ರಫೇಲ್‌ ಯುದ್ದ ವಿಮಾನಕ್ಕೆ ಮಹಿಳಾ ಸಾರಥಿ: ಮೊದಲ ಪೈಲಟ್‌ಆಗಿ ಶಿವಾಂಗಿ ನೇಮಕ

ಪುರುಷರಿಗಷ್ಟೇ ಸೀಮಿತವಾಗಿದ್ದ ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಇತ್ತೀಚೆಗೆ ಮಹಿಳೆಯರೂ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಸೇನೆಯಲ್ಲಿಯೂ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಮಹಿಳೆಯರೂ ಸಮರ್ಥರು ಎಂದು ಸಾಭೀತುಪಡಿಸುತ್ತಿದ್ದಾರೆ.

ಈಗಾಗಲೇ ವಿವಿಧ ಜವಾಬ್ದಾರಿಗಳನ್ನು ಹೊತ್ತಿರುವ ಸೇನೆಯ ಮಹಿಳೆಯರು, ಇದೀಗ ರಫೇಲ್‌ ಯುದ್ದ ವಿಮಾನವನ್ನು ಹಾರಿಸಲು ಸಜ್ಜಾಗಿದ್ದಾರೆ. ರಫೇಲ್‌ ಯುದ್ದ ವಿಮಾನಕ್ಕೆ ಪ್ರಥಮ ಮಹಿಳಾ ಪೈಲಟ್ ಆಗಿ ಶಿವಾಂಗಿ ಸಿಂಗ್ ನೇಮಕಗೊಂಡಿದ್ದಾರೆ.

ಶಿವಾಂಗಿ ಅಂಬಾಲದಲ್ಲಿ ರಫೇಲ್ ವಿಮಾನವನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ ಇವರು ಅಂಬಾಲದ ಗೋಲ್ಡನ್ ಆಯರೋಸ್ ವಾಯುನೆಲೆಯಲ್ಲಿರುವ 17 ಸ್ಕ್ವಾಡ್ರನ್‌ನ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಲಿದ್ದಾರೆ ಎನ್ನಲಾಗಿದೆ.

ಐಎಎಫ್‌ನ 10 ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರಾಗಿರುವ ಶಿವಾಂಗಿ ಸಿಂಗ್ 2017 ರಲ್ಲಿ ವಾಯುಪಡೆಗೆ ಸೇರಿದ್ದರು. ಅವರು ರಾಜಸ್ಥಾನದ ಫೈಟರ್‌ ಬೇಸ್‌ನಲ್ಲಿ ಮಿಗ್ -21 ಫೈಟರ್ ಜೆಟ್ ಚಲಾಯಿಸುತ್ತಿದ್ದರು.

ಭಾರತೀಯ ವಾಯುಪಡೆಯಲ್ಲಿ ಸದ್ಯ 1,875 ಮಹಿಳಾ ಅಧಿಕಾರಿಗಳಿದ್ದಾರೆ. ಈ ಪೈಕಿ 10 ಫೈಟರ್ ಪೈಲಟ್‌ಗಳು ಮತ್ತು 18 ಮಂದಿ ನಾವಿಗೇಟರ್‌ಗಳು ಇದ್ದಾರೆ.

ಸೆಪ್ಟೆಂಬರ್ 2016 ರಲ್ಲಿ ಭಾರತವು 59,000 ಕೋಟಿ ರೂ. ಮೌಲ್ಯದ ಒಪ್ಪಂದದಲ್ಲಿ ಫ್ರಾನ್ಸ್‌ನಿಂದ 36 ರಫೇಲ್ ಜೆಟ್‌ಗಳನ್ನು ಪಡೆದುಕೊಂಡಿತ್ತು. ಇದೇ 10 ರಂದು ಅಂಬಾಲಾ ವಾಯುನೆಲೆಯಲ್ಲಿ ವಾಯುಪಡೆಯು ಔಪಚಾರಿಕವಾಗಿ ವಿಮಾನಗಳನ್ನು ಸೇರ್ಪಡೆಗೊಳಿಸಿತು.


ಇದನ್ನೂ ಓದಿ: ಎಪಿಎಂಸಿ ತಿದ್ದುಪಡಿ ವಿಧೇಯಕ ಮಂಡನೆ ವಿರೋಧಿಸಿ ನಾಳೆ ಕಬ್ಬು ಬೆಳೆಗಾರರಿಂದ ಕರ್ನಾಟಕ ಬಂದ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights