ಕೃಷಿ ನೀತಿಗಳನ್ನು ಹಿಂಪಡೆಯಿರಿ- ಇಲ್ಲ ಅಧಿಕಾರದಿಂದ ಕೆಳಗಿಳಿಯಿರಿ: ಮೋದಿ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ತಕ್ಷಣವೇ ರೈತ ವಿರೋಧಿ ಕೃಷಿ ನೀತಿಗಳನ್ನು ಹಿಂಪಡೆಯಬೇಕು ಅಥವಾ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಬಿಜೆಪಿಯ ದುರಾಡಳಿತವನ್ನು ಮೌನವಾಗಿ ಸಹಿಸಿಕೊಳ್ಳುವುದಕ್ಕಿಂತ, ಅದನ್ನು ವಿರೋಧಿಸಿ ಜೈಲುನಲ್ಲಿರುವುದೇ ಉತ್ತಮ. ನಾವು ಜೈಲಿಗೂ ಸಿದ್ದವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ರೈತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಉಳಿಯಬಾದರು. ತಕ್ಷಣವೇ ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಕೆಳಗಿಳಿಯಬೇಕು ಎಂದು ಅವರು ಹೇಳಿದ್ದಾರೆ.
ಕೇಸರಿ ಪಡೆ ಬಂಗಾಳದ ಮೆಲೆ ಹಿಡಿತ ಸಾಧಿಸಲು ಎಂದಿಗೂ ಅವಕಾಶ ಕೊಡುವುದಿಲ್ಲ. ಬಿಜೆಪಿ ಅಂತಹ ಯಾವುದೇ ಪ್ರಯತ್ನಕ್ಕೂ ರಾಜ್ಯದ ಜನರು ಆಸ್ಪದ ಕೊಡುವುದಿಲ್ಲ ಎಂದಿದ್ದಾರೆ.
ತಮ್ಮ ಪಕ್ಷವು ಸತತ ಮೂರನೇ ಬಾರಿಯೂ ಅಧಿಕಾರಕ್ಕೆ ಮರಳಲಿದೆ. ಮುಂದಿನ ವರ್ಷ ಜೂನ್ ನಂತರವೂ ಸರ್ಕಾರದ ಉಚಿತ ಪಡಿತರ ಯೋಜನೆ ಮುಂದುವರೆಯಲಿದೆ ಎಂದು ಅವರು ಘೋಷಿಸಿದ್ದಾರೆ.
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
Read Also: ಗ್ರಾಮ ಪಂಚಾಯತಿ ಚುನಾವಣೆ; ರಾಜ್ಯಾದ್ಯಂತ ಚುನಾವಣಾ ಬಹಿಷ್ಕಾರದ ಪರ್ವ!

