FACT CHECK | ಸೌದಿ ಅರೇಬಿಯಾದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆಯೇ?
ಸೌದಿ ಅರೇಬಿಯಾ ದೇಶದಲ್ಲಿ ಮದ್ಯ ಮಾರಾಟಕ್ಕಿರುವ ನಿಷೇಧವನ್ನು ರದ್ದುಮಾಡಲಾಗಿದೆ ಎಂಬ ಹೇಳಿಕೆಯೊಂದು ವಾಟ್ಸಾಪ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
![]()
ವಾಟ್ಸಾಪ್ ನಲ್ಲಿಹರಿದಾಡುತ್ತಿರುವ ಮೆಸೇಜ್ ನಲ್ಲಿ “ಸೌದಿ ಅರೇಬಿಯಾ, ಮೆಕ್ಕಾ-ಮದೀನಾ ದೇಶಗಳ 600 ಸ್ಥಳಗಳಲ್ಲಿ ಮದ್ಯ ಲಭ್ಯವಿರುತ್ತದೆ, ಆರ್ಥಿಕತೆಯನ್ನು ಬಲಪಡಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದಿದೆ.
ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದು, ಈ ಪೋಸ್ಟ್ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೆಲವು ಕೀವರ್ಡ್ ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದ ವೇಳೆ ರಾಯಿಟರ್ಸ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ಈ ವರದಿಯನ್ನು 2025 ಮೇ 26ರಂದು ಪ್ರಕಟಿಸಲಾಗಿದೆ ಮತ್ತು ಮದ್ಯ ಮಾರಾಟ ಮತ್ತು ಖರೀದಿಯ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂಬ ಎಲ್ಲ ವರದಿಗಳನ್ನು ಸೌದಿ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿದೆ. ಆದರೆ ಆ ಸೌದಿ ಅಧಿಕಾರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿಲ್ಲ.
![]()
ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಸುದ್ದಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ವೈನ್ ಬ್ಲಾಗ್ ಪೋಸ್ಟ್ನಿಂದ ತೆಗೆದುಕೊಂಡಿವೆ ಮತ್ತು ಈ ಬ್ಲಾಗ್ನಲ್ಲಿ ಯಾವುದೇ ಮೂಲಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿ ಹೇಳಿದೆ.
ಇದನ್ನು ಮತ್ತಷ್ಟು ತನಿಖೆ ಮಾಡಲು ಅರಬ್ ಫ್ಯಾಕ್ಟ್ ಚೆಕಿಂಗ್ ನೆಟ್ವರ್ಕ್ (ಎಎಫ್ಸಿಎನ್) ನಲ್ಲಿ ಪರಿಶೀಲಿಸಿದಾಗ, 2024ರ ಡಿಸೆಂಬರ್ 17 ರಂದು ಪ್ರಕಟಿಸಲಾದ ದಿ ಗಾರ್ಡಿಯನ್ ವರದಿ ಲಭ್ಯವಾಗಿದೆ.
ತಮ್ಮ ಕಾನೂನುಗಳನ್ನು ಬದಲಾಯಿಸುವಂತೆ ಫೆಡರೇಶನ್ ಸ್ಥಳೀಯ ಸರ್ಕಾರಗಳನ್ನು ಒತ್ತಾಯಿಸುವುದಿಲ್ಲ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಸೋಸಿಯೇಷನ್ ಫುಟ್ಬಾಲ್ (ಫಿಫಾ) ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ. ಆದಾಗ್ಯೂ, “ಅಭಿಮಾನಿ ವಲಯಗಳು ಮತ್ತು ಹೋಟೆಲ್ ಬಗೆಗಿನ ನಿಲುವು ಪ್ರಸ್ತುತ ಈ ಹಂತದಲ್ಲಿ “ಹೆಚ್ಚು ಸ್ಪಷ್ಟವಾಗಿಲ್ಲ” ಎಂದು ಪತ್ರಿಕೆ ವರದಿ ಮಾಡಿದೆ, ವಿಶೇಷವಾಗಿ ಪಂದ್ಯಾವಳಿ ಇನ್ನೂ ಸುಮಾರು ಒಂದು ದಶಕದಷ್ಟು ದೂರದಲ್ಲಿರುವಾಗ”.
2025 ಫೆಬ್ರವರಿ 12ರಂದು ಎಲ್ ಬಿಸಿಯಲ್ಲಿ ಪ್ರಸಾರವಾದ ಯುಕೆಯ ಸೌದಿ ರಾಯಭಾರಿ ಪ್ರಿನ್ಸ್ ಖಾಲಿದ್ ಬಿನ್ ಬಂದರ್ ಅಲ್ ಸೌದ್ ಅವರ ಸಂದರ್ಶನದ ಲಿಂಕ್ ಅನ್ನು ಎಎಫ್ಸಿಎನ್ ಅವರಿಗೆ ಲಿಂಕ್ ಅನ್ನು ಕಳುಹಿಸಿದೆ. ಈ ಸಂದರ್ಶನದ 8 ನಿಮಿಷ 28 ಸೆಕೆಂಡುಗಳಲ್ಲಿ, ಸೌದಿ ರಾಯಭಾರಿ ಅವರು “ಮದ್ಯಪಾನವನ್ನು ಅನುಮತಿಸಲಾಗುವುದಿಲ್ಲ” ಎಂದು ಹೇಳುವುದನ್ನು ಕೇಳಬಹುದು. “ಆದರೆ ನಿಮಗೆ ತಿಳಿದಿರುವಂತೆ, ಅದು ಇಲ್ಲದೆಯೂ ತುಂಬಾ ಖುಷಿ ಅನುಭವಿಸಬಹುದು” ಎಂದು ಅವರು ಹೇಳುತ್ತಿರುವುದು ಸಹ ಕೇಳಿಸುತ್ತದೆ. ಅದರ ಅಗತ್ಯವೇ ಇಲ್ಲ. ಮತ್ತು ನೀವು ನಿರ್ಗಮನದ ಸಮಯದಲ್ಲಿ ಅಥವಾ ನಂತರ ಕುಡಿಯಲು ಬಯಸಿದರೆ, ಅದು ಒಳ್ಳೆಯದು. ಆದರೆ ಇದೀಗ, ನಾವು ಮದ್ಯವನ್ನು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ “ಸೌದಿ ವಿಶ್ವಕಪ್ 2034” ವೆಬ್ಸೈಟ್ ಅನ್ನು ಇಮೇಲ್ ಮೂಲಕ ಮತ್ತು ಸೌದಿ ಕ್ರೀಡಾ ಸಚಿವಾಲಯದ ಗ್ರಾಹಕ ಸೇವೆಯನ್ನು , ಎಎಫ್ಸಿಎನ್ ಸಂಪರ್ಕಿಸಿದೆ. ಈ ಲೇಖನವನ್ನು ಬರೆಯುವ ಸಮಯದವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿಲ್ಲ, ಉತ್ತರವನ್ನು ಸ್ವೀಕರಿಸಿದ ಕೂಡಲೇ ಈ ಲೇಖನವನ್ನು ಪರಿಷ್ಕರಿಸಲಾಗುವುದು ಎಂದು ನ್ಯೂಸ್ ಚೆಕರ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸೌದಿ ಅರೇಬಿಯಾದಲ್ಲಿ ಮದ್ಯದ ಮೇಲಿನ ನಿಷೇಧವನ್ನು ತೆಗೆದುಹಾಕುವ ಹೇಳಿಕೆ ಆಧಾರರಹಿತವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಮಯದಲ್ಲಿ ಸೌದಿ ಸರ್ಕಾರವು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ರೈಲೊಂದು ಹಳಿತಪ್ಪಿ ಸೇತುವೆಯಿಂದ ನದಿಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು AI ವಿಡಿಯೋ ಹಂಚಿಕೆ

