ವೆಟ್ರಿ ವೆಲ್‌ ಯಾತ್ರೆ ನಡೆಸಲು ಮುಂದಾಗಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಬಂಧನ!

ಅನುಮತಿಯಿಲ್ಲದೆ “ವೆಟ್ರಿ ವೆಲ್ ಯಾತ್ರೆ” (ವಿಕ್ಟೋರಿಯಸ್ ಸ್ಪಿಯರ್ ಯಾತ್ರೆ) ಅನ್ನು ಪ್ರಾರಂಭಿಸಿದ್ದಕ್ಕಾಗಿ ತಮಿಳುನಾಡು ಪೊಲೀಸರು ರಾಜ್ಯ ಬಿಜೆಪಿ ಮುಖ್ಯಸ್ಥ ಎಲ್ ಮುರುಗನ್ ಮತ್ತು ಸುಮಾರು 100 ಮಂದಿ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 6 (ಇಂದು) ರಿಂದ ಡಿಸೆಂಬರ್ 6 ರವರೆಗೆ ತಮಿಳುನಾಡು ಬಿಜೆಪಿ ಘಟಕ ಯಾತ್ರೆಯನ್ನು ಆಯೋಜಿಸಿತ್ತು. ಕೊರೊನಾ ಕಾರಣದಿಂದಾಗಿ ಯಾತ್ರೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿತ್ತು.

ಅನುಮತಿ ಇಲ್ಲದಿದ್ದರೂ, ಬಿಜೆಪಿ ನಾಯಕರು ಚೆನೈ ಸಮೀಪದ ತಿರುವಳ್ಳೂರು ಜಿಲ್ಲೆಯ ತಿರುಟ್ಟಾನಿ ಮುರುಗನ್‌ ದೇವಸ್ಥಾನದಿಂದ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದರು.

ಚೆನ್ನೈ-ತಿರುವಳ್ಳೂರು ಗಡಿಯಲ್ಲಿ, ಪೊಲೀಸರು ಬಿಜೆಪಿ ಕಾರ್ಯಕರ್ತರ ವಾಹನಗಳನ್ನು ತಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಮುರುಗನ್ ಮತ್ತು ಕೆಲವು ನಾಯಕರಿಗೆ ದೇವಸ್ಥಾನಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರು. ಅಲ್ಲದೆ, ತಿರುವಳ್ಳೂರಿನಲ್ಲಿ ಕಾರ್ಯಕ್ರಮವನ್ನು ನಡೆಸಿದರೆ ಬಂಧಸಿವುದಾಗಿ ತಿಳಿಸಿದ್ದಾರು. ಪೊಲೀಸರು ಸೂಚನೆಯನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

1992ರಲ್ಲಿ ಬಾಬರಿ ಮಸೀದಿ ನೆಲಸಮಗೊಂಡ ದಿನದ ವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 06ರಂದು ತೂತುಕುಡಿ ಜಿಲ್ಲೆಯ ತಿರುಚೆಂದೂರು ಮುರುಗನ್‌ ದೇವಸ್ಥಾನದಲ್ಲಿ ವೇಲ್‌ ಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಸಲು ಬಿಜೆಪಿ ಚಿಂತಿಸಿತ್ತು. ಅದೇ ದೇವಸ್ಥಾನದಲ್ಲಿ 192ರಲ್ಲಿ ಎಲ್‌ಕೆ ಅಡ್ವಾಣಿ ನೇತೃತ್ವದಲ್ಲಿ ರಾಷ್ಟ್ರದ್ಯಂತ ನಡೆದ ರಥಯಾತ್ರೆಯು ಕೊನೆಗೊಂಡಿತ್ತು. ಅದರ ನೆನಪಿನಾರ್ಥವಾಗಿ ಡಿ. 06ರಂದು ವೆಟ್ರಿ ವೇಲ್‌ ಯಾತ್ರೆಯ ಸಮಾರೋಪ ನಡೆಸಲು ಉದ್ದೇಶಿಸಿದೆ.

ಬಿಜೆಪಿಯ ವೆಟ್ರೆ ವೇಲ್‌ ಯಾತ್ರೆಯು ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ.


ಇದನ್ನೂ ಓದಿ: ಕೊಲೆ ಆರೋಪ: ಕಾಂಗ್ರೆಸ್‌ ಮಾಜಿ ಸಚಿವ ವಿನಯ್‌ ಕುಲಕರ್ಣಿ ಬಂಧನ! ಬಿಜೆಪಿಯ ಹುನ್ನಾರ ಎಂದ ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights