FACT CHECK | ಸಂವಿಧಾನ ರಚನೆ ಮಾಡುವಾಗ ಅಂಬೇಡ್ಕರ್ ಮದ್ಯ ಕುಡಿದಿದ್ದರು ಎಂದು ಹೇಳಿದ್ರಾ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್?
ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದ ವಿಚಾರ ದೇಶದಾದ್ಯಂತ ಭಾರಿ ಚರ್ಚೆಗೆ ಕರಣವಾಗಿತ್ತು. ಈ ಹಿನ್ನೆಲೆಯಲ್ಲಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಗೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಂವಿಧಾನ ರಚಿಸುವಾಗ ಅಂಬೇಡ್ಕರ್ ಅವರು ಕುಡಿದಿದ್ದರು ಎಂದು ಹೇಳುವ ಮೂಲಕ ಕೇಜ್ರಿವಾಲ್ ಅವರನ್ನು ಅವಮಾನಿಸಿದ್ದಾರೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
BR Ambedkar was drunk while writing the Constitution: @ArvindKejriwal
He should be Arrested
Share this maximum pic.twitter.com/QVmnLCK5dR
— Vibhor Anand(हिंसक हिंदू) (@AlphaVictorVA) December 22, 2024
ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ‘ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡುವಾಗ ಮದ್ಯ ಕುಡಿದಿದ್ದರು ಎನ್ನುವುದಾಗಿ ಅರವಿಂದ ಕೇಜ್ರಿವಾಲ್ ಅವರು ಹೇಳಿದ್ದಾರೆ’ ಎಂದು ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದನೆ ಮಾಡುತ್ತಿದ್ದಾರೆ. ಕೇಜ್ರಿವಾಲ್ ಅವರನ್ನು ಬಂಧಿಸಬೇಕು ಎಂದೂ ಕೆಲವರು ಒತ್ತಾಯಿಸುತ್ತಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ಗಳಲ್ಲಿ ಮಾಡುತ್ತಿರುವ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.
ಫ್ಯಾಕ್ಟ್‌ಚೆಕ್ :
ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಕುಡಿದಿದ್ದರು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆಯೇ ಎಂದು ಹೇಳಿರುವುದು ನಿಜವೇ ಎಂದು ಪರಿಶೀಲಿಸಿದಾಗ, ವೈರಲ್ ಪೋಸ್ಟ್‌ಗೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ, ವೈರಲ್ ವಿಡಿಯೋ 2012ರದ್ದು ಎಂಬ ಮಾಹಿತಿ ಲಭ್ಯವಾಗಿದೆ.
ವಿಡಿಯೋದಲ್ಲಿ ‘ಪಾಲಿಟಿಕ್ಸ್ ಪೇ ಚರ್ಚಾ’ ಎನ್ನುವ ಎಕ್ಸ್ ಖಾತೆಯ ವಾಟರ್ ಮಾರ್ಕ್ ಇದ್ದು, ಈ ಖಾತೆಯು ಈ ಹಿಂದೆಯೂ ಹಲವು ಬಾರಿ ತಪ್ಪು ಮಾಹಿತಿ ಹಂಚಿಕೊಂಡಿತ್ತು. ವಿಡಿಯೊಗೆ ಎಕ್ಸ್ ವೇದಿಕೆಯಲ್ಲಿ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ಅದು ಡಿಸೆಂಬರ್ 2012ರಲ್ಲಿ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವುದು ಲಭ್ಯವಾಗಿದೆ.

ವೈರಲ್ ವಿಡಿಯೊದೊಂದಿಗೆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಎಪಿ ರಾಜಸ್ಥಾನದ ವಕ್ತಾರ ದೇವೇಂದ್ರ ಯಾದವ್, ಇದು ಕೇಜ್ರಿವಾಲ್ ಭಾಷಣದ ಮೂಲ ಆವೃತ್ತಿ ಎಂದು ಹೇಳುವ ವಿಡಿಯೋವನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋಗೆ ಸಂಬಂಧಿಸಿದ ಮಾಹಿತಿ ಆಧಾರದಲ್ಲಿ ಕೀವರ್ಡ್ ಬಳಸಿಕೊಂಡು ಸರ್ಚ್ ಮಾಡಿದಾಗ, ಆಮ್ ಆದ್ಮಿ ಪಕ್ಷದ ಯೂಟ್ಯೂಬ್ ಚಾನೆಲ್‌ನಲ್ಲಿ ಡಿಸೆಂಬರ್ 3, 2012 ರಂದು ‘ಅರವಿಂದ್ ಕೇಜ್ರಿವಾಲ್ @ ರಾಜ್‌ಘಾಟ್’ ಶೀರ್ಷಿಕೆಯೊಂದಿಗೆ ಪ್ರಕಟಿಸಲಾದ ವಿಡಿಯೋ ಲಭ್ಯವಾಗಿದೆ.
ಅದರ ವಿವರಣೆಯ ಪ್ರಕಾರ, ನವೆಂಬರ್ 25, 2012 ರಂದು ರಾಜ್‌ಘಾಟ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಸಾರ್ವಜನಿಕ ಭಾಷಣ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದ, 4:38 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ಕೇಜ್ರಿವಾಲ್ ಕಾಂಗ್ರೆಸ್‌ನ ಸಂವಿಧಾನದ ಬಗ್ಗೆ ಅದೇ ಹೇಳಿಕೆಯನ್ನು ನೀಡುವುದನ್ನು ಕೇಳಬಹುದು.

ಫೆಬ್ರವರಿ 26, 2023 ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ‘ಸೇ ಚೀರ್ಸ್!’ ಎಂಬ ಶೀರ್ಷಿಕೆಯ ವರದಿಯನ್ನು ಪ್ರಕಟಸಿದ್ದು, ‘ತಮ್ಮ ಸದಸ್ಯರಿಗೆ ಮದ್ಯಪಾನ ಮಾಡಬಾರದು ಎಂಬ ಷರತ್ತನ್ನು ಕಾಂಗ್ರೆಸ್ ಎಳ್ಳು ನೀರು ಬಿಟ್ಟಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ವರದಿಯ ಪ್ರಕಾರ, ಕಾಂಗ್ರೆಸ್ ಪಕ್ಷವು ತನ್ನ ಸಂವಿಧಾನವನ್ನು ಪರಿಷ್ಕರಿಸಿತು, ಸದಸ್ಯರು ಮದ್ಯಪಾನದಿಂದ ದೂರವಿರುವುದನ್ನು ತೆಗೆದುಹಾಕಿತು. ಹೆಚ್ಚುವರಿಯಾಗಿ, ಪಕ್ಷವು ಜನಾದೇಶಕ್ಕಿಂತ ಹೆಚ್ಚಾಗಿ ಖಾದಿ ಧರಿಸುವುದನ್ನು ಆಯ್ಕೆ ಮಾಡಿದೆ. ಈ ಬದಲಾವಣೆಗಳನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಯ್‌ಪುರದಲ್ಲಿ ನಡೆದ ಎಐಸಿಸಿ ಪ್ಲೀನರಿಯಲ್ಲಿ ಘೋಷಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2012ರ ನವೆಂಬರ್ 25ರಂದು ಕೇಜ್ರಿವಾಲ್ ಮಾಡಿದ್ದ ಭಾಷಣವನ್ನು ಅದು ಒಳಗೊಂಡಿದೆ. ಎಎಪಿಯ ಸಂವಿಧಾನದ ಬಗ್ಗೆ ಮಾತನಾಡಿದ್ದ ಕೇಜ್ರಿವಾಲ್, ಅದು ಕಾಂಗ್ರೆಸ್ ಮತ್ತು ಬಿಜೆಪಿ ಸಂವಿಧಾನಗಳಿಗಿಂತ ಉತ್ತಮವಾಗಿದೆ ಎಂದಿದ್ದರು. ಕಾಂಗ್ರೆಸ್ ಸದಸ್ಯತ್ವ ಪಡೆಯಲು ಮದ್ಯ ಕುಡಿತ ತ್ಯಜಿಸಬೇಕು ಎಂದು ನಿಯಮ ಮಾಡಿರುವುದನ್ನು ಅವರು ವ್ಯಂಗ್ಯ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ಅಂಬೇಡ್ಕರ್ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ವಿಡಿಯೊ ಅನ್ನು ತಿರುಚಿರುವ ಕೆಲವರು, ಅದರ ಮೂಲಕ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ನ್ಯೂಸ್ ಮೀಟರ್ ಪ್ರಕಟಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಿರ್ಮಿಸಲಾದ ಕ್ರಿಕೆಟ್ ಸ್ಟೇಡಿಯಂ ಎಂದು AIನಿಂದ ರಚಿಸಿದ ಫೋಟೊ ಹಂಚಿಕೆ

