ಉದ್ಯೋಗಕೊಡಿಸುವುದಾಗಿ ಕರೆದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ
ಉದ್ಯೋಗ ಕೊಡಿಸುವುದಾಗಿ ಕರೆದೋಯ್ದು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಉತ್ತರ ಪ್ರದೇಶ ಮೂಲಕ ರಾಜ, ಬಲರಾಮ್, ಸೆಬಾಸ್ಟಿನ್ ಮತ್ತು ಜಿತೇಂದ್ರ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲಕ ಯುವತಿಯೊಬ್ಬರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಲಾಕ್ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದಾಗಿ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ತನ್ನ ಫೇಸ್ಬುಕ್ ಖಾತೆಯಲ್ಲೇ ಉದ್ಯೋಗ ಇದ್ದರೆ ತಿಳಿಸಿ’ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡು ಫೋನ್ ನಂಬರ್ ಸಹಿತ ಪೋಸ್ಟ್ ಹಾಕಿದ್ದರು.
ಪೋಸ್ಟ್ ಗಮನಿಸಿದ ರಾಜ್ ಎಂಬಾತ ಸೆ.14ರಂದು ಯುವತಿಗೆ ಕರೆ ಮಾಡಿ ಕೆಲಸ ಕೊಡಿಸುವುದಾಗಿ ಕರೆದಿದ್ದ. ಆತ ಕೊಟ್ಟ ವಿಳಾಸಕ್ಕೆ ತೆರಳಿದ ಯುವತಿಯನ್ನು ಕರೆದೊಯ್ದು ಆತ ಮತ್ತು ಆತನ ಮೂವರು ಸ್ನೇಹಿತರಾದ ಬಲರಾಮ್, ಸೆಬಾಸ್ಟಿನ್, ಜಿತೇಂದ್ರ ನಾಲ್ವರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಿದ್ದಾರೆ.
ಅಲ್ಲದೆ, ಕುಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರಿಸಿಕೊಂಡು, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಫೇಸ್ಬುಕ್ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಯುವತಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದು, ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಸಿಎಂ ಬಿಎಸ್ವೈ, ಪುತ್ರ ವಿಜಯೇಂದ್ರ ವಿರುದ್ಧ ಸಿದ್ದು, ಡಿಕೆಶಿ ಗಂಭೀರ ಆರೋಪ! ಮಾಧ್ಯಮಗಳಿಂದ ಮರೆಯಾಯಿತು ಆ ಸುದ್ದಿ!

