ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ಸ್ಪೋಟಕ ಹೇಳಿಕೆ…!
7 ಜನ ಸಚಿವ ಸ್ಥಾನ ಪಡೆದಾಗಿನಿಂದಲೂ ಬಿಜೆಪಿಯಲ್ಲಿ ಅಸಮಧಾನದ ಹೊಗೆ ಭುಗಿಲೆದ್ದಿದೆ. ಈ ಮಧ್ಯೆ ಬಸನಗೌಡ ಯತ್ನಾಳ್ ಮತ್ತೊಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಹೌದು.. ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಶಾಸಕರ ರೇಣುಕಾಚಾರ್ಯ, ಹೆಚ್ ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಬಸನಗೌಡ ಯತ್ನಾಳ್ ‘ಸಿಡಿ ಕೋಟಾದಲ್ಲಿ ಕೆಲವರಿಗೆ ಸಚಿವ ಸ್ಥಾನ ಕೊಡಲಾಗಿದೆ. ಈ ಸಿಡಿ ಕೇವಲ ಭ್ರಷ್ಟಾಚಾರದ ಸಿಡಿ ಅಲ್ಲ. ನೋಡಲು ಆಗದಂತಹ ಸಿಡಿಯಾಗಿದೆ. ಈ ಸಿಡಿಯ ಹೆದರಿಕೆಯಿಂದ ಸಿಎಂ ಯಡಿಯೂರಪ್ಪ ಕೆಲವರಿಗೆ ಮಣೆ ಹಾಕಿದ್ದಾರೆ’ ಎಂದು ಆರೋಪಿಸಿದ್ದಾರೆ.
” ನನ್ನ ಬಳಿ ಮೂರು ಜನ ಬಂದಿದ್ರು. ಅವರಲ್ಲಿ ಸಿಡಿ ಇದೆ. ಅದು ಕೇವಲ ಭ್ರಷ್ಟಾಚಾರದ ಸಿಡಿ ಅಲ್ಲ ನೋಡಲು ಆಗದಂತಹ ಸಿಡಿಯಾಗಿದೆ. ಕಾಂಗ್ರೆಸ್ ನಾಯಕರಲ್ಲೂ ಆ ಸಿಡಿ ಇದೆ. ಯಡಿಯೂರಪ್ಪ, ವಿಜೆಯೇಂದ್ರನೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಸಿಡಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ನೈತಿಕತೆ ಇದ್ದರೆ ಸಿಡಿ ಬಿಡುಗಡೆ ಮಾಡಲಿ. ನಿಮಗೆ ಯಡಿಯೂರಪ್ಪನವರ ಜೊತೆಗೆ ಅಜ್ಜೆಸ್ಟ್ ಮೆಂಟ್ ಇರದೇ ಹೋದರೆ ಸಿಡಿ ಬಿಡುಗಡೆ ಮಾಡಿ ಎಂದು ಬಸನಗೌಡ ಯತ್ನಾಳ್ ಎಂದು ಸವಾಲು ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಕೆ.ಜೆ ಜಾರ್ಚ್, ಜಮೀರ್ ಅಹ್ಮದ್ ನಿಮ್ಮೊಂದಿಗೆ ಸಿಎಂ ಯಡಿಯೂರಪ್ಪ ಹಾಗೂ ವಿಜೆಯೇಂದ್ರನ ಅಜ್ಜೆಸ್ಟ್ ಮೆಂಟ್ ಇಲ್ಲ ಅಂದ್ರೆ ಸಿಡಿ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ. ಸಿಡಿ ಇಟ್ಟುಕೊಂಡು ಆಟ ಆಡ್ತಾಯಿದ್ದಾರೆ ಎಂದು ಯತ್ನಾಳ ಕಿಡಿ ಕಾರಿದ್ದಾರೆ.
ನಾನು ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ರಾಜಕಾರಣ ಮಾಡುವಂತ ವ್ಯಕ್ತಿಯಲ್ಲ. ನನ್ನ ಬಳಿ ಮೂರು ಜನ ಬಂದಿದ್ದರು. ಅವರ ಬಿಳಿ ಸಿಡಿ ಇದೆ. ಅದನ್ನು ತೋರಿಸಿ ಸಚಿವರಾಗಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.

