FACT CHECK | ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರಿಕೆಟ್ ಸ್ಟೇಡಿಯಂ ಎಂದು AIನಿಂದ ರಚಿಸಿದ ಫೋಟೊ ಹಂಚಿಕೆ

ಸಾಮಾಜಿಕ ಮಾಧ್ಯಮದಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ದೊಡ್ಡ ಕ್ರೀಡಾಂಗಣವನ್ನು ಕಾಣಬಹುದು. ಕೆಲವರು ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದು, ಇದು ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರಿಕೆಟ್ ಕ್ರೀಡಾಂಗಣದ ಫೋಟೋ ಎಂದು ಹೇಳುತ್ತಿದ್ದಾರೆ.

ಫೇಸ್‌ಬುಕ್ ಬಳಕೆದಾರರೊಬ್ಬರು ‘‘ರುದ್ರಪ್ರಯಾಗ್ ಸ್ಟೇಡಿಯಂ ಸಿದ್ಧವಾಗಿದೆ. ಈಗ ಏಕ್ತಾ ಬಿಶ್ತ್, ರಿಷಭ್ ಪಂತ್, ಆಯುಷ್ ಬದೋನಿ ಮತ್ತು ಅನುಜ್ ರಾವತ್ ಅವರಂತಹ ಕ್ರಿಕೆಟಿಗರು ರುದ್ರಪ್ರಯಾಗ್ ಕ್ರಿಕೆಟ್ ಪ್ರೇಮಿಗಳಾಗಿ ಹೊರಹೊಮ್ಮುತ್ತಾರೆ’’ ಎಂದು ಬರೆದುಕೊಂಡಿದ್ದಾರೆ.

ನೋಡಲು ಸುಂದರವಾಗಿ ಕಾಣುವ ಈ ಕ್ರೀಡಾಂಗಣದ ಫೋಟೋವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ, ನಿಜಕ್ಕೂ ರುದ್ರಪ್ರಯಾಗದಲ್ಲಿ ಈ ಕ್ರೀಡಾಂಗಣ ನಿರ್ಮಾನ ಆಗಿದೆಯೇ? ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ರುದ್ರಪ್ರಯಾಗ್ ಸ್ಟೇಡಿಯಂ ಸಿದ್ಧವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ಲೆನ್ಸ್ ಅನ್ನು ಬಳಸಿ ಸರ್ಚ್ ಮಾಡಿದಾಗ, ದೇವಭೂಮಿ ಉತ್ತರಾಖಂಡ್ ಎಂಬ ಹೆಸರಿನ ಫೇಸ್‌ಬುಕ್ ಪುಟದಲ್ಲಿ  ಡಿಸೆಂಬರ್ 17, 2024 ರಂದು ಹಂಚಿಕೊಂಡ ಪೋಸ್ಟ್‌ ಲಭ್ಯವಾಗಿದೆ. ಅದರ ಶೀರ್ಷಿಕೆ ಹೀಗಿದೆ, ‘‘ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಮತ್ತು ಇದು ಉತ್ತರಾಖಂಡದ ರುದ್ರಪ್ರಯಾಗ್ ಕ್ರಿಕೆಟ್ ಸ್ಟೇಡಿಯಂ ಎಂದು ವೈರಲ್ ಆಗಿದೆ.’’ ಎಂದು ಬರೆಯಲಾಗಿದೆ.

ಹಾಗೆಯೆ ಹಿಮಾಲಯನ್ ಹಿಂದೂ ಹೆಸರಿನ ಅಧಿಕೃತ ಎಕ್ಸ್​ ಹ್ಯಾಂಡಲ್‌ನಲ್ಲಿ ಇದೇ ವೈರಲ್ ಫೋಟೊ ಲಭ್ಯವಗಿದೆ. ಡಿಸೆಂಬರ್ 15, 2024 ರಂದು ಮಾಡಿದ ಪೋಸ್ಟ್‌ನಲ್ಲಿ, ‘‘ಈ ಫೋಟೋ ಉತ್ತರಾಖಂಡದಲ್ಲಿ ವೈರಲ್ ಆಗಿದೆ! ಈ ಕ್ರಿಕೆಟ್ ಸ್ಟೇಡಿಯಂ ರುದ್ರಪ್ರಯಾಗದಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು, ಇಂತಹ ಕ್ರೀಡಾಂಗಣ ಉತ್ತರಾಖಂಡದಲ್ಲಿ ಎಲ್ಲಿಯೂ ಇಲ್ಲ. ಈ ಸುಳ್ಳು ಚಿತ್ರವನ್ನು AI ಸಹಾಯದಿಂದ ರಚಿಸಲಾಗಿದೆ ಮತ್ತು ಇದು ಉತ್ತರಾಖಂಡದಿಂದ ವೈರಲ್ ಆಗಿದೆ” ಎಂದು ಬರೆಯಲಾಗಿದೆ.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು AI ಫೋಟೋವನ್ನು ಕಂಡುಹಿಡಿಯುವ ಮಲ್ಟಿಮೀಡಿಯಾ ಸ್ಕ್ಯಾನಿಂಗ್ ಉಪಕರಣಗಳ ಸಹಾಯದಿಂದ ಫೋಟೋಗಳನ್ನು ಪರಿಶೀಲನೆಗೆ decopy.ai ಉಪಕರಣಕ್ಕೆ ಅಪ್‌ಲೋಡ್ ಮಾಡಿದಾಗ, ಈ ಫೋಟೋವು AI ನಿಂದ ರಚಿತವಾಗಿರುವ ಸಾಧ್ಯತೆ ಶೇಕಡಾ 99.9 ರಷ್ಟಿದೆ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರೀಡಾಂಗಣದ ಮನೋಹರ ದೃಶ್ಯ ಎಂದು ಹೇಳುವ ಪೋಸ್ಟ್ ನಕಲಿಯಾಗಿದ್ದು, ರುದ್ರಪ್ರಯಾಗದಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾಂಗಣವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಯುರೋಪ್‌ನ 17 ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights