ಮಹೇಂದ್ರ ಸಿಂಗ್ ಧೋನಿ ಅವರ ಐದು ವರ್ಷದ ಮಗಳಿಗೆ ಅತ್ಯಾಚಾರದ ಬೆದರಿಕೆ…!
ಐಪಿಎಲ್ 2020 ಆವೃತ್ತಿಯ 21ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ಸೋತ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಐದು ವರ್ಷದ ಮಗಳಿಗೆ ಸೋಶಿಯಲ್ ಮೀಡಿಯಾ ಟ್ರೋಲ್ಗಳಿಂದ ಅತ್ಯಾಚಾರ ಬೆದರಿಕೆ ಬಂದಿದೆ. ಧೋನಿ ಅವರ ಪತ್ನಿ ಸಾಕ್ಷಿ ತನ್ನ ಇನ್ಸ್ಟಾಗ್ರಾಮ್ ಖಾತೆಗೆ ಬೆದರಿಕೆಗಳು ಬಂದಿವೆ.
ಈ ಬೆದರಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷವಾಗಿ ಮಹಿಳೆಯರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜಕಾರಣಿಯಾಗಿ ಬದಲಾದ ನಟಿ ನಾಗ್ಮಾ, “ನಮ್ಮ ರಾಷ್ಟ್ರ ಎಲ್ಲಿಗೆ ಹೋಗುತ್ತಿದೆ? ಇದು ಅಸಹ್ಯಕರವಾದ ಸಂದೇಶ. ಧೋನಿಯ 5 ವರ್ಷದ ಮಗಳು ಜೀವಾ ಅವರಿಗೆ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಎಸ್ಕೆ ಸೋತ ನಂತರ ಅತ್ಯಾಚಾರ ಬೆದರಿಕೆಗಳು ಬರುತ್ತಿದೆ. ಶ್ರೀ # ಪಿಎಂ ನಮ್ಮ ದೇಶದಲ್ಲಿ ಇದು ಏನು ನಡೆಯುತ್ತಿದೆ? ? ” ಎಂದು ಬರೆದಿದ್ದಾರೆ.
Where are we headed as a Nation it’s is disgusting Dhoni's 5-Year-Old Daughter Ziva is Getting Rape Threats after CSK Lost IPL Match to KKR. Mr #PM what is this happening In our country ?? #BetiBachaoBetiPadhao https://t.co/z8bIBTYHGi
— Nagma (@nagma_morarji) October 9, 2020
ಕರ್ನಾಟಕದ ಜಯನಗರದ ಶಾಸಕ ಸೌಮ್ಯಾ ರೆಡ್ಡಿ ತಮ್ಮ ಟೈಮ್ಲೈನ್ನಲ್ಲಿ “ಇದು ಕೇವಲ ಅಸಹ್ಯ! ನಮ್ಮ ದೇಶಕ್ಕೆ ಏನಾಗುತ್ತಿದೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ?” ಎಂದು ಪ್ರತಿಕ್ರಿಯಿಸಿದ್ದಾರೆ.
This is just nasty! What’s happening to our country? Where are we heading ? @MahilaCongress https://t.co/xLYDaqQR4Q
— Sowmya Reddy | ಸೌಮ್ಯ ರೆಡ್ಡಿ (@Sowmyareddyr) October 9, 2020
ರಾಜ್ಯಸಭಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರು “ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಇದು ಅತ್ಯಂತ ಅಸಹ್ಯಕರ ಉದಾಹರಣೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
This has to be the most disgusting example of how social media platforms are being misused. If GoI still turns a blind eye to this then I’d say they are complicit in promoting& condoning such mentality with regards to women&sick, perverse mentality https://t.co/Wjm3caWltf
— Priyanka Chaturvedi (@priyankac19) October 9, 2020
ಅಭಿಮಾನಿಗಳು ಆಟಗಾರರ ಮೇಲೆ ತಮ್ಮ ಕೋಪವನ್ನು ಹೊರಹಾಕಿದ್ದಾರೆ. ಮುಂಚಿನ ದಿನಗಳಲ್ಲಿ ಅವರು ಆಟಗಾರರ ಮನೆಗಳಿಗೆ ಕಲ್ಲು ತೂರಾಟ, ಸುಟ್ಟ ಪೋಸ್ಟರ್ಗಳು ಮತ್ತು ನಿಂದನೆಗಳನ್ನು ಕೂಗುತ್ತಿದ್ದರು. ಸದ್ಯ ಇಂತಹ ಅಸಹ್ಯಕರ ಸಂದೇಶಗಳನ್ನು ರವಾನೆ ಮಾಡುತ್ತಿದ್ದಾರೆ. ಆದಾಗ್ಯೂ, ಆಟಗಾರನ ಮಗಳನ್ನು ಈ ರೀತಿ ಗುರಿಯಾಗಿಸುವುದು ಈ ಹಿಂದೆ ಕೇಳಿರದ ಸಂಗತಿಯಾಗಿದೆ.

