Fact Check: ಯುಪಿಯಲ್ಲಿ ಜಾತಿ ದೌರ್ಜನ್ಯ ಎಂದು ಮಹಿಳೆ ಥಳಿಸಲ್ಪಟ್ಟ ವಿಡಿಯೋ ಹಂಚಿಕೆ..!

ಹತ್ರಾಸ್ ಘಟನೆಯ ಬಗ್ಗೆ ರಾಷ್ಟ್ರವ್ಯಾಪಿ ಕೋಲಾಹಲದ ಮಧ್ಯೆ, ಪುರುಷರ ಗುಂಪೊಂದು ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮೇಲ್ಜಾತಿಯ ಪುರುಷರು ಸಾರ್ವಜನಿಕ ಬಾವಿಯಿಂದ ನೀರು ತಂದಿದ್ದಕ್ಕಾಗಿ ಮಹಿಳೆಯನ್ನು ಹೊಡೆಯುತ್ತಿದ್ದರು ಎಂಬ ಶಿರ್ಷಿಕೆಯೊಂದಿಗೆ ವೀಡಿಯೋವೊಂದನ್ನ ಹಂಚಿಕೊಳ್ಳಲಾಗುತ್ತಿದೆ.

ವೀಡಿಯೊದುದ್ದಕ್ಕೂ ಪುರುಷರು ಮಹಿಳೆಗೆ ಚಾವಟಿಯಿಂದ ಹೊಡೆದು ಕಪಾಳಮೋಕ್ಷ ಮಾಡಿ, ಕೂದಲನ್ನು ಎಳೆದುಕೊಂಡು ನೆಲಕ್ಕೆ ಎಸೆಯುತ್ತಿದ್ದಂತೆ ಮಹಿಳೆ ನೋವಿನಿಂದ ಅಳುತ್ತಿರುವುದನ್ನು ಕಾಣಬಹುದು. “ಯೋಗಿಯ ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು ನೋಡಿ. ಸಾರ್ವಜನಿಕ ಬಾವಿಯಿಂದ ಕುಡಿಯುವ ನೀರನ್ನು ತರಲು ಮೇಲ್ಜಾತಿಯ ಪುರುಷರು ಮಹಿಳೆಯನ್ನು ಹೊಡೆಯುತ್ತಿದ್ದಾರೆ ” ಎಂಬ ತಮಿಳು ಶೀರ್ಷಿಕೆಯೊಂದಿಗೆ ವೀಡಿಯೊ ಹಂಚಿಕೊಳ್ಳಲಾಗಿದೆ.

ವಿಡಿಯೋ ಇಲ್ಲಿ ನೋಡಿ :-

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಹೇಳಿಕೆಯನ್ನು ಸುಳ್ಳು ಎಂದು ಕಂಡುಹಿಡಿದಿದೆ. ಈ ಘಟನೆಯು ಗುಜರಾತ್‌ನಿಂದ ಬಂದಿದ್ದು, ಅದರಲ್ಲಿ ಬುಡಕಟ್ಟು ಸಮುದಾಯದ ಸದಸ್ಯರು ಬಾಲಕಿಯು ಒಬ್ಬ ವ್ಯಕ್ತಿಯೊಂದಿಗೆ ಓಡಿಹೋದ ಕಾರಣಕ್ಕಾಗಿ ಥಳಿಸಿದ್ದಾರೆ.

ಎಎಫ್‌ಡಬ್ಲ್ಯೂಎ ತನಿಖೆ :-

ವೀಡಿಯೊ ಯುಪಿಯಿಂದ ಬಂದದ್ದಲ್ಲ. ಅದು ಗುಜರಾತ್‌ನ ಹಳ್ಳಿಯಿಂದ ಬಂದಿದೆ. ಈ ಘಟನೆ ಇದೇ ವರ್ಷ ಮೇ 21 ರಂದು ನಡೆದಿದೆ. ಹಲವಾರು ಸುದ್ದಿ ಲೇಖನಗಳಲ್ಲಿ ನಾವು ವೀಡಿಯೊದ ಸ್ಕ್ರೀನ್ ಹಿಡಿತಗಳನ್ನು ಕಂಡುಕೊಂಡಿದ್ದೇವೆ.

“ಗುಜರಾತ್: ಸಣ್ಣ ಬುಡಕಟ್ಟು ಹುಡುಗಿ ಓಡಿಹೋದ ಕಾರಣಕ್ಕಾಗಿ ಕ್ರೂರವಾಗಿ ಥಳಿಸಲ್ಪಟ್ಟಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ” ಎಂಬ ಶೀರ್ಷಿಕೆಯ ವರದಿಯ ಪ್ರಕಾರ, ಈ ಘಟನೆ ಮೇ 21 ರಂದು ಗುಜರಾತ್‌ನ ಛೋಟಾ ಉದೆಪುರ ಜಿಲ್ಲೆಯ ಬೊಡೆಲಿ ಪಟ್ಟಣದ ಬಳಿಯ ಬಿಲ್ವಂತ್ ಗ್ರಾಮದಲ್ಲಿ ನಡೆದಿದೆ.

ವರದಿಯ ಪ್ರಕಾರ, ವೀಡಿಯೊದಲ್ಲಿ ಥಳಿಸಲ್ಪಟ್ಟ ಮಹಿಳೆ ಬುಡಕಟ್ಟು ಸಮುದಾಯದ 16 ವರ್ಷದ ಬಾಲಕಿ, ಇತ್ತೀಚೆಗೆ ತನ್ನ ಹಳ್ಳಿಯ 20 ವರ್ಷದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು.

ಉಪ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಕಟ್ಕಾಡ್ ಅವರ ಪ್ರಕಾರ, ತಮ್ಮ ಸಮುದಾಯಕ್ಕೆ ಅಗೌರವವನ್ನುಂಟುಮಾಡುವ ಕೃತ್ಯವೆಂದು ಪರಿಗಣಿಸಿ ಬಾಲಕಿಯ ಮೇಲೆ ಪುರುಷರು ಕೋಪಗೊಂಡಿದ್ದರು ಎಂದು ಹೇಳಲಾಗಿದೆ. ಮೇ 28 ರಂದು ಪ್ರಕಟವಾದ “ದಿ ಟೈಮ್ಸ್ ಆಫ್ ಇಂಡಿಯಾ” ಯ ವರದಿಯ ಪ್ರಕಾರ, ಈ ಘಟನೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಪೊಲೀಸರು 15 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಒಂದೇ ಮಾಹಿತಿಯೊಂದಿಗೆ ಹಲವಾರು ಸುದ್ದಿ ವೆಬ್‌ಸೈಟ್‌ಗಳಲ್ಲಿ ಈ ವೀಡಿಯೊವನ್ನು ಕಂಡುಕೊಳ್ಳಲಾಗಿದೆ.

ಆದ್ದರಿಂದ, ವೈರಲ್ ವೀಡಿಯೊ ಯುಪಿಯಿಂದ ಅಲ್ಲ ಗುಜರಾತ್‌ನಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ. ಮಹಿಳೆಯನ್ನು ಸಾರ್ವಜನಿಕ ಬಾವಿ ಬಳಸಿದ್ದಕ್ಕಾಗಿ ಥಳಿಸಲಾಗಿಲ್ಲ. ಬದಲಿಗೆ ತನ್ನ ಸಮುದಾಯದ ಸದಸ್ಯರು ಪ್ರೇಮಿಯೊಂದಿಗೆ ಓಡಿಹೋದ ಕಾರಣಕ್ಕಾಗಿ ಥಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights