ಟೋಕಿಯೊ ಒಲಿಂಪಿಕ್ಸ್: ಪಿ.ವಿ ಸಿಂಧು, ಸತೀಶ್ ಕುಮಾರ್, ಅಥಾನು ದಾಸ್, ಪುರುಷರ ಹಾಕಿ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶ!

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ 16 ನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು 2-0 ಅಂಕಗಳಿಂದ ಸೋಲಿಸಿದ್ದು, ಮಹಿಳಾ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಭಾರತದ ಬಾಕ್ಸರ್‌ ಸತೀಶ್ ಕುಮಾರ್ ಅವರು ಜಮೈಕಾದ ರಿಕಾರ್ಡೊ ಬ್ರೌನ್ ವಿರುದ್ಧ ಪುರುಷರ ಸೂಪರ್ ಹೆವಿ (+ 91 ಕೆಜಿ) ವಿಭಾಗದ 16 ನೇ ಸುತ್ತಿನಲ್ಲಿ 4:1 ರ ಅಂತರದಲ್ಲಿ ಗೆದ್ದಿದ್ದು, ಕ್ವಾರ್ಟರ್ ಫೈನಲ್ ಸ್ಥಾನ ಗಳಿಸಿದ್ದಾರೆ.

ಪುರುಷರ ‘ಪೂಲ್ ಎ’ ವಿಭಾಗದ ಹಾಕಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 3-1 ಗೋಲುಗಳ ಅಂತರದಿಂದ ಭಾರತೀಯ ಪುರುಷರ ಹಾಕಿ ತಂಡವು ಗೆಲುವು ಸಾಧಿಸಿದ್ದು, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿದೆ.

ಇದನ್ನೂ ಓದಿ: ಭಾರತ v/s ಲಂಕಾ: ಟಿ-20 ಮ್ಯಾಚ್‌ನಲ್ಲಿ ಭಾರತಕ್ಕೆ ಭರ್ಜರಿ ಜಯ; ಧೋನಿಯನ್ನು ನೆನಪಿಸಿದ ಇಶಾನ್ ಕಿಶನ್!

ಪುರುಷರ ವೈಯಕ್ತಿಕ 1/16 ಎಲಿಮಿನೇಷನ್ ಥ್ರಿಲ್ಲರ್ ನಲ್ಲಿ ಭಾರತದ ಬಿಲ್ಲುಗಾರ್ತಿ ಅಥಾನು ದಾಸ್ ಅವರು ದಕ್ಷಿಣ ಕೊರಿಯಾದ ಓಹ್ ಜಿನ್ ಹೈಕ್ ವಿರುದ್ಧ 6-5ರಿಂದ ಗೆದಿದ್ದಾರೆ.

ಶೂಟಿಂಗ್‌ನಲ್ಲಿ ಭಾರತದ ಮನು ಭಾಕರ್ 5 ನೇ ಸ್ಥಾನದಲ್ಲಿದ್ದರೆ, ಮಹಿಳೆಯರ 25 ಮೀ ಪಿಸ್ತೂಲ್ (ನಿಖರ) ಅರ್ಹತಾ ಸುತ್ತಿನ ನಂತರ ರಾಹಿ ಸರ್ನೋಬತ್ 25 ನೇ ಸ್ಥಾನದಲ್ಲಿದ್ದಾರೆ. ಮಹಿಳಾ 25 ಮೀ ಪಿಸ್ತೂಲ್ (ರಾಪಿಡ್) ಅರ್ಹತಾ ಸುತ್ತು ನಾಳೆ ನಡೆಯಲಿದ್ದು, ಟಾಪ್ 8 ಶೂಟರ್‌ಗಳು ನಿಖರತೆ ಮತ್ತು ರಾಪಿಡ್ ಫೈನಲ್‌ನಲ್ಲಿ ಅರ್ಹತೆ ಪಡೆದಿದ್ದಾರೆ.

ಭಾರತದ ಜೋಡಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಅವರು ಲೈಟ್‌ವೈಟ್ ಡಬಲ್ ಸ್ಕಲ್ಸ್ ಫೈನಲ್ ಬಿ ಯಲ್ಲಿ 5 ನೇ ಸ್ಥಾನ ಮತ್ತು 6: 29.66 ರ ಸಮಯದೊಂದಿಗೆ ಒಟ್ಟಾರೆ 11 ನೇ ಸ್ಥಾನ ಪಡೆಸಿದ್ದಾರೆ.

ಇತರ ಕ್ರೀಡೆಗಳಲ್ಲಿ, ಭಾರತದ ಗಾಲ್ಫ್ ಆಟಗಾರರಾದ ಅನಿರ್ಬನ್ ಲಹಿರಿ ಮತ್ತು ಉದಯನ್ ಮಾನೆ ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ತಮ್ಮ ಆಟವನ್ನು ಆರಂಭಿಸಿದ್ದಾರೆ. ಬಾಕ್ಸರ್‌ ಮೇರಿ ಕೋಮ್ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವತ್ತ ಧಾವಿಸುತ್ತಿದ್ದಾರೆ.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನುಗೆ ರೈಲ್ವೇಯಿಂದ 2 ಕೋಟಿ ರೂ. ಉಡುಗೊಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights