FACT CHECK | ನಾನು ಬಿಜೆಪಿ ಸೇರಿ, ಮೋದಿಯನ್ನು ಬೆಂಬಲಿಸಿ ತಪ್ಪು ಮಾಡ್ಬಿಟ್ಟೆ ಅಂದ್ರಾ ಲಡಾಖ್‌ನ ಸಂಸದ?

“ಬಿಜೆಪಿಗೆ ಸೇರಿ ಮತ್ತು ನರೇಂದ್ರ ಮೋದಿಯನ್ನು ಬೆಂಬಲಿಸಿದ್ದು ನನ್ನ ಕೆಟ್ಟ ನಿರ್ಧಾರವಾಗಿತ್ತು. ಅವರ ತಂತ್ರಗಳ ಬಗ್ಗೆ ನನಗೆ ತಿಳಿದಿರಲಿಲ್ಲ, ಲಡಾಖ್‌ನ ಜನರು ದಯವಿಟ್ಟು ನನ್ನನ್ನು ಕ್ಷಮಿಸಿ.” – ಜಮ್ಯಾಂಗ್ ತ್ಸೆರಿಂಗ್ (ಲಡಾಖ್‌ನಿಂದ ಬಿಜೆಪಿ ಹಾಲಿ ಸಂಸದ)”. ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಹಾಗೆಯೇ ಹಲವು ಫೇಸ್‌ಬುಕ್ ಬಳಕೆದಾರರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ” ಬಿಜೆಪಿಗೆ ಸೇರುವುದು ಮತ್ತು ಮೋದಿಯನ್ನು ಬೆಂಬಲಿಸುವುದು ನನ್ನ ಕೆಟ್ಟ ನಿರ್ಧಾರ, ಅವರ ತಂತ್ರಗಳ ಬಗ್ಗೆ ನನಗೆ ತಿಳಿದಿರಲಿಲ್ಲ, ಲಡಾಖ್‌ನ ಜನರು ದಯವಿಟ್ಟು ನನ್ನನ್ನು ಕ್ಷಮಿಸಿ. – ಜಮ್ಯಾಂಗ್ ತ್ಸೆರಿಂಗ್” (ಲಡಾಖ್‌ನ ಬಿಜೆಪಿ ಸಂಸದ) ಅವರು ತಮ್ಮ ತಪ್ಪನ್ನು ಅರಿತುಕೊಂಡಿದ್ದಾರೆ, ಅಲ್ಲವೇ? ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನುಹಂಚಿಕೊಂಡಿದ್ದಾರೆ.

ಭಾರತೀಯ ಜನತಾ ಪಕ್ಷವು ಹಾಲಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರನ್ನು ಬದಿಗಿಟ್ಟು, ಏಪ್ರಿಲ್ 23 ರಂದು ತನ್ನ ಲಡಾಖ್ ಅಭ್ಯರ್ಥಿಯಾಗಿ ತಾಶಿ ಗ್ಯಾಲ್ಸನ್ ಅವರನ್ನು ಘೋಷಿಸಿತು, . ಈ ಬೆಳವಣಿಗೆಗಳಿಂದ ಬೇಸರಗೊಂಡಿರುವ ಹಾಲಿ ಸಂಸದ ನಮ್ಗ್ಯಾಲ್ ಅವರು ಪಕ್ಷದ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ 2024ರ ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ್ದಕ್ಕೆ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಲಡಾಖ್‌ನ ಹಾಲಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡದ ಕಾರಣಕ್ಕೆ ಪಕ್ಷದ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ, ಅಂತಹ ಯಾವುದೇ ಹೇಳಿಕೆ ನೀಡಿರುವ ಮಾಹಿತಿ ಲಭ್ಯವಾಗಿಲ್ಲ.

ಬಿಜೆಪಿಯ ಸಚಿವರೊಬ್ಬರು ಇಂತಹ ಹೇಳಿಕೆ ನೀಡಿದರೆ ತಕ್ಷಣ ಸುದ್ದಿಯಾಗುತ್ತದೆ.  ಜಮ್ಯಾಂಗ್ ತ್ಸೆರಿಂಗ್ ಅವರ ಉಮೇದುವಾರಿಕೆಯ ಬಗ್ಗೆ Google ನಲ್ಲಿ ಮತ್ತಷ್ಟು ಸರ್ಚ್ ಮಾಡಿದಾಗ,24 ಏಪ್ರಿಲ್, 2024 ರ News18 JKLH ನ ಅಧಿಕೃತ ಚಾನೆಲ್‌ನಲ್ಲಿ ಪ್ರಕಟವಾದ YouTube  ವಿಡಿಯೋ ಲಭ್ಯವಾಗಿದೆ.

2024ರ ಲೋಕಸಭಾ ಚುನಾವಣೆಗೆ ತಮಗೆ ಪಕ್ಷದಿದಂದ ಈ ಬಾರಿ ಟಿಕೆಟ್ ಸಿಗದಿದಕ್ಕೆ ಬೇಸರ ವ್ಯಕ್ತವಡಿಸಿರುವ ಅವರು ಹೈಕಮಾಂಡ್ ನಿರ್ಧಾರದ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.ಇದು ತಮ್ಮಂತಹ ನಿಷ್ಠಾವಂತ ಪಕ್ಷದ ಸದಸ್ಯರಿಗೆ “ಅನ್ಯಾಯ” ಎಂದು ಹೇಳಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸಿದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಎಲ್ಲಿಯೂ ಪಕ್ಷದ ಅಥವಾ ಪ್ರಧಾನಿಯ ವಿರುದ್ದ ಹೇಳಿಕೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್ ಅವರ ಅಧಿಕೃತ ಎಕ್ಸ್‌ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾದ ಟ್ವೀಟ್ ಅನ್ನು ಪರಿಶೀಲಿಸಿದಾಗ, ವೈರಲ್ ಪೋಸ್ಟ್ ಅನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನದು ಎಂದು ಉಲ್ಲೇಖಿಸಿರುವ ಹೇಳಿಕೆಯನ್ನು ತಾನು ಎಂದಿಗೂ ಹೇಳಿಲ್ಲ ಮತ್ತು ಅದು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕಾಗಿ ಲಡಾಖ್ ಹಾಲಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ನಾನು ಬಿಜೆಪಿ ಸೇರಿ, ಮೋದಿಯನ್ನು ಬೆಂಬಲಿಸಿ ತಪ್ಪು ಮಾಡಿದೆ ಎಂದು ಹೇಳಿದ್ದಾರೆ ಎಂಬುದು ಸುಳ್ಳು. ಈ ಹೇಳಿಕೆಯನ್ನು ಅವರು ಎಂದಿಗೂ ನೀಡಿಲ್ಲ ಎಂದು ಸ್ವತಃ ಅವರೇ  ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೃತ ನೇಹ ಹಿರೇಮಠ್ ಮನೆಗೆ ಒಬ್ಬೆ ಒಬ್ಬ ಕಾಂಗ್ರೆಸ್‌ ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights