ಜಲ್ಲಿಕಟ್ಟು ಕ್ರೀಡೆ: ತಮಿಳುನಾಡಿನಲ್ಲಿ ‘ಗೋ ಬ್ಯಾಕ್‌ ರಾಹುಲ್‌ಗಾಂಧಿ’ ಟ್ರೆಂಡ್!

ತಮಿಳುನಾಡಿದಲ್ಲಿ ಪೊಂಗಲ್‌ ಹಬ್ಬ ಮತ್ತು ಜಲ್ಲಿಕಟ್ಟು ಸಂಭ್ರಮ ನಡೆಯುತ್ತಿದೆ. ಇಂದು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಜಲ್ಲಿಕಟ್ಟು ವೀಕ್ಷಣೆಗಾಗಿ ಮಧುರೈಗೆ ತೆರಳಿದ್ದಾರೆ. ಈ ಬೆನ್ನಲ್ಲೇ ತಮಿಳುನಾಡಿನಲ್ಲಿ ಗೋ ಬ್ಯಾಕ್‌ ರಾಹುಲ್‌ಗಾಂಧಿ ಟ್ವಿಟ್ಟರ್‌ನಲ್ಲಿ ಟ್ರೆಂಟ್‌ ಅಗುತ್ತಿದೆ.

ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸುವ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬದಂದು ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಯುತ್ತಿದೆ. ಮಧುರೈನ ಅವನಿಯಪುರಂನಲ್ಲಿ ಭರ್ಜರಿಯಾಗಿ ಜಲ್ಲಿಕಟ್ಟು ನಡೆಯುತ್ತಿದ್ದು, ರಾಹುಲ್ ಗಾಂಧಿ, ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಕೂಡ ಕ್ರೀಡೆಯ ವಿಕ್ಷಣೆಯಲ್ಲಿ ಭಾಗಿಯಾಗಿದ್ದಾರೆ.

ಅವರು ಭಾಗಿಯಾಗಿರುವ ಬೆನ್ನಲ್ಲೇ ಟ್ವಿಟರ್‌ನಲ್ಲಿ ನೆಟ್ಟಿಗರು ರಾಹುಲ್ ಗಾಂಧಿ ಹಾಗೂ ಡಿಎಂಕೆ ವಿರುದ್ಧ ಸಿಡಿದಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮತ್ತು ಮೈತ್ರಿ ಪಕ್ಷ ಡಿಎಂಕೆ ಸೇರಿ ರಾಜ್ಯದ ಜಲ್ಲಿಕಟ್ಟು ಕ್ರೀಡೆಯ ಮೇಲೆ ನಿಷೇಧ ಹೇರಿದ್ದವು. ನಂತರದಲ್ಲಿ, ಎಐಎಡಿಎಂ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಿ, ಕ್ರೀಡೆಗೆ ಅವಕಾಶ ನೀಡಿತ್ತು.

ಈ ಹಿನ್ನೆಲೆಯಲ್ಲಿ, ಅಂದು ಕ್ರೀಡೆಗೆ ನಿಷೇಧ ಹೇರಿದ್ದವು ಇಂದು ಕ್ರೀಡೆಯ ವೀಕ್ಷಣೆಗೆ ಆಗಮಿಸಿದ್ದಾರೆ. ಅವರು ಬರುವ ಅಗತ್ಯವಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

https://twitter.com/Bala_Alagai/status/1349576654914347008?s=20

ಇನ್ನೊಂದೆಡೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಕೂಡಾ ಜಲ್ಲಿಕಟ್ಟು ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿದ್ದು, ಬಿಜೆಪಿ ವತಿಯಿಂದ ‘ನಮ್ಮ ಊರು ಪೊಂಗಲ್’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳಿಗೆ ಜಲ್ಲಿಕಲ್ಲು ಕ್ರೀಡೆ ಕೂಡಾ ರಾಜಕೀಯ ಅಖಾಡವಾಗಿ ಪರಿವರ್ತನೆಯಾಗಿದೆ.

ಜಲ್ಲಿಕಟ್ಟು ಕಾರ್ಯಕ್ರಮ ವೀಕ್ಷಣೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಆಗಮಿಸಲಿ, ಆದ್ರೆ ರಾಹುಲ್ ವಾಪಸ್ ಹೋಗಲಿ ಎಂದು ನೆಟ್ಟಿಗರು ಹೇಳಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದ ‘ಕಿಸಾನ್ ಆಂಥೆಮ್’ ಹಾಡು 2 ಕೋಟಿ ವೀಕ್ಷಣೆ; ಗೀತೆ ರಚನಾಕಾರನ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights