Fact check: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಮತದಾರರಿಗೆ ಹಣ ನೀಡುತ್ತಿದೆ ಎಂದು ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಐದು ರಾಜ್ಯ ಚುನಾವಣೆಯ ಕಸರತ್ತು ದಿನದಿಂದ ದಿನಕ್ಕೆ ಕಾವೇರತೊಡಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಕೆಸರೆರಚಾಟ ಜೋರಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ಪೈಪೋಟಿ ಸ್ಪರ್ಧೆಯಲ್ಲಿ, ಸಾಮಾಜಿಕ ಮಾಧ್ಯಮವು ಎರಡು ರಾಜಕೀಯ ಪಕ್ಷಗಳ ಬೆಂಬಲಿಗರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.

ಈ ನಡುವೆ ಸಮಾಜವಾದಿ ಪಕ್ಷ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷದ ಚಿಹ್ನೆ ಮತ್ತು 500 ರೂಪಾಯಿ ನೋಟು ಇರುವ ಪೊಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳುತ್ತಿದ್ದಾರೆ.  ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಬಿಜೆಪಿಯ ಸಾಮಾಜಿಕ ಮಾಧ್ಯಮ ಸಹ ಸಂಚಾಲಕ ಶಶಿಕುಮಾರ್ ಅವರು “ಸಮಾಜವಾದಿ ಮತ ಖಾರಿಡೋ ಯೋಜನೆ (ಸಮಾಜವಾದಿ ಮತ ಖರೀದಿ ಯೋಜನೆ)” ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು “ಮಿಷನ್ 2022” ನೊಂದಿಗೆ ಅದೇ ಫೋಟೊವನ್ನು ಪೋಸ್ಟ್ ಮಾಡಿದ್ದು, ಪೋಸ್ಟ್ ಮೇಲೆ ಯುಪಿಯ ಮೀರತ್‌ನ ಸರ್ಧಾನ  ಕ್ಷೇತ್ರದಿಂದ ಎಸ್‌ಪಿ-ಆರ್‌ಎಲ್‌ಡಿ ಅಭ್ಯರ್ಥಿಯಾಗಿರುವ ಎಸ್ಪಿ ನಾಯಕ ಅತುಲ್ ಪ್ರಧಾನ್ ಅವರ ಹೆಸರನ್ನು ಬರೆಯಲಾಗಿದೆ.

ಆದರೆ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಅವರು ಈ ಫೊಟೊದ ಅಸಲಿಯತ್ತನ್ನು ಬಯಲುಗೊಳಿಸಿದೆ. ಈ ಫೊಟೊವು 2017ರಲ್ಲಿ ಇಂಟರ್ನೆಟ್‌ಗೆ ಅಪ್ಲೋಡ್ ಮಾಡಲಾಗಿದೆ. ಆದ್ದರಿಂದ, ಯುಪಿಯಲ್ಲಿ ನಡೆಯಲಿರುವ ಈ ಬಾರಿಯ ಚುನಾವಣೆಗೂ, ವೈರಲ್ ಆಗುತ್ತಿರುವ ಫೋಟೊಗೂ ಯಾವ ಸಂಬಂಧವೂ ಇಲ್ಲ. ಅಲ್ಲದೆ, ಫೋಟೊದ ಮೇಲೆ “ಮಿಷನ್ 2022” ಮತ್ತು ಅತುಲ್ ಪ್ರಧಾನ್ ಅವರ ಹೆಸರನ್ನು ಫೊಟೊದಲ್ಲಿ ಎಡಿಟ್ ಮಾಡಲಾಗಿದೆ.

ಮೊದಲಿಗೆ, ನಾವು ಅತುಲ್ ಪ್ರಧಾನ್ ಅವರ ಹೆಸರಿನ  ಟಪಾಲು ಚಿತ್ರವನ್ನು ಪರಿಶೀಲಿಸಿದಾಗ ಸೈಕಲ್ ಲೋಗೋಗಳ ನಡುವಿನ ಬರಹವವು  ಅಸ್ಪಷ್ಟವಾಗಿದ್ದು , “ಮಿಷನ್ 2022” ಮತ್ತು ಪ್ರಧಾನ್ ಅವರ ಹೆಸರು ಪ್ರಮುಖವಾಗಿ ಎದ್ದು ಕಾಣುತ್ತಿದೆ.

ಇದರ ಬಗ್ಗೆ ಇನ್ನಷ್ಟು ಫೋರೆನ್ಸಿಕ್ ವಿಧಾನದಲ್ಲಿ ಪರಿಶಿಲೀಸಿದಾಗ  ಅದರ ಡಿಜಿಟಲ್ ವಿಧಾನವನ್ನು ಇಲ್ಲಿ ಗಮನಿಸಬಹುದು. ಫೋರೆನ್ಸಿಕ್  ಎಂಬುದು ಚಿತ್ರದ ELA ಅನ್ನು ಪರೀಕ್ಷಿಸಲು ಬಳಸಬಹುದಾದ ಒಂದು ಸಾಧನವಾಗಿದೆ. ನಾವು ಈ ಉಪಕರಣದಲ್ಲಿ ವೈರಲ್ ಚಿತ್ರವನ್ನು ಅಪ್‌ಲೋಡ್ ಮಾಡಿದ್ದೇವೆ ಮತ್ತು ಅದು “ಮಿಷನ್ 2022” ಮತ್ತು ಪ್ರಧಾನ್ ಅವರ ಹೆಸರನ್ನು ಬರೆಯಲಾದ ಭಾಗವನ್ನು ಹೈಲೈಟ್ ಮಾಡಿದೆ.

ಇನ್ನೊಂದು FotoForensics ವಿಧಾನದಲ್ಲೂ ಕೂಡ ಅದೇ ರೀತಿಯ ಉತ್ತರ ನೀಡಿತು.

ಅತುಲ್ ಪ್ರಧಾನ್ ಅವರ ಹೆಸರು ಮತ್ತು “ಮಿಷನ್ 2022” ಅನ್ನು ನಮೂದಿಸುವ ಬರಹವು ಕೆಲವು ಎಡಿಟಿಂಗ್ ಸಾಫ್ಟ್‌ವೇರ್ ಬಳಸಿ ಸೇರಿಸಲಾಗಿದ್ದು, ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ವಾದವು ಸುಳ್ಳಾಗಿದೆ.

ಇಂಡಿಯಾ ಟುಡೇ ಅವರು  ಈ ಚಿತ್ರವನ್ನು ಅತುಲ್ ಪ್ರಧಾನ್ ಅವರ PR ತಂಡದ ಸದಸ್ಯ ಅನ್ಮೋಲ್ ಪ್ರಧಾನ್ ಅವರಿಗೆ ಕಳುಹಿಸಿದ್ದು ಅವರು ಆ ಫೋಟೋಗೂ ಮತ್ತು ಎಸ್ಪಿ ನಾಯಕನಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.

ಫ್ಯಾಕ್ಟ್ ಚೆಕ್:

ವೈರಲ್ ಆಗುತ್ತಿರುವ ಫೋಟೊವನ್ನು  ರಿವರ್ಸ್ ಇಮೆಜ್ ಸರ್ಚ್ ಮಾಡಿದಾಗ ಅದನ್ನು 2017 ರಲ್ಲಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ಗೋರಖ್‌ಪುರದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿಜಯ್ ಬಹದ್ದೂರ್ ಯಾದವ್ ಮತ್ತು ಮಾಜಿ ಸಚಿವ ರಾಮ್ ಭುಲ್ ನಿಶಾದ್  ಇಬ್ಬರು ಎಸ್‌ಪಿ ನಾಯಕರ ಹೆಸರುಗಳು ಮತ್ತು ಪೊಟೊಗಳನ್ನು  ಟಪಾಲಿನ ಮುಂಭಾಗದ ಇನ್ನೊಂದು ಚಿತ್ರದೊಂದಿಗೆ “ಮಾರ್ಚ್ 4, 2017 ರಲ್ಲಿ ಟ್ವಿಟರ್ ಪೋಸ್ಟ್ ನಲ್ಲಿ ಹಂಚಿಕೊಳ್ಳಲಾದೆ.

ಯಾದವ್ ಅವರು ಟಪಾಲನ್ನು ನೋಡಿ “ಲಕೋಟೆಯ ಮೇಲೆ ಬಳಸಲಾದ ಛಾಯಾಚಿತ್ರವು ನಿಜವಾಗಿಯೂ ನನ್ನದಾಗಿದೆ, ಆದರೆ ಅದು ಸುಮಾರು 15 ವರ್ಷ ಹಳೆಯದು. ಇದು ಖಂಡಿತವಾಗಿಯೂ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಮಾಡುವ ಪ್ರಯತ್ನವಾಗಿದೆ’’ ಎಂದು ಅವರು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿರುವ ಸುದ್ದಿಯನ್ನು ಗಮನಿಸಿ ಹೇಳುವುದಾದರೆ ಹಲವು ವರ್ಷಗಳ ಹಿಂದಿನ ಪೋಟೋವನ್ನು ಸಣ್ಣ ಪುಟ್ಟ ಎಡಿಟ್ ಮಾಡಿ ಅದಕ್ಕೆ ಬೇರೆ ಹೇಳಿಕೆಯನ್ನು ನೀಡಿ ತಪ್ಪಾಗಿ ಹಂಚಿಕೊಳ್ಳುಲಾಗಿದೆ.


ಇದನ್ನು ಓದಿರಿ: Fact check: 11 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ ತಾಯಿ ಎಂಬ ಸುದ್ದಿ ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights