ಬಿಹಾರ ಚುನಾವಣೆ: ಫಲಿತಾಂಶಕ್ಕೂ ಮುನ್ನವೇ NDA ಸೋಲಿಗೆ ಕೊರೊನಾ ಕಾರಣ ಎಂದ JDU

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುದ್ದು, ನಿತೀಶ್‌ ಕುಮಾರ್‌ ನೇತೃತ್ವದ ಆಡಳಿತಾರೂಢ NDA ಮೈತ್ರಿ ಕೂಟ ಮತ್ತು ತೇಜಸ್ವಿ ಯಾದವ್‌ ನೇತೃತ್ವದ ಮಹಾಘಟಬಂಧನ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಮತ ಎಣಿಕೆ ಆರಂಭವಾದಾಗ ಮುನ್ನಡೆ ಸಾಧಿಸಿದ್ದ ಮಹಾಘಟಬಂಧನ್‌ ಈಗ ಹಿಂದೆ ಸರಿದಿದೆ.

ಈ ನಡುವೆ, ಮಹಾಘಟಬಂಧನ್‌ ಮುನ್ನಡೆ ಸಾಧಿಸಿದ್ದನ್ನು ಗಮನಿಸಿದ ಎನ್‌ಡಿಎ ಮುನ್ನಡೆಸುತ್ತಿರುವ ಜೆಡಿಯು ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಎನ್‌ಡಿಎ ಮೈತ್ರಿಯ ಸೋಲಿಗೆ ಕೊರೊನಾ ಸಾಂಕ್ರಾಮಿಕ ಕಾರಣ ಎಂದು ಹೇಳಿ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ.

‘ನಾವು ಜನರ ನಿರ್ಧಾರ ಸ್ವಾಗತಿಸುತ್ತೇವೆ. ನಾವು ತೇಜಸ್ವಿ ಯಾದವ್ ಅಥವಾ ಆರ್‌ಜೆಡಿಯಿಂದ ಸೋಲಲಿಲ್ಲ. ಆದರೆ ದೇಶಕ್ಕೆ ಅಂಟಿದ ಶಾಪದಿಂದ (ಕೋವಿಡ್) ಸೋತೆವು’ ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಅಂತೆಯೇ ‘ಬಿಹಾರದಲ್ಲಿ ಕಳೆದ 70 ವರ್ಷಗಳಿಂದ ಏನೆಲ್ಲಾ ಆಗಿತ್ತೋ ಅದಕ್ಕೆ ನಾವು ಬೆಲೆ ತೆತ್ತಿದ್ದೇವೆ. ಕೋವಿಡ್ ಕಾರಣದಿಂದ ನಾವು ಹಿನ್ನಡೆ ಅನುಭವಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಬೆಳಗ್ಗೆ ಮುನ್ನಡೆ ಸಾಧಿಸಿದ್ದ ಮಹಾಘಟಬಂದನ್‌ ಈಗ ಕೊಂಚ ಹಿನ್ನಡೆಯಾಗಿದೆ. ಎನ್‌ಡಿಎ ಮೈತ್ರಿಕೂಟವು 126 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್‌ 107 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.


ಇದನ್ನೂ ಓದಿ: ಉಪ ಚುನಾವಣೆ; ಗೆಲುವಿನ ಖಾತೆ ತೆರೆದ ಬಿಜೆಪಿ: ಮಣಿಪುರದ ಸಿಂಗಾಟ್‌ನಲ್ಲಿ BJP ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights