Fact check: ರಾಹುಲ್ ಮತ್ತು ಪ್ರಿಯಾಂಕ ಗಾಂಧಿ BJP , AAP ಯನ್ನು ಬೆಂಬಲಿಸಿಲ್ಲ, ಇದು ಎಡಿಟ್ ಫೋಟೊ

ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಅವರ ಎರಡು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.  ಎರಡು ಪ್ರತ್ಯೇಕ ಫೋಟೋದಲ್ಲಿ ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರು ಪ್ರಣಾಳಿಕೆಗಳನ್ನು ಹಿಡಿದಿರುವುದು ಒಂದರಲ್ಲಿ (BJP) ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿರುವಂತೆ ಮತ್ತೊಂದು ಫೋಟೋದಲ್ಲಿ (AAP) ಆಮ್ ಆದ್ಮಿ ಪಾರ್ಟಿ ಯನ್ನು ಬೆಂಬಲಿಸುತ್ತಿರುವಂತೆ ಸೂಚಿಸುವ ಫೋಟೋಗಳು ವೈರಲ್ ಆಗುತ್ತಿವೆ.

ಬಿಜೆಪಿ ನಾಯಕ ವಿನಯ್ ಚೌಹಾಣ್ ಮತ್ತು ವಕ್ತಾರೆ ನೀತು ಸಿಂಗ್ ಅವರು “ಯೋಗಿ ಚುನಾಯಿತರಾಗಲು ಸಿದ್ಧರಾಗಿದ್ದಾರೆ..”  ಎಂಬ ಹೇಳಿಕೆಯೊಂದಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಇವರನ್ನು ಬೆಂಬಲಿಸುತ್ತಿದ್ದಾರೆ ಎಂಬ ಫೋಟೋಳನ್ನು  ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. (आंगे तो योगी ही)  ರಾಹುಲ್ ಮತ್ತು ಪ್ರಿಯಾಂಕ ಕೈಯಲ್ಲಿರುವ ಫೋಟೋದಲ್ಲಿ ಯೋಗಿ ಆದಿತ್ಯನಾಥ್  ಅವರು ತಮ್ಮ ಹಣೆಯ ಮೇಲೆ ಪೇಟವನ್ನು (ವರ್ಮಿಲಿಯನ್) ಅಲಂಕರಿಸಿರುವುದನ್ನು ನೋಡಬಹದು. ಉತ್ತರ ಪ್ರದೇಶದಲ್ಲಿ ಫೆಬ್ರವರಿಯಲ್ಲಿ ನಡೆಯುವ ಚುನಾವಣೆ ವೇಳೆಯಲ್ಲಿ ಈ ರೀತಿ ಫೋಟೋಗಳು ವೈರಲ್ ಆಗುತ್ತಿವೆ.

https://twitter.com/INeetuDabas/status/1484574718237630468?ref_src=twsrc%5Etfw%7Ctwcamp%5Etweetembed%7Ctwterm%5E1484574718237630468%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fbjp-members-aap-gurgaon-share-morphed-photos-of-rahul-and-priyanka-gandhi%2F

ಈ ಪೋಸ್ಟ್ ಅನ್ನು ಹಲವಾರು bjp ಪರ ಫೇಸ್‌ಬುಕ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ, ಉದಾಹರಣೆಗೆ ‘Iron Man Modi – लोह पुरुष मोदी 💪🙏🇮🇳🙏💪‘ [over 2 lakh followers]; ‘मोदीजी 370 के बाद अब POK की बारी🚩🕉🚩‘ [over 1 lakh followers]; and BJP MISSION 350+ ‘LOKSABHA-2024’ [over 3 lakh followers].

ಇದೇ ರೀತಿಯ ಫೋಟೋಗಳು ಪಂಜಾಬ್ ಎಎಪಿ ಗುರುಗಾಂವ್ ಕೂಡ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದು  ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ತೋರಿಸುತ್ತಿರುವ ಫೋಟೋದಲ್ಲಿ ಎಎಪಿಯ ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಫೋಟೋದೊಂದಿಗೆ  “ಪಂಜಾಬ್‌ನ ಹೆಮ್ಮೆ”  (ಪಂಜಾಬ್ ದಿ ಶಾನ್) ಎಂದು ಫೋಟೋದಲ್ಲಿ ಬರೆದಿದೆ.

ಈ ಪೋಸ್ಟ್ ಅನ್ನು ಹಲವಾರು AAP ಪರ ಫೇಸ್‌ಬುಕ್ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ, ಉದಾಹರಣೆಗೆ   We Support “Arvind Kejriwal” [over one lakh followers]; Aam Aadmi Party – Arvind Kejriwal [over 40K followers]; I 💖💞💖 Manish Sisodia [over 80K followers].

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ರಾಹುಲ್ ಗಾಂಧಿ ತಮ್ಮ ಟ್ವಟರ್‌ನಲ್ಲಿ ಪೋಸ್ಟ್ ಮಾಡಿದ್ದ ಮೂಲ ಫೋಟೋ ಲಭ್ಯವಾಗಿದ್ದು, ಉತ್ತರ ಪ್ರದೇಶದ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಪಕ್ಷ ತನ್ನ  ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದು ಅದನ್ನು ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರು ಬಿಡುಗಡೆಗೊಳಿಸಿದ ಫೋಟೋಗಳು ಎಂಬುದು ಖಾತ್ರಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿರುವ ಫೋಟೋಗಳು ಎಡಿಟ್ ಮಾಡಿರುವುದು ಎಂದು ಖಚಿತವಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುಪಿಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದ ಪ್ರಣಾಳಿಕೆ ಫೋಟೋಗಳನ್ನು ಎಡಿಟ್  ಮಾಡುವ ಮೂಲಕ   ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಚುನಾವಣೆಗೆ ಮುನ್ನ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಬೆಂಬಲಿಸುತ್ತಿದ್ದಾರೆಂದು ತೋರಿಸಲು ಅವುಗಳಲ್ಲಿ ಒಂದನ್ನು ಬಿಜೆಪಿ ಸದಸ್ಯರು ಹಂಚಿಕೊಂಡರೆ, ಇನ್ನೊಂದನ್ನು ಎಎಪಿಯ ಪಂಜಾಬ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಅವರನ್ನು ಬೆಂಬಲಿಸುತ್ತಿದ್ದಾರೆಂದು ತಪ್ಪಾಗಿ ಬಿಂಬಿಸಿದ್ದಾರೆ.


ಇದನ್ನು ಓದಿರಿ: Fact check: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಮತದಾರರಿಗೆ ಹಣ ನೀಡುತ್ತಿದೆ ಎಂದು ಹಳೆಯ ಫೋಟೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights