ಭಾರತದಲ್ಲಿ 47,905 ಹೊಸ ಕೊರೊನಾ ಕೇಸ್ : 550 ಸೋಂಕಿತರು ಸಾವು!
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 47,905 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಒಂದೇ ದಿನ 550 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಪ್ರಕಾರ 47,905 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು ಈವರೆಗೆ ಸೋಂಕಿತರ ಸಂಖ್ಯೆ 86,83,917 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 550 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 1,28,121 ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ 52,718 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಈವರೆಗೆ 80,64,548 ಜನ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 4,89,294 ಇವೆ.
ಭಾರತ ಬುಧವಾರ 44,281 ಹೊಸ ಕೊರೊನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 86,36,012 ಕ್ಕೆ ತಲುಪಿದೆ. ಕೋವಿಡ್ -19 ರ ಸಾವಿನ ಸಂಖ್ಯೆ 1,27,571 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 512 ಹೊಸ ಸಾವುನೋವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಬುಧವಾರ, ರಾಷ್ಟ್ರ ರಾಜಧಾನಿ 8,593 ಹೊಸ ಸೋಂಕುಗಳೊಂದಿಗೆ ಕೋವಿಡ್ ಪ್ರಕರಣಗಳಲ್ಲಿ ಅತಿ ಹೆಚ್ಚು ಏಕದಿನ ಹೆಚ್ಚಳವನ್ನು ದಾಖಲಿಸಿದೆ.

