ಡ್ರಗ್ಸ್‌ ಮಾಫಿಯಾ: 13 ರಾಜಕಾರಣಿಗಳ ಮಕ್ಕಳು, 28 ಕಲಾವಿದರಿಗೆ ಸಿಸಿಬಿ ನೋಟಿಸ್!

ಡ್ರಗ್ಸ್ ಮಾಫಿಯಾದ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ಮತ್ತಷ್ಟು ಹೆಚ್ಚಿನ ಕಲಾವಿದರು ಮತ್ತು ರಾಜಕಾರಣಿಗಳ ಪುತ್ರರು ಡ್ರಗ್ ದಂದೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅನುಮಾಸಿರುವ ಪೊಲೀಸರು 41 ಮಂದಿಗೆ ನೋಟಿಸ್ ನೀಡಲಿದ್ದಾರೆ.

ಕೊರೊನಾದಿಂದಾಗಿ ಕೆಲವರನ್ನು ಮಾತ್ರ ವಿಚಾರಣೆಗೆ ಕರೆ ನೀಡಿದ್ದೇವೆ, ಕನಿಷ್ಠ ಪಕ್ಷ 28 ಕಲಾವಿದರು ಮತ್ತು 13 ರಾಜಕಾರಣಿಗಳ ಪುತ್ರರು ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ಕಿರುತೆರೆ ನಿರೂಪಕ ಅಕುಲ್ ಬಾಲಾಜಿ, ಸಂತೋಷ್ ಮತ್ತು ವಿ ಯುವರಾಜ್‌ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್‌ ನೀಡಲಾಗಿತ್ತು.

ನಿನ್ನೆ ವಿಚಾರಣೆಗೆ ಹಾಜರಾಗಿದ್ದ ಸಂತೋಷ್ ಮತ್ತು ಅಕುಲ್ ಬಾಲಾಜಿ ಹಾಗೂ ಆರ್ ವಿ ಯುವರಾಜ್ ಅವರಿಂದ ಅನೇಕ ಮಾಹಿತಿ ಕಲೆ ಹಾಕಿದ್ದು, ಅವರು ಕೆಲವು ವಿಡಿಯೋ ಮತ್ತು ಸಿಸಿಟಿವಿ ಫೂಟೇಜ್ ನೀಡಿದ್ದಾರೆ. ಅದರಲ್ಲಿ ಕೆಲವು ಕಲಾವಿದರು ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ, ಹೀಗಾಗಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಡ್ರಗ್ಸ್‌ ಮಾಫಿಯಾ: ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights