ಅಮೆರಿಕಾ ಮಾಸ್ಕ್‌ ನಿಯಮವು ಭಾರತದ ಡೇಟಾವನ್ನು ಆಧರಿಸಿದೆ; ಇದು ದಡ್ಡತನ: ಅಮೆರಿಕಾ ಕಾಂಗ್ರೆಸ್ಸಿಗ

ಅಮೆರಿಕಾದಲ್ಲಿ ಕೊರೊನಾ ಲಸಿಕೆ ಪಡೆದವರೂ ಮಾಸ್ಕ್‌ ಹಾಕಬೇಕು ಎಂಬ ನಿಯಮವನ್ನು ಮರು ಜಾರಿ ಮಾಡಲು ಮುಂದಾಗಿದೆ. ಹೀಗಾಗಿ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷ ಮತ್ತು ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ವಿರುದ್ದ ರಿಪಬ್ಲಿಕನ್ ಪಕ್ಷದ ಉನ್ನತ ನಾಯಕ ವಾಗ್ದಾಳಿ ನಡೆಸಿದ್ದು, ಅಮೆರಿಕದಲ್ಲಿ ಈ ನಿಮಯಗಳು ಭಾರತದ ಡೇಟಾವನ್ನು ಆಧರಿಸಿದೆ ಎಂದು ಆರೋಪಿಸಿದ್ದಾರೆ.

ಅಮೆರಿಕಾ ಕಾಂಗ್ರೆಸ್‌ನ ಸದಸ್ಯ, ಅಲ್ಪಸಂಖ್ಯಾತ ನಾಯಕ ಕೆವಿನ್ ಮೆಕಾರ್ಥಿ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಾಸ್ಕ್‌ ಹಾಕುವ ನಿಯಮವನ್ನು ಜಾರಿಗೆ ತರುವ ಪ್ರಸ್ತಾಪದ ವಿರುದ್ದ ಮಾತನಾಡಿದ್ದಾರೆ.

ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರ(ಸಿಡಿಸಿ)ದ ಇತ್ತೀಚಿನ ಶಿಫಾರಸುಗಳು ಇನ್ನೂ ವರದಿಯೇ ಆಗಿಲ್ಲದ ವರದಿಯನ್ನು ಆಧರಿಸಿದೆ. ಈ ವರದಿಯು “ಅಮೆರಿಕದಲ್ಲಿ ಅಂಗೀಕರಿಸದ ಲಸಿಕೆಯ ಬಗ್ಗೆ ಭಾರತವನ್ನು ಆಧರಿಸಿದೆ” ಎಂದು ಅವರು ಆರೋಪಿಸಿದ್ದಾರೆ.

“ಮಾಸ್ಕ್‌ ಹಾಕಬೇಕೆಂಬ ನಿಯಮವು ಭಾರತದಲ್ಲಿ ನಡೆಸಿದ ಅಧ್ಯಯನದ ಮೇಲೆ ಆಧಾರಿತವಾಗಿದೆ, ಇದು ಅಮೆರಿಕದಲ್ಲಿ ಅಂಗೀಕರಿಸಲ್ಪಟ್ಟಿಲ್ಲ, ಇದು ನಮ್ಮ ಶಾಲೆಗಳನ್ನು ಮುಚ್ಚುವ ಯೋಜನೆಯಾಗಿರಬಹುದೇ?” ಎಂದು ಅವರು ಪ್ರಶ್ನಿಸಿದ್ದಾರೆ

ಸದನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ವಿರೋಧ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಅವರನ್ನು “ಮೂರ್ಖ” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಪಿ.ವಿ ಸಿಂಧು, ಸತೀಶ್ ಕುಮಾರ್, ಅಥಾನು ದಾಸ್, ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶ!

Spread the love

Leave a Reply

Your email address will not be published. Required fields are marked *