BJP ಸರ್ಕಾರ ಕೋಟ್ಯಾಧಿಪತಿಗಳ ಬಗ್ಗೆ ಮಾತ್ರ ಯೋಚಿಸುತ್ತದೆ; ರೈತರ ಬಗ್ಗೆಯಲ್ಲ:  ಪ್ರಿಯಾಂಕ ಗಾಂಧಿ

ಬಿಜೆಪಿ ಸರ್ಕಾರವು ಕೋಟ್ಯಾಧಿಪತಿಗಳ ಬಗ್ಗೆ ಮಾತ್ರ ಯೋಚಿಸುತ್ತದೆ. ರೈತರ-ಸಾಮಾನ್ಯ ಜನರ ಬಗ್ಗೆಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ರೈತರಿಗೆ ಕಬ್ಬಿನ ಬಾಕಿ ಹಣವನ್ನು ಪಾವತಿ ಮಾಡದೇ ಇರುವುದರ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ” ಬಿಜೆಪಿ ಸರ್ಕಾರವು ಹೊಸ ಸಂಸತ್ ಕಾರಿಡಾರ್ ನಿರ್ಮಿಸಲು 20,000 ಕೋಟಿ ರೂ., ಪ್ರಧಾನಮಂತ್ರಿಗೆ ವಿಶೇಷ ವಿಮಾನ ಖರೀದಿಸಲು 16,000 ಕೋಟಿ ರೂ. ನೀಡಿದೆ. ಆದರೆ, ಉತ್ತರ ಪ್ರದೇಶದ ರೈತರಿಗೆ ಕಬ್ಬಿನ 14,000 ಕೋಟಿ ರೂ. ಬಾಕಿ ಪಾವತಿಸಲು ಹಣವಿಲ್ಲ. ಕಬ್ಬಿನ ಬೆಲೆ 2017 ರಿಂದ ಹೆಚ್ಚಾಗಲಿಲ್ಲ. ಈ ಸರ್ಕಾರ ಕೋಟ್ಯಾಧಿಪತಿಗಳ ಬಗ್ಗೆ ಮಾತ್ರ ಯೋಚಿಸುತ್ತದೆ” ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.

https://twitter.com/priyankagandhi/status/1335785359414710273?s=20

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ನಾಶಪಡಿಸುವ ಮೂಲಕ ರೈತರನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ಪ್ರಧಾನಮಂತ್ರಿಯ ಪ್ರತಿಯೊಂದು ನಿರ್ಧಾರವು ಬಂಡವಾಳಶಾಹಿಗಳಿಗೆ ಲಾಭವನ್ನು ತರುವ ಉದ್ದೇಶವನ್ನು ಹೊಂದಿದೆ. ಸರ್ಕಾರದ ಈ ಪಿತೂರಿಯನ್ನು ರೈತರು ಈಗ ಅರ್ಥಮಾಡಿಕೊಂಡಿದ್ದಾರೆ” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.


ಇದನ್ನೂ ಓದಿ: ಕೃಷಿ ಕಾಯ್ದೆ ರದ್ದಾಗದಿದ್ದರೆ ಖೇಲ್‌ ರತ್ನ ಪ್ರಶಸ್ತಿ ವಾಪಸ್‌: ಬಾಕ್ಸರ್ ವಿಜೇಂದರ್ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights