ಭಾರೀ ಮಳೆ : ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ವೀಡಿಯೋ ವೈರಲ್..!

ಉತ್ತರಾಖಂಡದ ಚಮೋಲಿ ಜಿಲ್ಲೆಯ ರಿಷಿಕೇಶ್-ಬದರಿನಾಥ್ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಿರುವ ಮೋಟಾರ್‌ವೇ ಬಳಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.

ಬೃಹತ್ ಬಂಡೆಗಳು ರಸ್ತೆಗೆ ಉರುಳಿದ್ದು ರಾಷ್ಟ್ರೀಯ ಹೆದ್ದಾರಿ ಸಂಚಾರ ಮಾರ್ಗ ಬಂದ್ ಆಗಿದೆ, ಇದರಿಂದಾಗಿ ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಉತ್ತರಾಖಂಡದ ರಿಷಿಕೇಶ್, ಡೆಹ್ರಾಡೂನ್ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದ ಹಲವಾರು ಜನರು ಭೂಕುಸಿತದಿಂದಾಗಿ ರಸ್ತೆ ದಾಟಲಾಗದೆ ಸಿಲುಕಿಕೊಂಡಿದ್ದಾರೆ.  ಘಟನೆಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಚಮೋಲಿಯಲ್ಲಿ ಭೂಕುಸಿತದ ವಿಡಿಯೋ ವೈರಲ್ ಆಗಿದ್ದು, ಉತ್ತರಖಂಡದ ಪಾಗಲ್ ನಾಲಾದಲ್ಲಿ ನಿರಂತರ ಮಳೆಯಿಂದಾಗಿ ಪರ್ವತಗಳಿಂದ ಬಂಡೆಗಳು ರಸ್ತೆಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ರಸ್ತೆಗೆ ಬಿದ್ದ ಬಂಡೆಗಳಿಂದ ಅನೇಕ ವಾಹನಗಳು ಸಿಲುಕಿಕೊಂಡಿದ್ದರೂ ಇದು ಈ ಪ್ರದೇಶದ ಸಂಚಾರದ ಮೇಲೆ ಪರಿಣಾಮ ಬೀರಿದೆ.

ಮಾಹಿತಿಯ ಪ್ರಕಾರ, ಶೀಘ್ರದಲ್ಲೇ ರಸ್ತೆಯನ್ನು ತೆರವುಗೊಳಿಸಲು ಯಂತ್ರಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಕಳೆದ ವಾರ, ಉತ್ತರಾಖಂಡದ ಜೋಶಿಮಠ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿ NTPC ಯ ಸುರಂಗದ ಮೇಲೆ ಹೋಟೆಲ್ ಕುಸಿದಿತ್ತು. ಹೊಟೇಲಿನ ಒಂದು ದೊಡ್ಡ ಭಾಗ ಬಂಡೆಯ ಬದಿಯಲ್ಲಿ ಕುಸಿದು ಬಂಡೆಯ ಅಂಚಿನಲ್ಲಿ ಜಾರುತ್ತಿರುವುದು ಕಂಡುಬಂತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights