ಬಿಹಾರ ಚುನಾವಣೆ: ಆರ್‌ಜೆಡಿ-ಕಾಂಗ್ರೆಸ್‌ ನಡುವೆ ಸ್ಥಾನ ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್‌ಗೆ ಸಿಕ್ಕ ಸೀಟುಗಳೆಷ್ಟು?

ಇದೇ ತಿಂಗಳ ಅಂತ್ಯದಿಂದ ಬಿಹಾರ ಚುನಾವಣೆ ಆರಂಭವಾಗಲಿದೆ. ಹಾಗಾಗಿ ಮೈತ್ರಿಕೂಟಗಳಲ್ಲಿ ಸೀಟು ಹಂಚಿಕೆಯ ಕಗ್ಗಂಟನ್ನು ಬಿಡಿಸಿಕೊಳ್ಳಲು ಪಕ್ಷಗಳು ಸೆಣೆಸಾಡುತ್ತಿವೆ. ಆರ್‌ಜೆಡಿ, ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿಕೂಟದಲ್ಲಿ ಸ್ಥಾನಗಳ ಹಂಚಿಕೆಯ ಕಸರತ್ತು ಪೂರ್ಣಗೊಂಡಿದ್ದು, ಆರ್‌ಜೆಡಿ 143 ಮತ್ತು ಕಾಂಗ್ರೆಸ್‌ 70 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬಿಹಾರದ ವಿಧಾನಸಭೆಯ ಒಟ್ಟು 243 ಸ್ಥಾನಗಳಲ್ಲಿ ಮಹಾ ಮೈತ್ರಿಕೂಟದ ಉಳಿದ ಪಕ್ಷಗಳು 28 ರಿಂದ 30 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಅಲ್ಲದೆ, ವಿಕಾಸ್‌ ಶೀಲ್‌ ಪಾರ್ಟಿ 10 ರಿಂದ 12 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ ಎಂದು ಮಹಾ ಮೈತ್ರಿಕೂಟದ ಮೂಲಗಳು ತಿಳಿಸಿವೆ.

ಅಲ್ಲದೆ, ಮಹಾಮೈತ್ರಿಯಲ್ಲಿಯಲ್ಲಿದ್ದ ಹಿಂದೂಸ್ತಾನಿ ಆವಾಮಿ ಮೋರ್ಚಾ (ಜಾತ್ಯತೀತ) ಎನ್‌ಡಿಎ ಮೈತ್ರಿಯೊಂದಿಗೆ ಸೇರಿದೆ.

ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಮತ್ತು 7ರಂದು ಮೂರು ಹಂತಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.


ಇದನ್ನೂ ಓದಿ: ಲಾಕ್‌ಡೌನ್‌ ಎಫೆಕ್ಟ್‌: ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights