 2020
ಅನುಷ್ಕಾ ವಿರಾಟ್ ಕೊಹ್ಲಿ ಅವರನ್ನು ಬಿಗಿಯಾಗಿ ಅಪ್ಪುಗೆ ಮೂಲಕ ಪ್ರೀತಿಯಿಂದ ಕೆನ್ನೆಗೆ ಚುಂಬಿಸಿದ್ದಾರೆ. ಕೋಹ್ಲಿ ಕೆನ್ನೆಗೆ ಚುಂಬನಕ್ಕೆ ಸೋನಾಲಿ ಬೆಂದ್ರೆ, ತಾಹಿರಾ ಕಶ್ಯಪ್, ರಕುಲ್ಪ್ರೀತ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಮೌನಿ ರಾಯ್ ಪ್ರತಿಕ್ರಿಯಿಸಿದ್ದಾರೆ. ಎಲ್ಲರ ಕಾಮೆಂಟ್ಗಳು ಅತ್ಯುತ್ತಮವಾಗಿವೆ. ಅಂದಹಾಗೆ, ಈ ಮುದ್ದಾದ ದಂಪತಿಯ ಫೋಟೋಕ್ಕೆ ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
Last Night
Birthday Celebration
King Kohli @imVkohli #viratkohlibirthday#HappyBirthdayViratKohli #KingKohli #Kingkohlibirthday pic.twitter.com/7nazxCgqZv— Sayed Sufiyan (@SayedSufiyan13) November 5, 2020
ಅಂದಹಾಗೆ, ಈ ಸಮಯದಲ್ಲಿ ಅನುಷ್ಕಾ ಗರ್ಭಿಣಿ ಎನ್ನುವುದು ಮತ್ತೊಂದು ಖುಷಿ ವಿಚಾರ. ವಿರಾಟ್ ಮತ್ತು ಅನುಷ್ಕಾ ಮುಂದಿನ ವರ್ಷ ಜನವರಿಯಲ್ಲಿ ಪೋಷಕರಾಗಲಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಇಬ್ಬರೂ ಮಗುವಿನೊಂದಿಗೆ ಆಶೀರ್ವಾದ ಪಡೆಯಲಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.