ಮಳೆಗಾಲದಲ್ಲಿ ಗೋವಾ ಜಲಪಾತದ ಮೂಲಕ ಹಾದುಹೋಗುವ ರೈಲಿನ ಅದ್ಭುತ ನೋಟ..
ದೇಶದಾದ್ಯಂತ ಭಾರೀ ಮಳೆಯಿಂದಾಗಿ ಜಲಪಾತಗಳು ತುಂಬಿ ಹರಿಯುತ್ತಿವೆ. ಈ ಅದ್ಬುತ ದೃಶ್ಯಗಳನ್ನು ನೋಡಲು ಜನ ಸಾಗರವೇ ಜಲಪಾತಗಳತ್ತ ಲಗ್ಗೆ ಇಟ್ಟಿದೆ. ಇಂತಹ ಮನಮೋಹಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಳೆಗಾಲದಲ್ಲಿ ಗೋವಾ ಜಲಪಾತದ ಮೂಲಕ ಹಾದುಹೋಗುವ ರೈಲಿನ ಅದ್ಭುತ ನೋಟ ಕಂಡು ಜನ ಆನಂದಿಸಿದ್ದಾರೆ. ರೈಲ್ವೆ ಸಚಿವಾಲಯ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, ಮಾಂಡೋವಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ ವೇಳೆ ಗೋವಾದ ದೂಧಸಾಗರ ಜಲಪಾತದ ಬಳಿ ಹಾದು ಹೋಗುತ್ತಿದ್ದ ರೈಲನ್ನು ಮಧ್ಯ ಭಾಗದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಜಲಪಾತದಿಂದ ನೀರಿನ ಸಣ್ಣ ಸಣ್ಣ ಹನಿಗಳು ಇಬ್ಬನಿಯಂತೆ ದಟ್ಟವಾಗಿ ರೈಲನ್ನು ಆವರಿಸುವ ದೃಶ್ಯ ನೋಡುಗರ ಕಣ್ಮನ ಸೆಳೆದಿದೆ. ಗೋವಾದಿಂದ ಬೆಂಗಳೂರಿಗೆ ಸಂಪರ್ಕಿಸುವ ರೈಲು ಮಾರ್ಗದಿಂದ ದುಧ್‌ಸಾಗರ್ ಜಲಪಾತ ಗೋಚರಿಸುತ್ತದೆ.
WATCH: A train passing through Doodhsagar waterfall in South Western Railway, halted due to heavy rainfall. @RailMinIndia pic.twitter.com/lrGbfPpYbd
— Prasar Bharati News Services पी.बी.एन.एस. (@PBNS_India) July 28, 2021
310 ಮೀಟರ್ ಎತ್ತರ ಮತ್ತು ಸರಾಸರಿ 30 ಮೀಟರ್ ಅಗಲವಿರುವ ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ದುಧ್‌ಸಾಗರ್ ಜಲಪಾತ ಒಂದು. ಪಶ್ಚಿಮ ಭಾರತದಲ್ಲಿ ಮಾನ್ಸೂನ್ ಮಳೆಯಿಂದಾಗಿ ದುಧ್‌ಸಾಗರ್ ಜಲಪಾತ ಅಥವಾ ‘ಹಾಲಿನ ಸಮುದ್ರ’ದಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತದೆ. ದುಧ್ಸಾಗರ್ ಜಲಪಾತದ ಸುತ್ತಮುತ್ತಲಿನ ಪ್ರದೇಶ ಪತನಶೀಲ ಕಾಡುಗಳಿಂದ ಆವೃತವಾಗಿದ್ದು ಅತ್ಯಂತ ವೈವಿಧ್ಯಮಯ ಜೀವವೈವಿಧ್ಯತೆಯನ್ನು ಹೊಂದಿದೆ.
ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಪಶ್ಚಿಮ ಘಟ್ಟದ ಮೊಲೆಮ್ ರಾಷ್ಟ್ರೀಯ ಉದ್ಯಾನವನದಲ್ಲಿ ನೆಲೆಗೊಂಡಿರುವ ದುಧ್‌ಸಾಗರ್ ಜಲಪಾತ ಪಶ್ಚಿಮ ಘಟ್ಟದಿಂದ ಗೋವಾದ ರಾಜಧಾನಿಯಾದ ಪನಾಜಿಗೆ ಪ್ರಯಾಣಿಸುವಾಗ ಮಾಂಡೋವಿ ನದಿಗೆ ಸೇರಿಕೊಳ್ಳುತ್ತದೆ. ಪಣಜಿಯಲ್ಲಿ ಕರ್ನಾಟಕದ ಬೆಳಗವಿ ಜಿಲ್ಲೆಯಲ್ಲಿ ಹುಟ್ಟಿಕೊಂಡಿರುವ ಮಾಂಡೋವಿ ನದಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ.
ಭಾರತ ಮಾಪನಶಾಸ್ತ್ರ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವಂತೆ ಮುಂದಿನ ಮೂರು ದಿನಗಳಲ್ಲಿ ಕೊಂಕಣ ಮತ್ತು ಗೋವಾದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜುಲೈ 30 ಮತ್ತು 31 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಈ ದಿನಗಳಲ್ಲಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.

