ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ತೆಗೆದು, ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (370 ಮತ್ತು 35ಎ ವಿಧಿ)ವನ್ನು ರದ್ದುಗೊಳಿಸಿದ ನಂತರ ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ವಿವಿಧ ಉನ್ನತ ಹುದ್ದೆಗಳಿಂದ ತೆಗೆದು, ಆ ಸ್ಥಾನಗಳಿಗೆ ಹಿಂದೂಗಳನ್ನು ನೇಮಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಆರೋಪಿಸಿದ್ದಾರೆ.

ಸಾಮಾನ್ಯವಾಗಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಮಾಡಲಾಗುತ್ತದೆ. ಆದರೆ,  ಜಮ್ಮು-ಕಾಶ್ಮೀರ ವಿಚಾರದಲ್ಲಿ ತದ್ವಿರುದ್ಧವಾದ ನಡೆಯನ್ನು ಕೇಂದ್ರ ಸರ್ಕಾರ ಅನುಸರಿಸಿದ್ದು, ರಾಜ್ಯದ ಜನರಿಗೆ ನೋವನ್ನು ತಂದಿದೆ ಎಂದು ಅವರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರ ಮುಸ್ಲಿಮರು ಬಹುಸಂಖ್ಯಾತರಿರುವ ರಾಜ್ಯವಾಗಿದೆ. ಭಾರತ ಬಹುಸಂಖ್ಯಾತ ಹಿಂದೂಗಳು ಇರುವ ರಾಷ್ಟ್ರ. ಆದರೂ, ನಾವು ಭಾರತದೊಂದಿಗೆ ಸೇರಿದ್ದೇವೆ. ಅಂದಿನ ಹಿರಿಯ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್, ಜವಹರಲಾಲ್ ನೆಹರೂ ಅವರು ಬಹುಸಂಖ್ಯಾತ ಮುಸಲ್ಮಾನರ ಗೌರವ, ಘನತೆಯನ್ನು ಎತ್ತಿ ಹಿಡಿಯುತ್ತೇವೆ, ಕಾಪಾಡುತ್ತೇವೆ ಎಂಬ ಭರವಸೆಯೊಂದಿಗೆ ಸಂವಿಧಾನ ವಿಧಿ 370ನ್ನು ತಂದಿದ್ದರು. ಸಂವಿಧಾನ ವಿಧಿ 370ನ್ನು ತಂದಿದ್ದರು. ಆದರೆ, ಈಗ ಅದನ್ನು ಪ್ರಜೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೆಗೆದುಹಾಕಲಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಚೀನಾದೊಂದಿಗೆ ಮಾತುಕತೆ ಸಾಧ್ಯವಾದ ಮೇಲೆ, ಪಾಕ್‌ ಜೊತೆ ಯಾಕಿಲ್ಲ? ಫಾರೂಕ್ ಅಬ್ದುಲ್ಲಾ

ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರಿಂದ ಏನು ಪಡೆದುಕೊಂಡಿದ್ದೇವೆ, ಏನು ಕಳೆದುಕೊಂಡಿದ್ದೇವೆ ಎಂದು ಸದನದಲ್ಲಿ ಚರ್ಚೆ ಮಾಡೋಣ ಎಂದು ನಾವು ಕೇಳಿದ್ದೆವು. ಆದರೆ, ಕೇಂದ್ರದ ನಾಯಕರು ನನಗೆ ಸಂಸತ್‌ನಲ್ಲಿ ಮಾತನಾಡಲು ಬಿಡುವುದಿಲ್ಲ. ಅವರ ಉದ್ದೇಶ ಏನೆಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

Legal Side of Kashmir's Indianization: Invoking Article 370 to revoke it

ದೇಶದ ಎಲ್ಲಾ ಕಡೆ 4ಜಿ ಸಂಪರ್ಕವಿದ್ದು, ಸದ್ಯದಲ್ಲಿಯೇ 5ಜಿ ಸಂಪರ್ಕ ಕೂಡ ಜಾರಿಯಾಗಲಿದೆ. ಆದರೆ, ಇಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನೂ ಕಸಿದುಕೊಳ್ಳಲಾಗಿದೆ.. ಇಲ್ಲಿನ ಮಕ್ಕಳಿಗೆ, ಉದ್ಯಮಿಗೆ ಅದರ ಇಂಟರ್‌ನೆಟ್‌ ಸೌಕರ್ಯವಿಲ್ಲ. ಅವರು ವ್ಯವಹರಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ನೀಡಲಾಗಿದ್ದ 370ನೇ ವಿಧಿಯ ರದ್ದುಗೊಳಿಸಿದ ನಂತರ ರಾಜ್ಯದ ಚಿತ್ರಣ ಬದಲಾಗಲಿದೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಇಲ್ಲೇನು ಬದಲಾಗಿದೆ. ಇದ್ದ ಸೌಕರ್ಯಗಳನ್ನೂ ಕಸಿದುಕೊಳ್ಳಲಾಗಿದೆ. ಜಮ್ಮು-ಕಾಶ್ಮೀರವನ್ನು ಮೂರು ಕುಟುಂಬಗಳು ಲೂಟಿ ಮಾಡಿವೆ ಎಂದು ಬಿಜೆಪಿಗರು ಹೇಳುತ್ತಾರೆ. ಹಾಗಾದರೆ ಇಲ್ಲಿನ ಆಸ್ಪತ್ರೆಗಳು, ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳು ಹೇಗೆ ಸ್ಥಾಪನೆಯಾದವು, ಇಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಿರಲು ಹೇಗೆ ಸಾಧ್ಯವಾಯಿತು? ಎಂದು ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.


ಇದನ್ನೂ ಓದಿ:  ಧಾರ್ಮಿಕ ವಿಭಜನೆಯಿಂದ ಜಮ್ಮು ಕಾಶ್ಮೀರದಲ್ಲಿ ಹಿಂದೂ ಪ್ರಾಬಲ್ಯ ಹೆಚ್ಚಿಸಲು ಬಿಜೆಪಿ ಮುಂದಾಗಿದೆ: ಫಾರೂಕ್ ಅಬ್ದುಲ್ಲಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights