ಬಾಯ್ಕಾಟ್ ಚೀನಾ ವಿಫಲ: ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್ಗಳ ದಾಖಲೆಯ ಮಾರಾಟ!
ಗಡಿ ಉಪಟಳದ ನಂತರ ಚೀನಾ ಉತ್ಪನ್ನಗಳಿಗೆ ಬಹಿಷ್ಕಾರದ ಕೂಗು ಕೇಳಿಬಂದ ಸಂದರ್ಭದಲ್ಲಿಯೇ ದೇಶದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಲ್ಲಿನ ಕಂಪನಿಗಳ ಸ್ಮಾರ್ಟ್ಫೋನುಗಳು ಮಾರಾಟವಾಗಿವೆ.
ಲಾಕ್ಡೌನ್ ಬಳಿಕ ತೆರೆದುಕೊಂಡಿರುವ ಮಾರುಕಟ್ಟೆಗಳಲ್ಲಿ ಚೀನಿ ಮೊಬೈಲು ಸೆಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.
ಈ ಕಳೆದ ಎರಡ್ಮೂರು ತಿಂಗಳ ಅವಧಿಯಲ್ಲಿ ಸುಮಾರು 4 ಲಕ್ಷ ಚೀನಿ ಮೊಬೈಲುಗಳು ಮಾರಾಟವಾಗಿವೆ ಎಂದು ಒಂದು ಅಂದಾಜು ವರದಿ ತಿಳಿಸಿದೆ.
ಶಿವೋಮಿ, ಸ್ಯಾಮ್ಸಂಗ್, ವಿವೊ, ರಿಯಲ್ಮಿ, ಒಪ್ಪೊ ಕಂಪನಿಗಳ ಸ್ಮಾರ್ಟ್ಫೋನ್ ಮಾರಾಟದಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ.
ಕಳೆದ ವರ್ಷ ಇದೇ ಅವಧಿಯ ಮಾರಾಟದ ಸಂಖ್ಳೆಯೆಯನ್ಬೂ ಮೀರಿ ಈ ಅವಧಿಯಲ್ಲಿ ಚೀನಾ ನಿರ್ಮಿತ ಮೊಬೈಲುಗಳು ಮಾರಾಟ ಕಂಡಿವೆ ಎಂದು ವರದಿಗಳು ತಿಳಿಸಿವೆ.
ಲಾಕ್ಡೌನ್ ಬಳಿಕದ ಮೂರು ತಿಂಗಳ ಮಾರಾಟ ಅಂಕಿ ಅಂಶ ಗಮನಿಸಿದರೇ ಚೀನಿ ಮೊಬೈಲುಗಳಿಗೆ ಬೇಡಿಕೆ ವೃದ್ಧಿಯಾಗಿರುವುದು ಕಂಡುಬಂದಿದೆ. ಸದ್ಯ ದೇಶದ ಮೊಬೈಲ್ ಮಾರುಕಟ್ಟೆಯ ಶೇ. 76ರಷ್ಟರ ಪಾಲು ಈ ಚೀನಿ ಸೆಟ್ಗಳದ್ದೇ ಆಗಿದೆ.
ಇನ್ನು ಫ್ಲಿಪ್ಕಾರ್ಟ್ ಮತ್ತು ಅಮೇಜಾನ್ನಂತಹ ಆನ್ಲೈನ್ ಶಾಪಿಂಗ್ ಮಳಿಗೆಗಳ ಮೆಗಾ ಮಾರಾಟ ಮೇಳದ ಸಂದರ್ಭದಲ್ಲಂತೂ ಈ ಸೆಟ್ಗಳಿಗೆ ಜನ ಬಕಪಕ್ಷಿಗಳಂತೆ ಮುಗಿಬೀಳುತ್ತಿರುವುದು ವೇದ್ಯವಾಗಿದೆ.
ಇದನ್ನೂ ಓದಿ: ಚೀನಾ ಆಕ್ರಮಿಸಿಕೊಂಡಿರುವ ಲಡಾಖ್ ಭೂಮಿಯನ್ನು ಯಾವಾಗ ವಶಕ್ಕೆ ಪಡೆಯುತ್ತೀರಿ: ಮೋದಿಗೆ ರಾಹುಲ್ ಪ್ರಶ್ನೆ

