Fact check: ಮುಂಗರ್ ಘರ್ಷಣೆ : ಗುಂಡೇಟಿಗೆ ಬಲಿಯಾದ ಅನುರಾಗ್ ಪೋದ್ದಾರ್ ತಾಯಿಗೆ ಹೃದಯಾಘಾತ..?
ಅಕ್ಟೋಬರ್ 26 ಸೋಮವಾರ ಮುಂಗರ್ನಲ್ಲಿ ದುರ್ಗಾ ಪೂಜಾ ವಿಳಂಬದ ಘರ್ಷಣೆಯ ನಡುವೆ ಬಿಹಾರ ಪೊಲೀಸರು ಗುಂಡು ಹಾರಿಸಿದಕ್ಕೆ ಹದಿನೆಂಟು ವರ್ಷದ ಅನುರಾಗ್ ಪೋದ್ದಾರ್ ಸಾವನ್ನಪ್ಪಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸಂದೇಶವೊಂದು ತನ್ನ ಏಕೈಕ ಪುತ್ರನ ಸಾವಿನಿಂದಾಗಿ ತಾಯಿ ಹೃದಯ ಸ್ತಂಭನ ನಿಂತು ನಿಧನರಾದರು ಎಂದು ಹೇಳುತ್ತಿದೆ.
ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಅನೇಕ ಬಳಕೆದಾರರು ಈಗ ಅವರ ತಾಯಿ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.

ಶೀರ್ಷಿಕೆ “ ತನ್ನ ಚಿಕ್ಕ ಮಗ ಅನುರಾಗ್ ಪೋದ್ದಾ ಮರಣವನ್ನು ಸಹಿಸಲಾರದ ತಾಯಿ ಹೃದಯಾಘಾತದಿಂದ ಮೃತಪಟ್ಟರು. ಇದರಿಂದಾಗಿ ಕುಟುಂಬ ಸಂಪೂರ್ಣವಾಗಿ ನಾಶವಾಗಿದೆ ” ಎಂದು ಬರೆಯಲಾಗಿದೆ.
ಇಂಡಿಯಾ ಟುಡೆ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್ (ಎಎಫ್ಡಬ್ಲ್ಯೂಎ), ಅನುರಾಗ್ ಪೋಡ್ಡಾರ್ ಅವರ ತಾಯಿ ಸಾವಿಗೆ ಸಂಬಂಧಿಸಿದ ವೈರಲ್ ಫೋಟೋ ಸತ್ಯವಲ್ಲ. ಮಗನ ಸಾವಿನ ಬಳಿಕ ಪೋದ್ದಾರ್ ಅವರ ತಾಯಿ ಪೂನಂ ದೇವಿ ಅವರಿಗೆ ಹೃದಯಾಘಾತವಾಗಲಿಲ್ಲ. ಪೂನಂ ದೇವಿ, ತನ್ನ ಮಗನ ಮರಣದ ನಂತರ ಮಾನಸಿಕವಾಗಿ ಕುಗ್ಗಿ ಹೋಗಿದ್ದು ದೈಹಿಕವಾಗಿ ಉತ್ತಮವಾಗಿದ್ದಾರೆ.
ಅದೂ ಅಲ್ಲದೇ ಅವರ ತಾಯಿ ಸಾವನ್ನಪ್ಪಿದ್ದಾರೆ ಎನ್ನುವುದಕ್ಕೆ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಪೂನಂ ದೇವಿಯ ಸಾವನ್ನು ವರದಿ ಮಾಡಿಲ್ಲವಾದ್ದರಿಂದ, ಟ್ವಿಟರ್ನಲ್ಲಿ ಹಲವಾರು ಬಳಕೆದಾರರು ವೈರಲ್ ವಿಚಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೇ ಘಟನೆ ಬಳಿಕ ಅನುರಾಗ್ ಅವರ ತಂದೆ ಅಮರನಾಥ ಪೊಡ್ಡಾರ್ ಅವರ ಪತ್ನಿ ಹೃದಯಾಘಾತದಿಂದ ಬಳಲುತ್ತಿಲ್ಲ ಎಂದು ದೃಢಪಡಿಸಿದರು. “ಅನುರಾಗ್ ನಾಲ್ಕು ಹೆಣ್ಣುಮಕ್ಕಳ ನಂತರ ನಮ್ಮ ಏಕೈಕ ಮಗ. ನನ್ನ ಹೆಂಡತಿ ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿಹೋಗಿದ್ದಾಳೆ. ಯಾವಾಗಲೂ ಅಳುತ್ತಾಳೆ. ಆದರೆ ಆಕೆಗೆ ಇಲ್ಲಿಯವರೆಗೆ ಯಾವುದೇ ದೈಹಿಕ ಸಮಸ್ಯೆಗಳಿಲ್ಲ ”ಎಂದು ಅಮರನಾಥ್ ತಿಳಿಸಿದ್ದಾರೆ.
ಏನಾಯಿತು?
ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ಬಿಹಾರ ಸಾಕ್ಷಿಯಾಗಲು ಕೆಲವು ದಿನಗಳ ಮೊದಲು, ಜಿಲ್ಲೆಯಲ್ಲಿ “ಬಡಿ ಮಾ ದುರ್ಗಾ” ವಿಗ್ರಹ ಮುಳುಗುವಿಕೆಯ ವಿಳಂಬದ ಬಗ್ಗೆ ನಡೆದ ಘರ್ಷಣೆಗಳಲ್ಲಿ ಮುಂಗರ್ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಗೆ ಸಾಕ್ಷಿಯಾಯಿತು.
ಘರ್ಷಣೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ವೇಳೆ ಅನುರಾಗ್ ಪೋದ್ದಾರ್ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪೋದ್ದಾರ್ ಅವರ ತಾಯಿ ತನ್ನ ಮಗನ ದೇಹವನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡು ಕಣ್ಣೀರಾಕುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೇಳೆ ಅನುರಾಗ್ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದಳು ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು ಹೇಳಿಕೆ ಎನ್ನುವುದು ತನಿಖೆಯಿಂದ ಬಯಲಾಗಿದೆ.
ಮುಂಗರ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಮಧ್ಯೆ ಪೋಡ್ಡಾರ್ ಸಾವಿಗೆ ಕಾರಣವಾದ ಪೊಲೀಸ್ ಗುಂಡಿನ ವಿರುದ್ಧ ಚುನಾವಣಾ ಆಯೋಗ ಗುರುವಾರ (ಅಕ್ಟೋಬರ್ 29) ಮುಂಗರ್ ಪೊಲೀಸ್ ಅಧೀಕ್ಷಕ (ಎಸ್ಪಿ) ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿದೆ.
ಆದರೆ ಮುಂಗರ್ನಲ್ಲಿ ಅನುರಾಗ್ ಪೋದ್ದಾರ್ ಅವರ ತಾಯಿಯ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎನ್ನುವುದು ದೃಢವಾಗಿದೆ.

