ಅಪಾಯಕಾರಿ ಸಲ್ಪರ್ ಡೈಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಭಾರತ: ವರದಿ ತಿರಸ್ಕರಿಸಿದ ಕೇಂದ್ರ
ಮಾನವ ಜನ್ಯ ಸಲ್ಪರ್ ಡೈಆಕ್ಸೈಡ್ ಅನ್ನು ಹೆಚ್ಚಾಗಿ ಹೊರಸೂಸುವ ದೇಶಗಳ ಬಗ್ಗೆ ಗ್ರೀನ್ ಪೀಸ್ ಇಂಡಿಯಾ ಎಂಬ ಎನ್‌ಜಿಓ ಅಧ್ಯಯನ ನಡೆಸಿದೆ. ಅಧ್ಯಯನ ವರದಿಯಲ್ಲಿ ಅತಿ ಹೆಚ್ಚು ಮಾನವ ಜನ್ಯ ಸಲ್ಫರ್ ಡೈಆಕ್ಸೈಡ್ ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಭಾರತ ಎಂದು ಹೇಳಲಾಗಿದೆ.
ವಾಯುಮಾಲಿನ್ಯಕ್ಕೆ ಕಾರಣವಾಗುವ ಕಲ್ಲಿದ್ದಲು ಸುಡುವಿಕೆಯಿಂದ ಭಾರತವು ಮಾನವಜನ್ಯ ಸಲ್ಫರ್ ಡೈಆಕ್ಸೈಡ್ ಅನ್ನು ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದೆ ಎಂದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಗ್ರೀಸ್ ಪೀಸ್ ವರದಿಯಲ್ಲಿ ಹೇಳಲಾಗಿದೆ.
ಗ್ರೀನ್ ಪೀಸ್ ಅಧ್ಯಯನ ವರದಿಯನ್ನು ತಿರಸ್ಕರಿಸಿರುವ ಕೇಂದ್ರ ಪರಿಸರ ಸಚಿವಾಲಯ, ತ್ಯಾಜ್ಯ ಅನಿಲದಿಂದ ಗಂಧಕವನ್ನು ಹೊಂದಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ದೇಶದಲ್ಲಿ 18 ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ಭಾರತವು ಮಾನವಜನ್ಯ ಸಲ್ಫರ್ ಡೈಆಕ್ಸೈಡ್ ಅನ್ನು ಹೊರಸೂಸುವ ವಿಶ್ವದ ಅತಿದೊಡ್ಡ ರಾಷ್ಟ್ರ ಎಂಬ ಗ್ರೀನ್ ಪೀಸ್ ಎನ್ ಜಿ ಒ ಅಧ್ಯಯನದ ವರದಿ ಸರಿಇಲ್ಲ, ಸರ್ಕಾರದ ಅಂಶಗಳು ಇದನ್ನು ಒಪ್ಪುವುದಿಲ್ಲ ಎಂದು ಕೇಂದ್ರ ಪರಿಸರ ರಾಜ್ಯ ಖಾತೆ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.
ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಗಂಧಕವನ್ನು ಹೊಂದಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು
16 ಘಟಕಗಳನ್ನು ಆಗಸ್ಟ್ 31 ರಂದು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಸಿಂಗ್ರೌಲಿ, ನಯೆವೆಲಿ, ತಮಿಳುನಾಡಿನ ಚೆನ್ನೈ, ಒಡಿಶಾದ ತಲ್ಚರ್ ಮತ್ತು ಜಾರ್ಸುಗುಡಾ, ಛತ್ತೀಸ್ ಗಢದ ಕೊರ್ಬಾ, ಗುಜರಾತಿನ ಕಚ್, ತೆಲಂಗಾಣದ ರಾಮಗುಂಡಂ, ಮಹಾರಾಷ್ಟ್ರದ ಚಂದ್ರಪುರ ಮತ್ತು ಕೊರಾಡಿ ಸಲ್ಪಡ್ ಡೈಆಕ್ಸೈಡ್ ಉತ್ಪಾದಿಸುವ ದೇಶದ ಹಾಟ್ ಸ್ಪಾಟ್ ಗಳೆಂದು ಗ್ರೀನ್ ಪೀಸ್ ವರದಿಯಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕನ್ನಡದಲ್ಲಿ ಪ್ರಾಮಾಣವಚನ ಸ್ವೀಕರಿಸಿದ ಹೆಚ್‌ಡಿಡಿ; ಹಿಂದಿ ಹೇರಿಕೆ ಸಹಿಸಲ್ಲ ಎಂದ ಸುಮಲತಾ!


I got this web site from my pal who informed me
about this website and now this time I am visiting this web page and reading very informative content at this place.
I got this web site from my pal who informed me
about this website and now this time I am visiting this web page and reading very informative content at this place.