SDPI ಬಗ್ಗೆ ಬಿಜೆಪಿಗರು ಮಾತನಾಡದಂತೆ ಬಿಎಸ್‌ವೈ ಆದೇಶಿದ್ದಾರೆ: ಸಿದ್ದರಾಮಯ್ಯ

ರಾಜಧಾನಿ ಬೆಂಗಳೂರಿನ ಡಿಜೆ ಹಳ್ಳಿ, ಕೆ.ಜಿ.ಹಳ್ಳಿಗಳಲ್ಲಿ ನಡೆದ ಗಲಭೆ ರಾಜಕೀಯ ಪ್ರೇರಿತವಲ್ಲ. ಅದು ಪೂರ್ವ ನಿಯೋಜಿತವಾಗಿ ನಡೆದ ಘಟನೆಯಾಗಿದೆ. ಈ ಗಲಬೆಗೆ ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳೇ ಕಾರಣ. ಹಾಗಾಗಿ ಈ ಎರಡು ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹಾರಾಡುತ್ತಿದ್ದ ಬಿಜೆಪಿ ಈಗ SDPI ವಿಚಾರದಲ್ಲಿ ಮೌನತಾಳಿದೆ. ಯಾವ ಗೃಹಮಂತ್ರಿಯಾಗಲೀ, ಸಚಿವರಾಗಲೀ ಆ ಬಗ್ಗೆ ಮಾತನಾಡುತ್ತಿಲ್ಲ. SDPI ಬಗ್ಗೆ ಮಾತನಾಡದಂತೆ ಸಿಎಂ ಯಡಿಯೂರಪ್ಪ ಆದೇಶಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಗಲಬೆಯ ಸಂದರ್ಭದಲ್ಲಿ ಗಲಬೆಗೆ SDPI ಮತ್ತು PFI ಸಂಘಟನೆಗಳೇ ಕಾರಣ. ಅವುಗಳನ್ನು ಬ್ಯಾನ್‌ ಮಾಡಲು ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದ್ದ ಗೃಹ ಸಚಿವರು ಸೇರಿದಂತೆ ಬಿಜೆಪಿಗರು ಯಾಕೆ ಮೌನವಾಗಿದ್ದಾರೆ? ದಾಖಲೆಗಳಿದ್ದರೆ SDPI ಸಂಘಟನೆಯನ್ನು ಬ್ಯಾನ್‌ ಮಾಡಲು ಶಿಫಾರಸ್ಸು ಮಾಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾನ ನಿರ್ಣಯ ಮಂಡನೆ ಭಾಷಣದಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

“ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿ ಘಟನೆ ತಕ್ಷಣಕ್ಕೆ ನಡೆದ ಸಹಜ ಘಟನೆ ಅಲ್ಲ. ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿರುವ ಘಟನೆಯಾಗಿದ್ದು, ಇದು ಕೇವಲ‌ ಕೋಮುಗಲಭೆ ಮಾತ್ರವಲ್ಲ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿದೆ. ಸ್ಥಳೀಯ ಜನರಿಂದಲೇ ಈ ಘಟನೆ ನಡೆದಿದೆ” ಎಂದು ಬಿಜೆಪಿ ಸಚಿವರು ಆರೋಪಿಸಿದ್ದರು.


ಇದನ್ನೂ ಓದಿ: ಬೆಂಗಳೂರು ಗಲಭೆ : ಎಸ್‌ಡಿಪಿಐ ಬಗ್ಗೆ ಸೂಕ್ತ ತನಿಖೆ ಬಳಿಕ ಕ್ರಮ: ಜಗದೀಶ್ ಶೆಟ್ಟರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights