ರಾಜ್ ಕುಂದ್ರಾ ಕೇಸ್ ಗೆ ಬಿಗ್ ಟ್ವಿಸ್ಟ್ : ಶೆರ್ಲಿನ್ ಚೋಪ್ರಾರಿಂದ ಲೈಂಗಿಕ ದೌರ್ಜನ್ಯದ ಆರೋಪ!

ಉದ್ಯಮಿ ರಾಜ್ ಕುಂದ್ರಾ ಅವರ ಅಶ್ಲೀಲ ಚಿತ್ರಗಳ ರಚನೆ ಹಾಗೂ ಬಿಡುಗಡೆ ಪ್ರಕರಣ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ನಟಿ ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಏಪ್ರಿಲ್​ನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಶೆರ್ಲಿನ್​ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್​ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದೆ. ‘2019ರ ಆರಂಭದಲ್ಲಿಯೇ ಒಂದು ಆ್ಯಪ್​ ಬ್ಯುಸಿನೆಸ್​ಗಾಗಿ ರಾಜ್​ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್​ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು’ ಎಂದು ದೂರಿನಲ್ಲಿ ಶೆರ್ಲಿನ್​ ಚೋಪ್ರಾ ತಿಳಿಸಿದ್ದಾರೆ.

ಶೆರ್ಲಿನ್ ಚೋಪ್ರಾ ಬಳಿ ಕುಂದ್ರಾ ತಮ್ಮ ಪತ್ನಿ ಶಿಲ್ಪಾ ಶೆಟ್ಟಿಗಿನ ವೈವಾಹಿಕ ಸಂಬಂಧ ಹದಗೆಟ್ಟಿರುವ ಬಗ್ಗೆ ಪ್ರಸ್ತಾಪಿಸಿದ್ದರಂತೆ. ಜೊತೆಗೆ ನಿರಾಕರಿಸಿದರೂ ಕುಂದ್ರಾ ತನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರಂತೆ. ಭಯಗೊಂಡು ವಾಶ್ ರೂಂಗೆ ಧಾವಿಸಿ ಅವನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದೆ ಎಂದು ಚೋಪ್ರಾ ದೂರಿನಲ್ಲಿ ತಿಳಿಸಿದ್ದಾರೆ.

ಅಶ್ಲೀಲ ಚಿತ್ರಗಳ ರಚನೆ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕುಂದ್ರಾ ಅವರ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ. ಜುಲೈ 19 ರ ರಾತ್ರಿ ಬಂಧಿಸಲ್ಪಟ್ಟ ಕುಂದ್ರನನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಮಂಗಳವಾರ ರಿಮಾಂಡ್ ಮಾಡಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ಇನ್ನೂ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು  ಮಂಗಳವಾರ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights